Featured
ಆಧಾರ್ ಇದ್ದರೆ ನುಸುಳುಕೋರರನ್ನೂ ಮತದಾರರೆಂದು ಪರಿಗಣಿಸಬೇಕೇ: ಸುಪ್ರೀಂ ಪ್ರಶ್ನೆ
ಆಧಾರ್ ಹೊಂದಿದ್ದಾರೆ ಎಂದ ಮಾತ್ರಕ್ಕೆ ನುಸುಳುಕೋರರನ್ನೂ ದೇಶದ ಮತದಾರರೆಂದು ಪರಿಗಣಿಸಬೇಕೇ ಎಂದು ಸುಪ್ರೀಂಕೋರ್ಟ್ ಪ್ರಶ್ನಿಸಿದೆ. ಮತದಾರರ ಪಟ್ಟಿ ತೀವ್ರ ಪರಿಷ್ಕರಣೆ ವಿರೋಧಿಸಿ ಹಲವು ಅರ್ಜಿಗಳು ಸುಪ್ರೀಂಕೋರ್ಟ್‌ಗೆ ಸಲ್ಲಿಕೆಯಾಗಿವೆ. ಈ ಸಂಬಂಧ ಹಿರಿಯ ವಕೀಲ ಕಪಿಲ್ ಸಿಬಲ್, ಎಲ್ಲರ ಬಳಿ ಆಧಾರ್ ಕಾರ್ಡ್ ಇದೆಯಲ್ಲಾ, ಅದರಲ್ಲೇ ಜನ್ಮ ದಿನಾಂಕ ಎಲ್ಲವೂ ಇದೆ, 18 ವರ್ಷ ಮೇಲ್ಪಟ್ಟವರು ಅಲ್ಲವೋ ಹೌದೋ ಎಂದು ಪರಿಗಣಿಸಲು ಅಷ್ಟು ಸಾಕಲ್ಲವೇ ಎನ್ನುವ ಪ್ರಶ್ನೆಗೆ ಪೀಠ ಹೀಗೆ ಉತ್ತರಿಸಿದೆ.
ಸೂಟ್‌ಕೇಸ್‌ನಲ್ಲಿ ಥಾಣೆಯ ಯುವತಿ ಶವ: ಲಿವ್ಇನ್ ಪಾರ್ಟ್‌ನರ್ ಅರೆಸ್ಟ್
ಥಾಣೆಯ ದೇಸಾಯಿ ಗ್ರಾಮದಲ್ಲಿ ತೊರೆಯೊಂದರ ಸಮೀಪ ಸೂಟ್‌ಕೇಸ್‌ನಲ್ಲಿ ಯುವತಿಯ ಶವ ಪತ್ತೆಯಾಗಿದ್ದು, ಅವರನ್ನು ಕೊಲೆ ಮಾಡಿದ ಆರೋಪದಡಿ ಲಿವ್-ಇನ್ ಪಾರ್ಟನರ್‌ನನ್ನು ಪೊಲೀಸರು ಬಂಧಿಸಿದ್ದಾರೆ. ವಾರದ ಹಿಂದೆ ಇಬ್ಬರ ನಡುವೆ ಜಗಳ ನಡೆದಿದ್ದು, ಅದಾದ ಮರುದಿನ ಆರೋಪಿಯು ಯುವತಿಯನ್ನು ಕೊಂದು ಶವವನ್ನು ಸೂಟ್‌ಕೇಸ್‌ನಲ್ಲಿ
ವೈಟ್‌ಹೌಸ್ ಬಳಿ ಗುಂಡಿನ ದಾಳಿ: ಇಬ್ಬರು ಭದ್ರತಾ ಸಿಬ್ಬಂದಿಗೆ ಗಾಯ
ಅಮೆರಿಕದ ಶ್ವೇತಭವನ ಸಮೀಪ ನಡೆದ ಗುಂಡಿನ ದಾಳಿ ನಡೆದಿದ್ದು, ಘಟನೆಯಲ್ಲಿ ರಾಷ್ಟ್ರೀಯ ಭದ್ರತಾ ಪಡೆಯ ಇಬ್ಬರು ಸಿಬ್ಬಂದಿ ತೀವ್ರವಾಗಿ ಗಾಯಗೊಂಡಿದ್ದಾರೆ. ಈ ದಾಳಿಯ ಬಳಿಕ ವಾಷಿಂಗ್ಟನ್‌ನಲ್ಲಿ ಬಿಗಿ ಭದ್ರತೆ ಕೈಗೊಂಡು 500 ಹೆಚ್ಚುವರಿ ರಾಷ್ಟ್ರೀಯ ಗಾರ್ಡ್ ಸಿಬ್ಬಂದಿ ನಿಯೋಜಿಸುವಂತೆ ಟ್ರಂಪ್ ಸೂಚಿಸಿದ್ದಾರೆ.
