Menu

ಬೆಂಗಳೂರಿನಲ್ಲಿ ಅಧಿಕಾರಿಗಳೂ ಸೇರಿ ಹೆಣದಲ್ಲಿ ಹಣ ಮಾಡುವ ವ್ಯವಸ್ಥೆ: ಲಿಂಕ್ಡ್​​ಇನ್ ಪೋಸ್ಟ್ ವೈರಲ್‌

ಭಾರತ್ ಪೆಟ್ರೋಲಿಯಂ ನಿಗಮದ ನಿವೃತ್ತ ಸಿಎಫ್​ಒ ಶಿವಕುಮಾರ್ ಅವರ ಮಗಳು ಇತ್ತೀಚೆಗೆ ಮೃತಪಟ್ಟಿದ್ದ ಸಂದರ್ಭದಲ್ಲಿ ಅವರು ಎದುರಿಸಿದ ಲಂಚದ ಪ್ರಪಂಚವನ್ನು ತೆರೆದಿಟ್ಟು ಲಿಂಕ್ಡ್​​ಇನ್ ಪೋಸ್ಟ್ ಮಾಡಿದ್ದಾರೆ, ಈ ಪೋಸ್ಟ್‌ ಎಲ್ಲೆಡೆ ವೈರಲ್‌ ಆಗಿದ್ದು, ಲಂಚ ಪಡೆದ ಆರೋಪದಲ್ಲಿ ಬೆಂಗಳೂರಿನ ಬೆಳ್ಳಂದೂರು ಪೊಲೀಸ್ ಠಾಣೆಯ ಪಿಎಸ್​ಐ ಸಂತೋಷ್ ಹಾಗೂ ಕಾನ್​ಸ್ಟೇಬಲ್ ಗೋರಖ್​ನಾಥ್ ಅವರನ್ನು ಅಮಾನತು ಮಾಡಲಾಗಿದೆ. ಮಗಳ ಮರಣದ ನಂತರ ಬೆಂಗಳೂರಿನಲ್ಲಿ ತಾವು ಎದುರಿಸಿದ ಕಿರುಕುಳ ಮತ್ತು ಲಂಚಕ್ಕೆ ಸಂಬಂಧಿಸಿದ ಅಸಹನೀಯ

ತೇಜಸ್ವಿ ಸೂರ್ಯ ಏಕೆ ಕಾರಲ್ಲಿ ಓಡಾಟ, ಮನೆಯವರನ್ನೆಲ್ಲ ಕರೆದುಕೊಂಡು ಬಸ್ಸಲ್ಲಿ  ಓಡಾಡಲಿ: ಡಿಕೆ ಶಿವಕುಮಾರ್‌

ಸಂಸದ ತೇಜಸ್ವಿ ಸೂರ್ಯ  ಏಕೆ ಕಾರಲ್ಲಿ ಓಡಾಡುತ್ತಿದ್ದಾನೆ? ಆತ, ಆತನ ಕುಟುಂಬ ಸದಸ್ಯರು ಮೆಟ್ರೋ, ಸರ್ಕಾರಿ ಬಸ್ ಬಳಸಲಿ. ಅವರ ಪಕ್ಷದ ಶಾಸಕರು ಮೆಟ್ರೋ, ಆಟೋರಿಕ್ಷಾ, ಸಾರ್ವಜನಿಕ‌ ಸಾರಿಗೆಗಳಲ್ಲಿ ಓಡಾಡಲಿ. ಬೇಡ ಎಂದವರಾರು? ಇವರಿಗೆ ಕಾರುಗಳು ಏಕೆ ಬೇಕು? ಬೆಂಗಳೂರಿನಲ್ಲಿ 1.30

ತರೀಕೆರೆಯಲ್ಲಿ ನಾಳೆ ಮದುವೆ: ವಧು ಇಂದು ಹೃದಯಾಘಾತಕ್ಕೆ ಬಲಿ

ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ತಾಲೂಕಿನ ಸೊಲ್ಲಾಪುರ ಗ್ರಾಮದ ವಧು ಶೃತಿ (32) ಅವರ ಮದುವೆ ನಾಳೆ ತರೀಕೆರೆಯಲ್ಲಿ ನಡೆಯಲು ಎಲ್ಲ ಸಿದ್ಧತೆ ಆಗಿತ್ತು, ಆದರೆ ಇಂದು ಆಕೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ನಾಳೆ ತರೀಕೆರೆ ನಗರದ ಅನ್ನಪೂರ್ಣೇಶ್ವರಿ ಕಲ್ಯಾಣ ಮಂಟಪದಲ್ಲಿ ಶೃತಿ ಮತ್ತು

