ಉದಯಕಾಲ ನ್ಯೂಸ್, ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನಲ್ಲಿ ಮಾನವೀಯತೆ ಹಾಗೂ ದಾಂಪತ್ಯ ಜೀವನದ ಪಾವಿತ್ರ್ಯತೆಗೆ ಮಸಿ ಬಳಿಯುವಂತ ದಾರುಣ ಘಟನೆಯೊಂದು ಬೆಳಕಿಗೆ ಬಂದಿದೆ. ಸಂಬಂಧದಲ್ಲಿ ತಮ್ಮನಾಗುವ ವ್ಯಕ್ತಿಯೊಂದಿಗೆ ಪತ್ನಿ ಅಕ್ರಮ ಸಂಬಂಧ ಹೊಂದಿದ್ದು, ಇದನ್ನು ಪ್ರಶ್ನಿಸಿದ ಪತಿಗೆ ಬೆದರಿಕೆ ಹಾಗೂ ಮಾನಸಿಕ ಕಿರುಕುಳ ನೀಡಿದ ಹಿನ್ನೆಲೆಯಲ್ಲಿ ಮನನೊಂದ ಆಟೋ ಚಾಲಕನೊಬ್ಬ ನೇಣಿಗೆ ಶರಣಾಗಿರುವ ಘಟನೆ ನೆರಿಗಾ ಗ್ರಾಮದಲ್ಲಿ ವರದಿಯಾಗಿದೆ.
ಮೃತ ದುರ್ದೈವಿಯನ್ನು ಆಟೋ ಡ್ರೈವರ್ ಮುನಿಕೃಷ್ಣ (35) ಎಂದು ಗುರುತಿಸಲಾಗಿದೆ. ಇವರಿಗೆ ನಯನಾ ಎಂಬಾಕೆಯೊಂದಿಗೆ 10 ವರ್ಷಗಳ ಹಿಂದೆ ವಿವಾಹವಾಗಿದ್ದು, ದಂಪತಿಗೆ 6 ವರ್ಷದ ಗಂಡು ಮಗನಿದ್ದಾನೆ. ಸದ್ಯ ನಯನಾ ಎರಡನೇ ಮಗುವಿನ ಗರ್ಭಿಣಿಯಾಗಿದ್ದಾರೆ ಎನ್ನಲಾಗಿದೆ.
ಸಂಸಾರಕ್ಕೆ ಕೊಳ್ಳಿ ಇಟ್ಟ ಕ್ಯಾಬ್ ಡ್ರೈವರ್ ಕುಮಾರ
ಮುನಿಕೃಷ್ಣನ ಸಂಬಂಧಿಕನಾಗುವ ಕುಮಾರ ಎಂಬಾತ ಕ್ಯಾಬ್ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದನು. ಈಕೆಯು ಕೆಲಸಕ್ಕೆ ತೆರಳುವಾಗ ಕುಮಾರ ತನ್ನ ಕಾರಿನಲ್ಲೇ ಕರೆದುಕೊಂಡು ಹೋಗಿ ಬಿಡುತ್ತಿದ್ದನು. ಸಂಬಂಧದಲ್ಲಿ ತಮ್ಮನಾಗಿದ್ದರಿಂದ ಮುನಿಕೃಷ್ಣ ಈ ವಿಷಯದಲ್ಲಿ ಯಾವುದೇ ಅನುಮಾನ ಪಟ್ಟಿರಲಿಲ್ಲ. ಆದರೆ, ಕಳೆದ ಎರಡು ವರ್ಷಗಳಿಂದ ನಯನಾ ಹಾಗೂ ಕುಮಾರನ ನಡುವೆ ಅಕ್ರಮ ಸಂಬಂಧ ಬೆಳೆದಿತ್ತು. ಮುನಿಕೃಷ್ಣ ಆಟೋ ಕೆಲಸಕ್ಕೆಂದು ಮನೆಯಿಂದ ಹೊರಡುತ್ತಿದ್ದಂತೆ ಕುಮಾರ ಮನೆಗೆ ಎಂಟ್ರಿ ಕೊಟ್ಟು ಅನೈತಿಕ ಚಟುವಟಿಕೆಗಳಲ್ಲಿ ತೊಡಗುತ್ತಿದ್ದ ಎನ್ನಲಾಗಿದೆ.
ವಾಟ್ಸಾಪ್ನಲ್ಲಿ ಫೋಟೋ ಕಳುಹಿಸಿ ವಿಕೃತಿ ಮೆರೆದ ಕಾಮುಕ!
