Featured
ಸ್ಮೃತಿ ಮಂದಾನ ತಂದೆ, ಭಾವಿ ಪತಿ ಆಸ್ಪತ್ರೆಗೆ ದಾಖಲು: ಮದುವೆ ಮುಂದೂಡಿಕೆ?
ಭಾರತ ತಂಡದ ಸ್ಟಾರ್ ಆಟಗಾರ್ತಿ ಸ್ಮೃತಿ ಮಂದಾನ ತಂದೆ ಮದುವೆ ಸಮಾರಂಭದಲ್ಲಿ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾದ ಬೆನ್ನಲ್ಲೇ ವರ ಹಾಗೂ ಪ್ರಿಯಕರ ಪಾಲಾಷ್ ಮುಚ್ಚಲ್ ಕೂಡ ಆಸ್ಪತ್ರೆಗೆ ದಾಖಲಾಗಿದ್ದಾರೆ. ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ಒಂದು ವಾರದ ಮದುವೆ ಕಾರ್ಯಕ್ರಮಗಳು ನಡೆಯುತ್ತಿದ್ದು, ಭಾನುವಾರ ತಡರಾತ್ರಿ ಈ ಘಟನೆ ನಡೆದಿರುವುದು ಕುಟುಂಬಕ್ಕೆ ಆಘಾತ ನೀಡಿದೆ. ಸ್ಮೃತಿ ಮಂದಾನ ಇನ್ ಸ್ಟಾಗ್ರಾಂನಲ್ಲಿ ಮದುವೆಗೆ ಸಂಬಂಧಿಸಿದ ಎಲ್ಲಾ ಪೋಸ್ಟ್ ಗಳನ್ನು ಡಿಲಿಟ್ ಮಾಡಿದ್ದು, ಮದುವೆ ಮುಂದೂಡಿಕೆ ಆಗುವ
ಶಿಡ್ಲಘಟ್ಟ ಮಿನಿ ವಿಧಾನಸೌಧಕ್ಕಾಗಿ ಅನುದಾನ: ಸಿಎಂ ಭರವಸೆ
ಶಿಡ್ಲಘಟ್ಟಕ್ಕೆ ಮಿನಿ ವಿಧಾನಸೌಧ ಬೇಕು ಎನ್ನುವುದೂ ಸೇರಿದಂತೆ ಇನ್ನೂ ಹೆಚ್ಚಿನ ಅಭಿವೃದ್ಧಿ ಕಾಮಗಾರಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವರಾದ ಎಂ.ಸಿ.ಸುಧಾಕರ್ ಮತ್ತು ಕ್ಷೇತ್ರದ ಶಾಸಕರು ಬೇಡಿಕೆ ಇಟ್ಟಿದ್ದಾರೆ. ಸಚಿವರ ಮನವಿಯಂತೆ ಎಲ್ಲಾ ಕಾಮಗಾರಿಗಳಿಗೂ ಅನುದಾನ ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.
2ನೇ ಟೆಸ್ಟ್: ಜಾನ್ಸೆನ್ ದಾಳಿಗೆ ಭಾರತ 201 ರನ್ ಗೆ ಆಲೌಟ್
ಗುವಾಹತಿ: ಮಧ್ಯಮ ವೇಗಿ ಮಾರ್ಕೊ ಜಾನ್ಸೆನ್ ಮಾರಕ ದಾಳಿಗೆ ತತ್ತರಿಸಿದ ಭಾರತ ತಂಡ ಎರಡನೇ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್ ನಲ್ಲಿ 201 ರನ್ ಗಳ ಅಲ್ಪ ಮೊತ್ತಕ್ಕೆ ಕುಸಿದಿದೆ. ಗುವಾಹತಿಯಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದ ಮೂರನೇ ದಿನವಾದ ಸೋಮವಾರ
ಬೆಂಗಳೂರಿನಲ್ಲಿ ಸ್ನೇಹಿತನಿಂದ ಕೊಲೆಯಾದ ಆಂಧ್ರದ ಯುವತಿ
ಬೆಂಗಳೂರು ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ತಮ್ಮೇನಹಳ್ಳಿಯಲ್ಲಿ ಆಂಧ್ರಪ್ರದೇಶದ ಬಿಬಿಎಂ ವಿದ್ಯಾರ್ಥಿನಿಯೊಬ್ಬಳನ್ನು ಆಕೆಯ ಸ್ನೇಹಿತನೇ ಕೊಲೆ ಮಾಡಿದ್ದಾನೆ. ದೇವಿಶ್ರೀ(21) ಕೊಲೆಯಾದ ಯುವತಿ ಎಂದು ಗುರುತಿಸಲಾಗಿದೆ. ಅನ್ನಮಯ್ಯ ಜಿಲ್ಲೆಯ ಬಿಕ್ಕಿಂವರೀಪಲ್ಲಿ ಗ್ರಾಮದ ನಿವಾಸಿಯಾಗಿರುವ ದೇವಿಶ್ರೀ ಕಳೆದ ಮೂರು ವರ್ಷಗಳಿಂದ ಬೆಂಗಳೂರಿನಲ್ಲಿ ವ್ಯಾಸಂಗ ಮಾಡುತ್ತಿದ್ದಳು.