ಸಂಗೊಳ್ಳಿಯಲ್ಲಿರುವ ರಾಯಣ್ಣ ಸೈನಿಕ ಶಾಲೆಯನ್ನು ದೇಶದಲ್ಲೇ ಮಾದರಿ ಶಾಲೆಯಾಗಿ ರೂಪಿಸಿ: ಸಿಎಂ

ಬೈಲಹೊಂಗಲ ತಾಲೂಕಿನ ಸಂಗೊಳ್ಳಿಯಲ್ಲಿ ನಿರ್ಮಿಸಿರುವ ರಾಯಣ್ಣ ಸೈನಿಕ ಶಾಲೆಯನ್ನು ದೇಶದಲ್ಲಿಯೇ ಮಾದರಿ ಸೈನಿಕ ಶಾಲೆಯನ್ನಾಗಿ ರೂಪಿಸಬೇಕು. ನಿರ್ಮಾಣ ಕಾಮಗಾರಿ ಗುಣಮಟ್ಟದ ಪರಿಶೀಲನೆ ನಡೆಸಿದ ಬಳಿಕ ಸ್ವಾಧೀನಕ್ಕೆ ಪಡೆದುಕೊಳ್ಳಬೇಕು. ಸೈನಿಕ ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣಕ್ಕೆ ಕ್ರಮ ಕೈಗೊಳ್ಳಬೇಕು. ಕ್ರೀಡಾ ಚಟುಟಿಕೆಗಳು ಸೇರಿದಂತೆ ಎಲ್ಲಾ

ಕಾಂಗ್ರೆಸ್‌ನ ವೋಟ್‌ ಬ್ಯಾಂಕ್‌ ಮತ್ತು ಮುಸ್ಲಿಂ ತುಷ್ಟೀಕರಣ: ಕೆಎನ್‌ ರಾಜಣ್ಣ ಸತ್ಯ ಹೇಳಿದ್ದಾರೆಂದ ಆರ್‌ ಅಶೋಕ

@RahulGandhi ಅವರ “ಮತಗಳ್ಳತನ”ದ ನಾಟಕ, ಸುಳ್ಳನ್ನು ಬಯಲು ಮಾಡಿದ ಮಾಜಿ ಸಚಿವ ಕೆ.ಎನ್.ರಾಜಣ್ಣನವರು ಅವರು ಈಗ ಕಾಂಗ್ರೆಸ್ ಪಕ್ಷದ ವೋಟ್ ಬ್ಯಾಂಕ್ ರಾಜಕಾರಣ, ಮುಸ್ಲಿಂ ತುಷ್ಟೀಕರಣದ ಬಗ್ಗೆ ಮತ್ತೊಮ್ಮೆ ಸತ್ಯವನ್ನು ನುಡಿದಿದ್ದಾರೆಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ ಹೇಳಿದ್ದಾರೆ. ಮುಸ್ಲಿಮರು ಕಾಂಗ್ರೆಸ್ ಪಕ್ಷಕ್ಕೆ

ಬಿಗ್‌ ಬಾಸ್‌: ಸ್ಪರ್ಧಿ ಅಶ್ವಿನಿ ಗೌಡ ವಿರುದ್ಧ ಪೊಲೀಸ್‌ ನೋಟಿಸ್‌

ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋದಲ್ಲಿ ಸ್ಪರ್ಧಿ ಅಶ್ವಿನಿ ಗೌಡ ಮತ್ತೊಬ್ಬರು ಸ್ಪರ್ಧಿ ರಕ್ಷಿತಾ ಅವರನ್ನು ಕುರಿತು ‘ಎಸ್ ಕ್ಯಾಟಗರಿ’ ಎಂಬ ಪದವನ್ನು ಬಳಸಿದ್ದಕ್ಕಾಗಿ ಅಶ್ವಿನಿ ವಿರುದ್ಧ ಪೊಲೀಸರು ನೋಟೀಸ್ ನೀಡಿದ್ದಾರೆ.‌ ಅಶ್ವಿನಿ ಈ ಪದ ಬಳಸಿರುವುದನ್ನು ಖಂಡಿಸಿ ವಕೀಲರೊಬ್ಬರು ಬಿಡದಿ

ಆನ್‌ಲೈನ್‌ ಬೆಟ್ಟಿಂಗ್‌: ಮನೆಯಲ್ಲಿದ್ದ ಚಿನ್ನಾಭರಣ ಕಳವುಗೈದ ದತ್ತು ಮಗಳು

ಬೆಂಗಳೂರಿನ ಜೆಪಿ ನಗರದಲ್ಲಿ ಆನ್‌ಲೈನ್‌ ಬೆಟ್ಟಿಂಗ್‌ ಚಟಕ್ಕೆ ಬಿದ್ದಿರುವ ಯುವತಿಯು ಮಗಳಂತೆ ಸಾಕಿದ ದತ್ತು ತಾಯಿಯ ಮನೆಯಲ್ಲಿದ್ದ ಚಿನ್ನ, ಬೆಳ್ಳಿ ಕಳವು ಮಾಡಿರುವ ಪ್ರಕರಣ ನಡೆದಿದೆ. 15 ವರ್ಷಗಳಿಂದ ಮನೆ ಮಾಲೀಕರ ಮಗಳಾಗಿ ಬೆಳೆದ ಯುವತಿ ಮಂಗಳ ಆನ್‌ಲೈನ್ ಬೆಟ್ಟಿಂಗ್ ಚಟದ

