Thursday, January 30, 2025
Menu

ಜ.5 ರಿಂದ ಹುಕ್ಕೇರಿಮಠ: ‘ನಮ್ಮೂರ ಜಾತ್ರೆ’ : ಹುಕ್ಕೇರಿಮಠದ ಸದಾಶಿವ ಶ್ರೀ

ಹಾವೇರಿ: ಲಿಂ. ಶಿವಬಸವ ಸ್ವಾಮೀಜಿ 79ನೇ ಹಾಗೂ ಲಿಂ.ಶಿವಲಿಂಗ ಸ್ವಾಮೀಜಿಯ 16ನೇ ಪುಣ್ಯ ಸ್ಮರಣೋತ್ಸವದ ಅಂಗವಾಗಿ 2025ರ ಜನವರಿ 5ರಿಂದ 9ರವರೆಗೆ ‘ನಮ್ಮೂರ ಜಾತ್ರೆ’ ಕಾರ್ಯಕ್ರಮ ಶಿವಲಿಂಗೇಶ್ವರ ಮಹಿಳಾ ವಿಹಾವಿದ್ಯಾಲಯದ ಆವರಣದಲ್ಲಿ ನಡೆಯಲಿದೆ ಎಂದು ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ ಹೇಳಿದರು.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಜಾತ್ರೆ ಅಂಗವಾಗಿ ಪ್ರತಿವರ್ಷದಂತೆ ಈ ವರ್ಷವೂ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದರು.

ಜ.5ರ ಭಾನುವಾರ ಬೆಳಿಗ್ಗೆ 8.30ಕ್ಕೆ ಷಟಸ್ಥಲ ಧ್ವಜಾರೋಹಣ, ಸಂಜೆ 6.30ಕ್ಕೆ ಧಾರ್ಮಿಕ ಕಾರ್ಯಕ್ರಮಗಳು ಹಾಗೂ ಹೂವಿನಶಿಗ್ಲಿ ವಿರಕ್ತಮಠದ ಗುರುಕುಲ ವಿದ್ಯಾರ್ಥಿಳಿಂದ ಮಲ್ಲಕಂಭ ಪ್ರದರ್ಶನ ಜರುಗಲಿದೆ. ಜ.6ರ ಸೋಮವಾರ ಬೆಳಗ್ಗೆ 11 ಗಂಟೆಗೆ ಎಪಿಎಂಸಿ ಜಾನುವಾರು ಮಾರುಕಟ್ಟೆಯಲ್ಲಿ ಶಿವಬಸವ ದನಗಳ ಜಾತ್ರೆ ಉದ್ಘಾಟನೆ ಜರಗಲಿದೆ. ಸಂಜೆ 6.30ಕ್ಕೆ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ಹೇಳಿದರು.

54 ವರ್ಷಗಳಿಂದ ಜಾನುವಾರು ಜಾತ್ರೆ ನಡೆದುಕೊಂಡು ಬರುತ್ತಿದ್ದು, ತಮಿಳುನಾಡು, ಆಂಧ್ರಪ್ರದೇಶ ಸೇರಿದಂತೆ ದೇಶದ ನಾನಾ ಭಾಗಗಳಿಂದ ರೈತರು ಆಗಮಿಸುತ್ತಾರೆ. ಈ ಜಾನುವಾರು ಜಾತ್ರೆ ಸುದೀರ್ಘವಾಗಿ ಜರಗುವ ಜಾತ್ರೆಯಾಗಿದೆ. ರೊಟ್ಟಿ ಜಾತ್ರೆಗೆ ಹಾವೇರಿ ಸುತ್ತಮುತ್ತಲಿನ ಗ್ರಾಮಗಳ ಭಕ್ತರು ರೊಟ್ಟಿ ರೊಟ್ಟಿ ತಂದು ಕೊಡಲಿದ್ದಾರೆ ಎಂದು ಮಾಹಿತಿ ನೀಡಿದರು.

