Menu

ಪಾಕ್‌ ಮಹಿಳೆಯಿಂದ ಹನಿಟ್ರ್ಯಾಪ್‌: ರಕ್ಷಣಾ ಮಾಹಿತಿ ಕಳಿಸಿದ ಐಎಎಫ್‌ ವಿಂಗ್‌ ಕಮಾಂಡರ್‌

ಭಾರತೀಯ ವಾಯುಪಡೆಯ ಉನ್ನತ ಕಮಾಂಡರ್‌ವೊಬ್ಬರು ಪಾಕಿಸ್ತಾನದ ಮಹಿಳೆಯೊಬ್ಬರ ಹನಿಟ್ರ್ಯಾಪ್‌ಗೆ ಸಿಲುಕಿ ಸೂಕ್ಷ್ಮ ರಕ್ಷಣಾ ಮಾಹಿತಿಯನ್ನು ಸೋರಿಕೆ ಮಾಡಿರುವ ಪ್ರಕರಣ ಬಹಿರಂಗಗೊಂಡಿದೆ.

ಆರೋಪಿ ಅಧಿಕಾರಿಯನ್ನು ಬಂಧಿಸಲಾಗಿದೆ. ಸಾಮಾಜಿಕ ಮಾಧ್ಯಮದ ಮೂಲಕ ಕುದಉರಿದ ಸ್ನೇಹ ಹನಿ ಟ್ರ್ಯಾಪ್ ಆಗಿ ಬದಲಾಗಿದೆ. ವಿಂಗ್ ಕಮಾಂಡರ್ ಅವರ ವಿಶ್ವಾಸ ಗಳಿಸಿದ ಪಾಕ್‌ ಮಹಿಳೆ ಸೇನಾ ಚಟುವಟಿಕೆಗಳು, ಪಡೆಗಳ ನಿಯೋಜನೆ ಮತ್ತು ಇತರ ಸೂಕ್ಷ್ಮ ಮಾಹಿತಿಗಳನ್ನು ಕೇಳಿದ್ದಳು ಎಂದು ದೆಹಲಿ ಪೊಲೀಸರ ತನಿಖೆಯಲ್ಲಿ ಗೊತ್ತಾಗಿದೆ. ವಿಂಗ್ ಕಮಾಂಡರ್ ಅವರನ್ನು ಬಂಧಿಸಿ ಅಧಿಕೃತ ರಹಸ್ಯ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಬಳಿಕ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ. ತನಿಖೆ ಪೂರ್ಣಗೊಂಡ ಬಳಿಕ ಪೊಲೀಸರು ನ್ಯಾಯಾಲಯದಲ್ಲಿ ಆರೋಪಪಟ್ಟಿ ಸಲ್ಲಿಸಿದ್ದರು.

ವಿಂಗ್ ಕಮಾಂಡರ್ ಮಹಿಳೆಯೊಂದಿಗೆ ಸಾಮಾಜಿಕ ಮಾಧ್ಯಮದ ಮೂಲಕ ಸಂವಹನ ನಡೆಸಲು ಪ್ರಾರಂಭಿಸಿದಾಗ ಅವರು ಕ್ಷೇತ್ರ ಘಟಕದಲ್ಲಿ ನಿಯೋಜಿತರಾಗಿದ್ದರು. ಅಧಿಕಾರಿಯು ಮಿಲಿಟರಿ ಚಲನವಲನಗಳು ಮತ್ತು ನಿಯೋಜನೆಗಳಿಗೆ ಸಂಬಂಧಿಸಿದ ವಿವರಗಳ ಜೊತೆಗೆ, ಛಾಯಾಚಿತ್ರಗಳು, ವೀಡಿಯೊಗಳು ಮತ್ತು ಇತರ ಸೂಕ್ಷ್ಮ ವಿವರಗಳನ್ನು ಡಿಜಿಟಲ್ ಮೂಲಕ ಮಹಿಳೆಗೆ ಕಳುಹಿಸಿದ್ದಾರೆ ಎಂಬ ಆರೋಪವಿದೆ. ನಿರ್ಣಾಯಕ ದಾಖಲೆಗಳು ಮತ್ತು ಡೇಟಾವನ್ನು ವರ್ಗಾಯಿಸಲಾಗಿದೆ ಎಂದು ಹೇಳಲಾಗಿದೆ.

ಪೊಲೀಸರ ಪ್ರಕಾರ, ಮಹಿಳೆ ವಿಂಗ್ ಕಮಾಂಡರ್ ಅವರನ್ನು ತಮ್ಮ ಸಹೋದ್ಯೋಗಿಯೊಬ್ಬರ ಮೊಬೈಲ್ ಫೋನ್‌ನಲ್ಲಿ ವಿಶೇಷ ಅಪ್ಲಿಕೇಶನ್ ಅಳವಡಿಸಲು ಕೇಳಿಕೊಂಡಿದ್ದಾರೆ. ಆರೋಪಿ ವಿಂಗ್ ಕಮಾಂಡರ್ ಹಾಗೆ ಮಾಡಿದ್ದಾರೆ. ಅಪ್ಲಿಕೇಶನ್ ಅನುಮಾನಾಸ್ಪದವಾಗಿತ್ತು ಮತ್ತು ಸ್ಪೈವೇರ್ ಅಥವಾ ರಿಮೋಟ್-ಆಕ್ಸೆಸ್ ಮಾಲ್‌ವೇರ್‌ ಇರಬಹುದು. ಡೇಟಾ ಕದಿಯಲು, ಸ್ಥಳಟ್ರ್ಯಾಕ್ ಮಾಡಲು ಅಥವಾ ಸಂಭಾಷಣೆಗಳನ್ನು ಪ್ರತಿಬಂಧಿಸಲು ಅಂತಹ ಅಪ್ಲಿಕೇಶನ್‌ಗಳನ್ನು ಬಳಸಬಹುದು ಎಂದು ಹೇಳಲಾಗಿದೆ.

Related Posts

Leave a Reply

Your email address will not be published. Required fields are marked *