ಅಮೆರಿಕ ನಿರ್ಬಂಧ: ರಷ್ಯಾದಿಂದ ತೈಲ ಖರೀದಿ ನಿಲ್ಲಿಸಿದ ಭಾರತ

ಅಮೆರಿಕ ಸುಂಕ ಏರಿಕೆ ಕ್ರಮದ ಬಳಿಕ ಭಾರತವು ರಷ್ಯಾದಿಂದ ತೈಲ ಖರೀದಿ ಆರಂಭಿಸಿತ್ತು, ಇದೀಗ ರಷ್ಯಾದ ಎರಡು ಪ್ರಮುಖ ತೈಲ ಕಂಪನಿಗಳ ಮೇಲೆ ಅಮೆರಿಕ ನಿರ್ಬಂಧ ಹೇರಿದ ಹಿನ್ನೆಲೆ ಭಾರತದ ತೈಲ ಸಂಸ್ಕರಣಾ ಕಂಪನಿಗಳು ರಷ್ಯಾದಿಂದ ಹೊಸದಾಗಿ ತೈಲ ಖರೀದಿ ನಿಲ್ಲಿಸಿವೆ.

ರೇಣುಕಾಸ್ವಾಮಿ ರೀತಿ ಕೊಲೆ ಆಗ್ತಿಯಾ: ಸ್ನೇಹಿತನ ಚಂದ್ರಾಲೇಔಟ್‌ ಗೋದಾಮಿಗೆ ಕರೆಸಿ ಧಮ್ಕಿ

ಹಣಕಾಸು ವ್ಯವಹಾರಕ್ಕೆ ಸಂಬಂಧಿಸಿದಂತೆ ಸ್ನೇಹಿತನನ್ನು ಗೋದಾಮಿಗೆ ಕರೆಸಿಕೊಂಡ ವ್ಯಕ್ತಿ ರೇಣುಕಾಸ್ವಾಮಿಯನ್ನು ಸಾಯಿಸದಂತೆ ನಿನ್ನ ಸಾಯಿಸುವುದಾಗಿ ಧಮ್ಕಿ ಹಾಕಿರುವ ಪ್ರಕರಣ ಬೆಂಗಳೂರಿನ ಚಂದ್ರಾಲೇಔಟ್​ನಲ್ಲಿ ನಡೆದಿದೆ. ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್‌ ಮತ್ತು ಸಹಚರರು ಜೈಲು ಪಾಲಾಗಿದ್ದಾರೆ. ಇದೇ ಮಾದರಿಯಲ್ಲಿ ಸಾಯಿಸುತ್ತೇನೆ

ಸುರಕ್ಷತಾ ಕ್ರಮಗಳ ಲೋಪ: ಆರ್​ಟಿಒ ಅಧಿಕಾರಿಗಳಿಂದ 41 ಬಸ್‌ ಸೀಜ್‌

ಬಸ್‌ಗಳಲ್ಲಿ ಪ್ರಯಾಣಿಕರ ಸುರಕ್ಷತೆಗೆ ಸಂಬಂಧಿಸಿದಂತೆ ಲೋಪಗಳ ಹಿನ್ನೆಲೆ ಆರ್​ಟಿಒ ಅಧಿಕಾರಿಗಳು ದೇವನಹಳ್ಳಿಯ ಏರ್​ಪೋರ್ಟ್ ಟೋಲ್ ಬಳಿ ಕಾರ್ಯಾಚರಣೆ ನಡೆಸಿ ಸುರಕ್ಷತಾ ಕ್ರಮಗಳನ್ನು ಪಾಲಿಸದ ಹಾಗೂ ಸಾಮರ್ಥ್ಯಕ್ಕಿಂತ ಹೆಚ್ಚು ಪ್ರಯಾಣಿಕರನ್ನು ತುಂಬಿಕೊಂಡು ಬಂದಿದ್ದ 40ಕ್ಕೂ ಹೆಚ್ಚು ಬಸ್‌ಗಳನ್ನು ಸೀಜ್ ಮಾಡಿದ್ದಾರೆ. ನೇಪಾಳದಿಂದ ಜನರನ್ನು