ಮಾನ್ಯತಾ ಟೆಕ್ ಪಾರ್ಕ್ ಸಮೀಪ ಆ್ಯಂಬುಲೆನ್ಸ್ ಸಂಚಾರಕ್ಕೆ ದುಸ್ತರವಾದ ರಸ್ತೆ: ಗಾಯಾಳು ಸಾವು
ಬೆಂಗಳೂರಿನ ಮಾನ್ಯತಾ ಟೆಕ್ ಪಾರ್ಕ್‌ನಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬರು ಬೈಕ್ ಸ್ಕಿಡ್ ಆಗಿ ಬಿದ್ದು ಗಾಯಗೊಂಡಿದ್ದು, ಆ್ಯಂಬುಲೆನ್ಸ್ ನಲ್ಲಿ ಆಸ್ಪತ್ರೆಗೆ ತೆರಳುತ್ತಿದ್ದಾಗ ರಸ್ತೆಯಲ್ಲಿ ಸಂಚರಿಸಲಾಗದ ಕಾರಣ ಸರಿಯಾದ ಸಮಯಕ್ಕೆ ಚಿಕಿತ್ಸೆ ಸಿಗದೆ ಮೃತಪಟ್ಟಿದ್ದಾರೆ. ವರ್ತೂರಿನ 35 ವರ್ಷದ ಆನಂದ್ ಮೃತಪಟ್ಟ ಗಾಯಾಳು.
ಸಿಎಂ ಬದಲಾವಣೆ ಚರ್ಚೆ ತೀವ್ರ: ನಿರ್ಮಲಾನಂದನಾಥ ಸ್ವಾಮಿ ದೆಹಲಿಗೆ
ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ವಿಚಾರ ತೀವ್ರ ಕಾವೇರಿದ್ದು, ಬಿರುಸಿನ ಮಾತು, ಚಟುವಟಿಕೆಗಳು ಗರಿಗೆದರಿವೆ, ಈ ಮಧ್ಯೆ ಚುಂಚನಗಿರಿ ಒಕ್ಕಲಿಗ ಮಠದ ಪೀಠಾಧಿಪತಿ ನಿರ್ಮಲಾನಂದನಾಥ ಸ್ವಾಮಿ ದೆಹಲಿಗೆ ಪ್ರಯಾಣಿಸಿರುವುದು ಕುತೂಹಲ ಕೆರಳಿಸಿದೆ. ಬೆಂಗಳೂರಿನಿಂದ ಇಂಡಿಗೊ ವಿಮಾನದ ಮೂಲಕ ನಿರ್ಮಲಾನಂದನಾಥ ಸ್ವಾಮಿ ದೆಹಲಿಗೆ ಪ್ರಯಾಣಿಸುತ್ತಿದ್ದು,
ನಾವು ಕೊಟ್ಟ ಮಾತು ಉಳಿಸಿಕೊಳ್ಳುವುದೇ ವಿಶ್ವದಲ್ಲಿರುವ ದೊಡ್ಡ ಶಕ್ತಿ: ಡಿಕೆ ಶಿವಕುಮಾರ್ ಮಾರ್ಮಿಕ ನುಡಿ
“ವರ್ಡ್ ಪವರ್ ಈಸ್ ವರ್ಲ್ಡ್ ಪವರ್ (ಮಾತಿನ ಶಕ್ತಿಯೇ ವಿಶ್ವದ ಶಕ್ತಿ). ನಾವು ಕೊಟ್ಟ ಮಾತನ್ನು ಉಳಿಸಿಕೊಳ್ಳುವುದೇ ವಿಶ್ವದಲ್ಲಿರುವ ದೊಡ್ಡ ಶಕ್ತಿ. ನ್ಯಾಯಾಧೀಶರಾಗಲಿ, ರಾಷ್ಟ್ರಪತಿಗಳಾಗಲಿ, ನಾನಾಗಲೀ, ಯಾರೇ ಆಗಲಿ, ಕೊಟ್ಟ ಮಾತಿಗೆ ತಕ್ಕಂತೆ ನಡೆದು ಸಾಗಬೇಕು” ಎಂದು ಡಿಸಿಎಂ ಡಿಕೆ ಶಿವಕುಮಾರ್
ಕೋಲಾರದಲ್ಲಿ ಆರ್‌ಟಿಒದಿಂದ ಖಾಸಗಿ ಬಸ್‌ಗಳ ಸೀಜ್, ಕೋಟಿಗೂ ಅಧಿಕ ದಂಡ ವಸೂಲಿ
