Menu

ಧಾರವಾಡದಲ್ಲಿ ಪತ್ನಿಯ ಕೊಂದು ವ್ಯಕ್ತಿ ಆತ್ಮಹತ್ಯೆ

ಧಾರವಾಡ ತಾಲೂಕಿನ ಗರಗ ಗ್ರಾಮದಲ್ಲಿ ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನು ಕೊಂದ ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಗರಗ ಗ್ರಾಮದ ಮೌಲಾಸಾಬ್ (28) ಎಂಬಾತ ಪತ್ನಿ ಸಲ್ಮಾಳನ್ನು(21) ಕೊಲೆ ಮಾಡಿ ತಾನೂ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಒಂದೂವರೆ ವರ್ಷದ ಮಗುವಿನ ಎದುರೇ ಮೌಲಾಸಾಬ್ ಪತ್ನಿಯನ್ನು ಕೊಲೆ ಮಾಡಿ ನೇನು ಬಿಗಿದುಕೊಂಡಿದ್ದಾನೆ. ಮೂರು ವರ್ಷದ ಹಿಂದೆ ಇವರ ಮದುವೆಯಾಗಿತ್ತು.  ನಮ್ಮ ಮಗಳು ಸಲ್ಮಾಗೆ ಅತ್ತೆ, ಮಾವನ ಕಾಟ ಇತ್ತು. ಈಗ ಅವಳನ್ನು ಬಲಿ ಪಡೆದುಕೊಂಡಿದ್ದಾರೆ. ಅಳಿಯನ ಕಾಟ ಇರಲಿಲ್ಲ. ಕೂಲಿ ಮಾಡುತ್ತಿದ್ದ ಆತನಿಗೆ ನಾವೇ ಸಹಾಯ ಮಾಡುತ್ತಿದ್ದೆವು. ನನ್ನ ಮಗಳು ಸಣ್ಣವಳು. ಆಕೆ ಚುರುಕಾಗಿರಲಿಲ್ಲ ಎಂದು ಸಲ್ಮಾ ತಾಯಿ ಆರೋಪಿಸಿದ್ದಾರೆ.
ಸ್ಥಳಕ್ಕೆ ಎಸ್‌ಪಿ ಗುಂಜನ್ ಆರ್ಯ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಗರಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಫೈನಾನ್ಸ್‌ ಕಿರುಕುಳ: ವ್ಯಕ್ತಿ ಸುಸೈಡ್‌

ಮೈಕ್ರೋ ಫೈನಾನ್ಸ್‌ನವರ ಕಿರುಕುಳದಿಂದ ಹೆದರಿ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೈಸೂರಿನ ಹುಣಸೂರು ತಾಲೂಕಿನ ನಂಜಾಪುರದಲ್ಲಿ ನಡೆದಿದೆ.

ನಂಜಾಪುರದ ವಸಂತಕುಮಾರ್ ಪುತ್ರ ರಂಜಿತ್ (32) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಮನೆ ನಿರ್ಮಾಣಕ್ಕಾಗಿ ಮೈಕ್ರೋಫೈನಾನ್ಸ್‌ನಲ್ಲಿ 12 ಲಕ್ಷ ರೂ. ಸಾಲ ಪಡೆದಿದ್ದರು. ಸಾಲ ಮರುಪಾವತಿಯಲ್ಲಿ ವಿಳಂಬವಾಗಿದ್ದಕ್ಕೆ ಎರಡು ಬಾರಿ ಫೈನಾನ್ಸ್‌ನವರು ಮನೆಗೆ ಬೀಗ ಹಾಕಿದ್ದರು. ಈವರೆಗೆ 8 ಲಕ್ಷ ರೂ. ಪಾವತಿ ಮಾಡಿದ್ದ ರಂಜಿತ್‌ ಇತ್ತೀಚೆಗೆ 3 ಲಕ್ಷ ರೂ. ಪಾವತಿಸಿದ್ದರೂ ಕಿರುಕುಳ ಮುಂದುವರಿಸಿದ್ದರು ಎಂಬ ಆರೋಪ ಕೇಳಿ ಬಂದಿದೆ.

ಮಳೆಯಿಲ್ಲದೆ ಬೆಳೆ ಕೈಕೊಟ್ಟು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ ರಂಜಿತ್ ಮತ್ತೆ ಮನೆಗೆ ಬೀಗ ಹಾಕಿದರೆ ಗ್ರಾಮದಲ್ಲಿ ಅವಮಾನವಾಗುತ್ತದೆ ಎಂಬ ಭಯದಿಂದ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಪತ್ನಿಗೆ ಹೇಳಿಕೊಂಡಿದ್ದರು ಎನ್ನಲಾಗಿದೆ. ಮನೆಯಲ್ಲಿ ಯಾರೂ ಇಲ್ಲದ ವೇಳೆ ನೇಣು ಬಿಗಿದುಕೊಂಡಿದ್ದಾರೆ. ಪತಿ ಸಾವಿಗೆ ಮೈಕ್ರೋಫೈನಾನ್ಸ್ ಸಿಬ್ಬಂದಿ ಕಿರುಕುಳವೇ ಕಾರಣ ಎಂದು ಪತ್ನಿ ಭಾಗ್ಯ ಆರೋಪಿಸಿದ್ದಾರೆ. ಬಿಳಿಕೆರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Posts

Leave a Reply

Your email address will not be published. Required fields are marked *