ಕಳೆದ ಮೂರು ತಿಂಗಳ ಹಿಂದೆ ನಯನಾ ಹಾಗೂ ಕುಮಾರನ ಅಕ್ರಮ ಸಂಬಂಧದ ವಿಚಾರ ಮುನಿಕೃಷ್ಣನಿಗೆ ಬಹಿರಂಗಗೊಂಡಿದೆ. ಕುಮಾರ ನೇರವಾಗಿ ಮುನಿಕೃಷ್ಣನ ವಾಟ್ಸಾಪ್ಗೆ ನಯನಾ ಜೊತೆಗಿರುವ ಅಸಭ್ಯ ಫೋಟೋಗಳು, ವಿಡಿಯೋಗಳು ಹಾಗೂ ಅಶ್ಲೀಲ ಚಾಟ್ಗಳನ್ನು ಕಳುಹಿಸಿ ವಿಕೃತಿ ಮೆರೆದಿದ್ದನು. ವಿಷಯ ತಿಳಿದು ಆಘಾತಕ್ಕೊಳಗಾದ ಮುನಿಕೃಷ್ಣ ಪತ್ನಿ ಜೊತೆ ಜಗಳವಾಡಿದ್ದ. ಇದರಿಂದ ಮನನೊಂದ ನಯನಾ ತವರು ಮನೆಗೆ ತೆರಳಿದ್ದಳು.
ಅಷ್ಟೇ ಅಲ್ಲದೆ, ಕುಮಾರ ಇಲ್ಲಿಗೆ ನಿಲ್ಲಿಸದೆ ಮುನಿಕೃಷ್ಣನಿಗೆ ರಸ್ತೆಯಲ್ಲಿ ಅಡ್ಡಗಟ್ಟಿ ನಿಂದಿಸುವುದು ಹಾಗೂ “ನಯನಾ ಹೊಟ್ಟೆಯಲ್ಲಿ ಬೆಳೆಯುತ್ತಿರುವ ಮಗು ನನ್ನದು” ಎಂದು ಹೇಳಿ ಮಾನಸಿಕವಾಗಿ ತೀವ್ರ ಕಿರುಕುಳ ನೀಡಲಾರಂಭಿಸಿದ್ದನು. ಈ ಎಲ್ಲಾ ಬೆಳವಣಿಗೆಗಳಿಂದ ಜಿಗುಪ್ಸೆಗೊಂಡಿದ್ದ ಮುನಿಕೃಷ್ಣ ಯಾರ ಬಳಿಯೂ ಹೇಳಿಕೊಳ್ಳದೆ ನೊಂದಿದ್ದನು.
ಸಾವಿನ ಬಳಿಕ ಹೊರಬಿದ್ದ ಅಸಲಿ ರಹಸ್ಯ
ಸಾಯುವುದಕ್ಕೂ ಒಂದು ದಿನ ಮುನ್ನ ಮುನಿಕೃಷ್ಣ ತನ್ನ ಸಹೋದರನ ಬಳಿ ಈ ಎಲ್ಲ ನೋವನ್ನು ತೋಡಿಕೊಂಡಿದ್ದನು. ಇದರ ಬೆನ್ನಲ್ಲೇ ಮನೆಯಲ್ಲಿ ಯಾರೂ ಇಲ್ಲದ ವೇಳೆ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಆರಂಭದಲ್ಲಿ ಇದು ಕೌಟುಂಬಿಕ ಕಲಹದಿಂದ ಆದ ಸಾವು ಎಂದು ಭಾವಿಸಿ ಕುಟುಂಬಸ್ಥರು ಅಂತ್ಯಕ್ರಿಯೆ ನೆರವೇರಿಸಿದ್ದರು. ಆದರೆ, ಅಂತ್ಯಕ್ರಿಯೆ ಮುಗಿದ ಬಳಿಕ ಮುನಿಕೃಷ್ಣ ತನ್ನ ಸಹೋದರನಿಗೆ ಹೇಳಿದ್ದ ಕೊನೆಯ ಮಾತುಗಳನ್ನು ಬಹಿರಂಗಪಡಿಸಿದ್ದಾನೆ. ಆಗಷ್ಟೇ ಪತ್ನಿ ಹಾಗೂ ಆಕೆಯ ಪ್ರೇಮಿ ಕುಮಾರನ ಅನೈತಿಕ ಸಂಬಂಧದ ಕರಾಳ ಸತ್ಯ ಹೊರಬಂದಿದೆ.
ಈ ಸಂಬಂಧ ಮೃತನ ಕುಟುಂಬಸ್ಥರು ಸರ್ಜಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪತ್ನಿ ನಯನಾ ಹಾಗೂ ಕುಮಾರನ ಅಕ್ರಮ ಸಂಬಂಧ ಮತ್ತು ಕಿರುಕುಳವೇ ಮುನಿಕೃಷ್ಣನ ಸಾವಿಗೆ ನೇರ ಕಾರಣವಾಗಿದ್ದು, ಇಬ್ಬರ ವಿರುದ್ಧವೂ ಕೂಡಲೇ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಕುಟುಂಬಸ್ಥರು ಹಾಗೂ ಸ್ಥಳೀಯರು ಆಗ್ರಹಿಸಿದ್ದಾರೆ. ಘಟನೆ ನಡೆದು ದೂರು ದಾಖಲಾಗಿದ್ದರೂ ಪೊಲೀಸರು ಇನ್ನೂ ಸೂಕ್ತ ಕ್ರಮ ಕೈಗೊಂಡಿಲ್ಲ ಎಂದು ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
#AnekalCrime #BengaluruRural #ExtramaritalAffair #SarjapuraPolice #SuicideCase #UdayakalaNews #CrimeNewsKarnataka #JusticeForManjunath #KarnatakaPolice