2 ಬಸ್ಸುಗಳ ಭೀಕರ ಅಪಘಾತ 6 ಸಾವು, 32 ಮಂದಿಗೆ ಗಾಯ
ಎರಡು ಬಸ್ ಗಳ ನಡುವೆ ಮುಖಾಮುಖಿ ಸಂಭವಿಸಿದ ಭೀಕರ ಅಪಘಾತದಲ್ಲಿ 6 ಮಂದಿ ಮೃತಪಟ್ಟು 32 ಮಂದಿ ಗಾಯಗೊಂಡಿರುವ ಘಟನೆ ತಮಿಳುನಾಡಿನಲ್ಲಿ ಸಂಭವಿಸಿದೆ. ತೆನ್ ಕಾಶಿ ಬಳಿಯ ಇಡೈಕಲ್ ಬಳಿ ಸೋಮವಾರ ಬೆಳಿಗ್ಗೆ ಈ ದುರಂತ ಸಂಭವಿಸಿದೆ. ಗಾಯಗೊಂಡ 32 ಮಂದಿಯನ್ನು
ಆನ್ ಲೈನ್ ನಲ್ಲಿ ಅಧಿಕ ಲಾಭದ ಆಮೀಷವೊಡ್ಡಿ ಉದ್ಯಮಿಗೆ 46.50 ಲಕ್ಷ ರೂ. ವಂಚನೆ: ನಾಲ್ವರು ಬ್ಯಾಂಕ್ ಸಿಬ್ಬಂದಿ ಅರೆಸ್ಟ್
ಫಾರೆಕ್ಸ್ ಟ್ರೇಡಿಂಗ್ ಅಪ್ಲಿಕೇಶನ್ ಮೂಲಕ ಆನ್‌ಲೈನ್‌ನಲ್ಲಿ ಅತಿ ಹೆಚ್ಚು ಲಾಭ ಮಾಡಿಕೊಡುವುದಾಗಿ ಉದ್ಯಮಿಗೆ 46.5 ಲಕ್ಷ ರೂ. ವಂಚಿಸಿದ ಬ್ಯಾಂಕ್ ಮ್ಯಾನೇಜರ್ ಸೇರಿ ನಾಲ್ವರನ್ನು ಉತ್ತರ ಕನ್ನಡದ ಸಿಇಎನ್ ಪೊಲೀಸರು ಬಂಧಿಸಿದ್ದಾರೆ. ಹೊನ್ನಾವರದ ಪ್ರಭಾತನಗರದ ನಿವಾಸಿ ಗಿರೀಶ್ (35) ಫೇಸ್‌ಬುಕ್‌ನಲ್ಲಿ ಟ್ರೇಡಿಂಗ್
ಕಾಳಿಂಗ ಸರ್ಪಗಳನ್ನು ಹಿಡಿದು ಸುರಕ್ಷಿತವಾಗಿ ಅರಣ್ಯಕ್ಕೆ ಬಿಡಲು ತಂಡ ನೇಮಕ: ಸಚಿವ ಈಶ್ವರ ಖಂಡ್ರೆ
ಮಲೆನಾಡು ಭಾಗದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುವ ಕಾಳಿಂಗ ಸರ್ಪವನ್ನು ಸೆರೆ ಹಿಡಿದು ಸುರಕ್ಷಿತವಾಗಿ ಅರಣ್ಯದೊಳಗೆ ಬಿಡಲು ವಿಶೇಷ ತಂಡವನ್ನು ರಚಿಸುವಂತೆ ಸಚಿವ ಈಶ್ವರ್ ಖಂಡ್ರೆ ಅರಣ್ಯ ಇಲಾಖೆಗೆ ಸೂಚನೆ ನೀಡಿದ್ದಾರೆ. ಚಿಕ್ಕಮಗಳೂರಿನ ಅಜ್ಜಂಪುರದಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅರಣ್ಯ ಸಚಿವ ಈಶ್ವರ ಖಂಡ್ರೆ,
