Wednesday, September 16, 2026
Menu

ಬೆಂಗಳೂರು ಏರ್‌ಪೋರ್ಟ್‌ಗೆ ಬಂದಿಳಿದ ಮಹಿಳೆ ಹೃದಯಾಘಾತಕ್ಕೆ ಬಲಿ

ಕೇರಳದಿಂದ ಬೆಂಗಳೂರು ಕೆಂಪೇಗೌಡ ನಿಲ್ದಾಣಕ್ಕೆ ವಿಮಾನದಲ್ಲಿ ಬಂದಿಳಿದ ಮಹಿಳೆ ತಕ್ಷಣ ಹೃದಯಾಘಾತಕ್ಕೆ ಒಳಗಾಗಿ ಮೃತಪಟ್ಟಿರುವ ಘಟನೆ ನಡೆದಿದೆ. ನಿಲ್ದಾಣದ ಟರ್ಮಿನಲ್‌ ಒಂದರ ಎಕ್ಸಿಲೇಟರ್‌ನಲ್ಲಿ ಮಹಿಳೆ ಕುಸಿದು ಅಸು ನೀಗಿದ್ದಾರೆ.

ಕೇರಳದ ಕೋಜಿಕೋಡ್​ನಿಂದ ಬಂದಿದ್ದ ಶಿವದಾಸ್ ಲತಾ ( 66 ) ಹೃದಯಾಘಾತದಿಂದ ಮೃತಪಟ್ಟವರು, ಆಕಾಶ್ ಏರ್​ಲೈನ್ಸ್ ನಲ್ಲಿ ಅವರು ಕೇರಳದಿಂದ ಬೆಂಗಳೂರಿಗೆ ಬಂದಿದ್ದರು. ಎಕ್ಸಿಲೇಟರ್‌ನಲ್ಲಿ ಕುಸಿದು ಬಿದ್ದ
ಕೂಡಲೇ ಸಿಬ್ಬಂದಿ ಪ್ರಥಮ‌ ಚಿಕಿತ್ಸೆ ನೀಡಿದ್ದು, ಅಷ್ಟರಲ್ಲೇ ಆಕೆಯ ಪ್ರಾಣ ಹೋಗಿತ್ತು. ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದಾರೆ.

Related Posts

Leave a Reply

Your email address will not be published. Required fields are marked *