ಜ.7ರ ಮಂಗಳವಾರ ಸಂಜೆ 6.30ಕ್ಕೆ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳ ಜೊತೆಗೆ ಉಡುಪಿಯ ಪ್ರಹ್ಲಾದ ಆಚಾರ್ಯ ಅವರಿಂದ ನೆರಳು ಬೆಳಕಿನ ಆಟ ಜಾದೂ ಪ್ರದರ್ಶನ ಜರುಗಲಿದೆ. ಜ.8ರ ಬುಧವಾರ ಸಂಜೆ 6.30ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮಗಳ ಜೊತೆಗೆ ಹಾವೇರಿ ಓಂ ಸಂಸ್ಥೆಯಿಂದ ಕೊಡಮಾಡುವ ಸಾಧಕ ರತ್ನ ಪ್ರಶಸ್ತಿಯನ್ನು ಶಿಗ್ಗಾವಿ ಜನಪದ ಕಲಾವಿದ ಬಸವರಾಜ ಶಿಗ್ಗಾಂವಿಗೆ ನೀಡಿ ಗೌರವಿಸಲಾಗುತ್ತದೆ. ಜ.9ರ ಸಂಜೆ 6.30ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ ಎಂದರು.

ಜ.10ರಂದು ಲಿಂಗೈಕ್ಯ ಸ್ವಾಮೀಜಿಗಳ ಪುಣ್ಯ ಸ್ಮರಣೋತ್ಸವದಅಂಗವಾಗಿ ಬೆ.8ಕ್ಕೆ ಸ್ವಾಮೀಜಿಗಳ ಗದ್ದುಗೆ ಮಹಾ ಪೂಜೆ, ಬಿಲ್ವಾರ್ಚನೆ, ಮಧ್ಯಾಹ್ನ 12ಗಂಟೆಗೆ ಮಹಾಗಣಾರಾಧನೆ ಸಂಜೆ 4ಕ್ಕೆ ಭಾವಚಿತ್ರದ ಮೆರವಣಿಗೆ ಇರಲಿದ್ದು, ವಿವಿಧ ಕಲಾ ತಂಡಗಳು ಪಾಲ್ಗೊಳ್ಳಲಿವೆ ಎಂದರು.

ಉತ್ಸವ ಸಮಿತಿಯ ಅಧ್ಯಕ್ಷ ಅಶೋಕ ಮಾಗನೂರ, ಉಪಾಧ್ಯಕ್ಷರಾದ ಮಾಂತಣ್ಣ ಸುರಳ್ಳಿಹಳ್ಳಿ, ಅಮೃತಮ್ಮ ಶೀಲವಂತರ, ಕಾರ್ಯದರ್ಶಿ ತಮ್ಮಣ್ಣ ಮುದ್ದಿ, ಸಹ ಕಾರ್ಯದರ್ಶಿ ಗಣೇಶ ಮುಷ್ಠಿ, ಮುಖಂಡರಾದ ಸಿ.ಜಿ. ತೋಟಣ್ಣನವರ, ಶಿವಯೋಗಿ ಬೆನಕೊಪ್ಪ, ಮಾಂತಣ್ಣ ಹಲಗಣ್ಣನವರ, ಗಂಗಣ್ಣ ಮಳಗಿ, ಗಂಗಣ್ಣ ಮಳಗಿ, ವೀರಣ್ಣ ಮಹಾರಾಜಪೇಟ, ಎಸ್.ಎಸ್. ಮುಷ್ಠಿ, ಜಗದೀಶ ತುಪ್ಪದ, ಎಸ್.ಎಚ್.ವಾಲಿಶೆಟ್ಟರ್, ರಾಚಪ್ಪ ಲಂಬಿ, ಆರ್.ಎಸ್. ಮಾಗನೂರ, ಬಿ. ಬಸವರಾಜ, ಎಸ್.ಸಿ. ಮರಳಿಹಳ್ಳಿ ಇದ್ದರು.

Related Posts

Leave a Reply

Your email address will not be published. Required fields are marked *