Menu

ಮಳೆಗಾಳಿಗೆ ಸಾಂಗ್ಲಿಯಲ್ಲಿ ದೇಗುಲ ಆವರಣ ಗೋಡೆ ಕುಸಿದು ಆರು ಮಂದಿ ಸಾವು

ಸಾಂಗ್ಲಿ ಜಿಲ್ಲೆಯ ದೇವಾಲಯದ ಆವರಣದಲ್ಲಿ ಮಳೆ ಗಾಳಿಗೆ ಗೋಡೆ ಕುಸಿದು ಕನಿಷ್ಠ ಆರು ಭಕ್ತರು ಪ್ರಾಣ ಕಳೆದುಕೊಂಡಿದ್ದಾರೆ. 12ರಿಂದ 14 ಜನರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಜಾತ್ ತೆಹಸಿಲ್ ವ್ಯಾಪ್ತಿಯ ಮೋಥೆವಾಡಿ ಗ್ರಾಮದ ಮಾರ್ಗುದೇವಿ ದೇವಸ್ಥಾನದಲ್ಲಿ ಈ ದುರಂತ ನಡೆದಿದೆ. ಮಂಗಳವಾರ ದೇವಾಲಯಕ್ಕೆ ಹೆಚ್ಚಿನ ಸಂಖ್ಯೆಯ ಭಕ್ತರು ಭೇಟಿ ನೀಡುತ್ತಿದ್ದರು. ಗೋಡೆ ಕುಸಿದಾಗ 350 ಜನರು ದೇಗುಲದ ಆವರಣದಲ್ಲಿದ್ದರು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಇದ್ದಕ್ಕಿದ್ದಂತೆ ಬಿರುಗಾಳಿ ಸಹಿತ ಮಳೆ ಸುರಿದು ಗೋಡೆ ಕುಸಿದಿದೆ. ಹಲವರು ಅದರಡಿ ಸಿಲುಕಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಅಧಿಕಾರಿಗಳು ಮತ್ತು ಸ್ಥಳೀಯರು ರಕ್ಷಿಸಿ ಆಸ್ಪತ್ರೆಗೆ ಸಾಗಿಸಿದರು. ಮೃತರಲ್ಲಿ ಮೂವರು ಮೂವರು ಸ್ಥಳೀಯರು ಮತ್ತು ಮೂವರು ಬಿಜಾಪುರ ತಾಲೂಕಿನವರು.

ಗಾಯಗೊಂಡವರಲ್ಲಿ ಕನಿಷ್ಠ 14 ಜನರು ಗಂಭೀರ ಸ್ಥಿತಿಯಲ್ಲಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಸಾಂಗ್ಲಿ ಎಸ್​ಪಿ ತುಷಾರ್ ದೋಷಿ ಹೇಳಿದ್ದಾರೆ.

Related Posts

Leave a Reply

Your email address will not be published. Required fields are marked *