Thursday, January 30, 2025
Menu

ಗೋಧ್ರಾ ದುರಂತ: ಫೆ.13ರಿಂದ ವಿಚಾರಣೆ ನಡೆಸಲಿರುವ ಸುಪ್ರೀಂಕೋರ್ಟ್

ನವದೆಹಲಿ: ಗೋಧ್ರಾ ರೈಲು ದುರಂತ ಸಂಬಂಧ ಗುಜರಾತ್ ಸರ್ಕಾರ ಮತ್ತು ಆರೋಪಿಗಳು ಸಲ್ಲಿಸಿರುವ ಮೇಲ್ಮನವಿಗಳನ್ನು ಫೆಬ್ರವರಿ 13ರಂದು ವಿಚಾರಣೆ ನಡೆಸುವುದಾಗಿ ಸುಪ್ರೀಂ ಕೋರ್ಟ್ ಹೇಳಿದೆ.

ಮುಂದಿನ ವಿಚಾರಣೆಯ ದಿನ ಈ ವಿಷಯದಲ್ಲಿ ಯಾವುದೇ ಮುಂದೂಡಿಕೆ ನೀಡಲಾಗುವುದಿಲ್ಲ ಎಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಜೆ.ಕೆ. ಮಹೇಶ್ವರಿ ಮತ್ತು ಅರವಿಂದ್ ಕುಮಾರ್ ಅವರ ಪೀಠ ಸ್ಪಷ್ಟಪಡಿಸಿದೆ.

2002ರ ಫೆಬ್ರವರಿ 27ರಂದು ಗುಜರಾತ್ನ ಗೋಧ್ರಾದಲ್ಲಿ ಸಬರಮತಿ ಎಕ್ಸ್ ಪ್ರೆಸ್ ನ ಎಸ್-6 ಕೋಚ್ ಗೆ ಬೆಂಕಿ ಹಚ್ಚಿದ್ದರಿಂದ 59 ಜನರು ಮೃತಪಟ್ಟಿದ್ದರು. ಇದು ಗುಜರಾತ್ ಗಲಭೆಗೆ ಕಾರಣವಾಯಿತು.

ಗುಜರಾತ್ ಹೈಕೋರ್ಟ್ ಅಕ್ಟೋಬರ್ 2017ರಲ್ಲಿ ನೀಡಿದ ತೀರ್ಪನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟಲ್ಲಿ ಹಲವಾರು ಮೇಲ್ಮನವಿಗಳನ್ನು ಸಲ್ಲಿಸಲಾಗಿದೆ. ಹೈಕೋರ್ಟ್ ಈ ಪ್ರಕರಣದಲ್ಲಿ ಹಲವಾರು ಅಪರಾಧಿಗಳ ಶಿಕ್ಷೆಯನ್ನು ಎತ್ತಿಹಿಡಿದು 11 ಜನರ ಮರಣದಂಡನೆಯನ್ನು ಜೀವಾವಧಿ ಶಿಕ್ಷೆಗೆ ಇಳಿಸಿತ್ತು.

ಇಂದು ಅಪರಾಧಿಗಳ ಪರ ಹಾಜರಾದ ವಕೀಲರು ಸಮಯ ಕೋರಿದ ನಂತರ ಸುಪ್ರೀಂ ಕೋರ್ಟ್ ಫೆಬ್ರವರಿ 13ಕ್ಕೆ ಪ್ರಕರಣದ ವಿಚಾರಣೆಯನ್ನು ಮುಂದೂಡಿತು. ಈ ಪ್ರಕರಣದಲ್ಲಿ 31 ಅಪರಾಧಿಗಳಿಗೆ ಹೈಕೋರ್ಟ್ ಶಿಕ್ಷೆಯನ್ನು ಎತ್ತಿಹಿಡಿದಿತ್ತು. 11 ಅಪರಾಧಿಗಳ ಮರಣದಂಡನೆಯನ್ನು ಜೀವಾವಧಿ ಶಿಕ್ಷೆಗೆ ಇಳಿಸಿತ್ತು.

11 ಅಪರಾಧಿಗಳಿಗೆ ಮರಣದಂಡನೆಯನ್ನು ಜೀವಾವಧಿ ಶಿಕ್ಷೆಗೆ ಇಳಿಸುವುದರ ವಿರುದ್ಧ ಗುಜರಾತ್ ಮೇಲ್ಮನವಿ ಸಲ್ಲಿಸಿದ್ದರೂ, ಹಲವಾರು ಅಪರಾಧಿಗಳು ಈ ಪ್ರಕರಣದಲ್ಲಿ ತಮ್ಮ ಶಿಕ್ಷೆಯನ್ನು ಎತ್ತಿಹಿಡಿದ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿದ್ದಾರೆ.

Related Posts

Leave a Reply

Your email address will not be published. Required fields are marked *