ಬಾಲಿವುಡ್ ನಟ ಧರ್ಮೇಂದ್ರ ಇನ್ನಿಲ್ಲ
ಬಾಲಿವುಡ್‍ನ ಹೆಸರಾಂತ ನಟ ಧರ್ಮೇಂದ್ರ ನಿಧನರಾದರು. ಅವರಿಗೆ 89 ವರ್ಷವಾಗಿತ್ತು. ಧರ್ಮೇಂದ್ರ ಅನಾರೋಗ್ಯ ಪೀಡಿತರಾಗಿ ಮುಂಬೈನ ಬ್ರೀಜ್ ಕ್ಯಾಂಡಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಇತ್ತೀಚೆಗೆ ಮನೆಗೆ ಹಿಂದಿರುಗಿದ್ದರು, ಆದರೂ ಅವರ ಆರೋಗ್ಯದಲ್ಲಿ ಚೇತರಿಕೆಯಾಗದೆ ಇಂದು ಮಧ್ಯಾಹ್ನ ಮೃತಪಟ್ಟಿದ್ದಾರೆ. ಅವರ ಅಂತ್ಯಕ್ರಿಯೆ ಪವನ್
BREAKING ಬಾಲಿವುಡ್ ಹೀಮ್ಯಾನ್ ಖ್ಯಾತಿಯ ಹಿರಿಯ ನಟ ಧರ್ಮೆಂದ್ರ ಇನ್ನಿಲ್ಲ
ಮುಂಬೈ: ಅನಾರೋಗ್ಯದಿಂದ ಚೇತರಿಸಿಕೊಂಡಿದ್ದ ಬಾಲಿವುಡ್ ಹಿರಿಯ ನಟ ಧರ್ಮೆಂದ್ರ ನಿಧನರಾಗಿದ್ದಾರೆ. ಅವರಿಗೆ 89 ವರ್ಷ ವಯಸ್ಸಾಗಿತ್ತು. ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದ ಧರ್ಮೆಂದ್ರ ಅವರನ್ನು ಮುಂಬೈನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ನಂತರ ಚೇತರಿಸಿಕೊಂಡು ಮರಳಿದ್ದ ಧರ್ಮೆಂದ್ರ ಅವರ ಆರೋಗ್ಯ ಸ್ಥಿತಿ
ಪಾಕ್ ಅರಸೇನಾಪಡೆ ಕಚೇರಿ ಮೇಲೆ ಆತ್ಮಾಹುತಿ ಬಾಂಬ್ ದಾಳಿ: ಆರು ಸಾವು
ಪಾಕಿಸ್ತಾನದ ಪೇಶಾವರದಲ್ಲಿರುವ ಅರೆಸೇನಾ ಪಡೆಯ ಪ್ರಧಾನ ಕಚೇರಿಯ ಮೇಲೆ ಆತ್ಮಾಹುತಿ ಬಾಂಬ್ ದಾಳಿ ನಡೆದಿದ್ದು, ದಾಳಿ ಹಾಗೂ ನಂತರದ ಕಾರ್ಯಾಚರಣೆಯಲ್ಲಿ ಒಟ್ಟು 6 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ದಾಳಿಯಲ್ಲಿ ಅಸು ನೀಗಿದವರಲ್ಲಿ ಮೂವರು ಉಗ್ರರು ಹಾಗೂ ಮೂವರು ಭದ್ರತಾ ಸಿಬ್ಬಂದಿ ಸೇರಿದ್ದಾರೆ. ಪ್ಯಾರಾಮಿಲಿಟರಿ