ರಾಜ್ಯ ಸಾರಿಗೆ ಇಲಾಖೆ ಅಧಿಕಾರಿಗಳು ಅಂತಾರಾಜ್ಯ ಖಾಸಗಿ ಬಸ್‌ಗಳನ್ನು ಕೋಲಾರದಲ್ಲಿ ತಪಾಸಣೆ ನಡೆಸಿ ನಿಯಮ ಉಲ್ಲಂಘಿಸಿರುವ ಬಸ್‌ಗಳನ್ನು ಸೀಜ್ ಮಾಡಿದ್ದು, ಒಂದು ಕೋಟಿ ರೂ.ಗೂ ಅಧಿಕ ದಂಡ ವಸೂಲಿ ಮಾಡಿದ್ದಾರೆ. ರಾಷ್ಟ್ರೀಯ ಹೆದ್ದಾರಿ-75 ರಲ್ಲಿ ಆಂಧ್ರ, ತಮಿಳುನಾಡು ಸೇರಿ ನಾನಾ ರಾಜ್ಯಗಳಿಗೆ
ಸತೀಶ್ ಜಾರಕಿಹೊಳಿ ಜತೆ 2028 ರಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರುವ ಕಾರ್ಯತಂತ್ರ ಚರ್ಚೆ: ಡಿಕೆ ಶಿವಕುಮಾರ್
“ಸಚಿವ ಸತೀಶ್ ಜಾರಕಿಹೊಳಿ ಅವರು ಪಕ್ಷದ ಹಿರಿಯ ನಾಯಕರು. ಕಾಂಗ್ರೆಸ್ ಪಕ್ಷವನ್ನು 2028 ಹಾಗೂ 2029 ರ ಚುನಾವಣೆಯಲ್ಲಿ ಅಧಿಕಾರಕ್ಕೆ ತರುವ ಕಾರ್ಯತಂತ್ರದ ಬಗ್ಗೆ ಅವರ ಜತೆ ಚರ್ಚೆ ನಡೆಸಲಾಯಿತು. ಮುಖ್ಯಮಂತ್ರಿ ಹುದ್ದೆ ಅಥವಾ ಉನ್ನತ ಅಧಿಕಾರ ಮುಖ್ಯವಲ್ಲ. ಪಕ್ಷದ ಎಲ್ಲರೊಡನೆ
ಕುಕ್ಕೆ ಸುಬ್ರಹ್ಮಣ್ಯದಲ್ಲಿ ಚಂಪಾಷಷ್ಠಿ ಮಹಾರಥೋತ್ಸವ
ದಕ್ಷಿಣ ಕನ್ನಡ: ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಳದ ಚಂಪಾಷಷ್ಠಿ ಮಹೋತ್ಸವದ ಮಹಾರಥೋತ್ಸವವು ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಬುಧವಾರ ಮುಂಜಾನೆ 7:29ರ ಶುಭ ಮುಹೂರ್ತದಲ್ಲಿ ವೈಭವದಿಂದ ನಡೆಯಿತು. ಕಾರ್ತಿಕ ಶುದ್ಧ ಷಷ್ಠಿ ದಿನದ ಪ್ರಯುಕ್ತ ನಡೆಯುವ ವಾರ್ಷಿಕ ರಥೋತ್ಸವದಲ್ಲಿ ಅಪಾರ ಭಕ್ತಿಭಾವ,
ಕೆಂಪುಕೋಟೆ ಬಳಿ ಕಾರು ಸ್ಫೋಟ ಮತ್ತೊಬ್ಬನ ಬಂಧನ
ನವದೆಹಲಿ: ಕೆಂಪುಕೋಟೆ ಬಳಿ ಸಂಭವಿಸಿದ್ದ ಕಾರು ಬಾಂಬ್ ಸ್ಫೋಟ ಪ್ರಕರಣದ ತನಿಖೆಯನ್ನು ತೀವ್ರಗೊಳಿಸಿರುವ ರಾಷ್ಟ್ರೀಯ ತನಿಖಾ ದಳ(ಎನ್‌ಐಎ) ಅಧಿಕಾರಿಗಳು ಮತ್ತೊಬ್ಬ ಆರೋಪಿಯನ್ನು ಬಂಧಿಸಿದ್ದು,ಈ ಮೂಲಕ ಬಂಧಿತ ಆರೋಪಿಗಳ ಸಂಖ್ಯೆ ಏಳಕ್ಕೆ ಏರಿಕೆ ಆಗಿದೆ. ಕಾರು ಸ್ಪೋಟ ಸಂಭವಿಸುವ ಮುನ್ನ ಉಮರ್ ನಬಿಗೆ




