Thursday, October 08, 2026
Menu

ಕ್ರಿಪ್ಟೋಕರೆನ್ಸಿ PMLA ಪ್ರಕರಣ: ರಾಬಿನ್ ಖಾಂಡೇಲ್‌ವಾಲ್,ಶ್ರೀಕಿಗೆ ಹೈಕೋರ್ಟ್ ಜಾಮೀನು

ಬೆಂಗಳೂರು: ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ (PMLA) ಅಡಿ ದಾಖಲಾದ ಕುಖ್ಯಾತ ಕ್ರಿಪ್ಟೋಕರೆನ್ಸಿ ಹಾಗೂ ಬಿಟ್‌ಕಾಯಿನ್ ಹಗರಣದ ತನಿಖೆಗೆ ಸಂಬಂಧಿಸಿದಂತೆ, ಜಾರಿ ನಿರ್ದೇಶನಾಲಯ (ED) ಬಂಧಿಸಿದ್ದ ಪ್ರಮುಖ ಆರೋಪಿಗಳಾದ ರಾಬಿನ್ ಖಾಂಡೇಲ್‌ವಾಲ್ ಹಾಗೂ ಶ್ರೀಕೃಷ್ಣ ರಮೇಶ್ ಅಲಿಯಾಸ್ ‘ಶ್ರೀಕಿ’ ಅವರಿಗೆ ಕರ್ನಾಟಕ ಹೈಕೋರ್ಟ್ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.ನ್ಯಾಯಮೂರ್ತಿ ಎಸ್. ವಿಶ್ವಜಿತ್ ಶೆಟ್ಟಿ ಅವರ ಏಕಸದಸ್ಯ ಪೀಠವು ಈ ಆದೇಶ ಹೊರಡಿಸಿದೆ.

ಪ್ರಕರಣದ ವಿವರ
PMLA ಕಾಯ್ದೆಯಡಿ ದಾಖಲಾಗಿರುವ ಈ ಪ್ರಕರಣದ ತನಿಖೆಯಲ್ಲಿ, ಇದುವರೆಗೆ ಮೂವರು ಆರೋಪಿಗಳು ಒಟ್ಟು *294.93 ಕೋಟಿ ರೂಪಾಯಿ ಆದಾಯ ಗಳಿಸಿದ್ದಾರೆ ಎಂಬುದು ಬೆಳಕಿಗೆ ಬಂದಿದೆ ಎಂದು ತನಿಖಾ ಸಂಸ್ಥೆಯಾದ ಇಡಿ (ED) ಆರೋಪಿಸಿದೆ.2021ರಲ್ಲಿ ದಾಖಲಾಗಿದ್ದ ಈ ಪ್ರಕರಣಕ್ಕೆ ಸಂಬಂಧಿಸಿದಂತೆ 1ನೇ ಮತ್ತು 3ನೇ ಆರೋಪಿಗಳಾದ ರಾಬಿನ್ ಖಾಂಡೇಲ್‌ವಾಲ್ ಹಾಗೂ ಶ್ರೀಕೃಷ್ಣ ರಮೇಶ್ ಅವರನ್ನು ಕಳೆದ ಮೇ 8ರಂದು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು. ತನಿಖೆ ಪೂರ್ಣಗೊಂಡ ಬಳಿಕ ಕಳೆದ ಜುಲೈನಲ್ಲಿ ಪ್ರಾಸಿಕ್ಯೂಷನ್ ದೂರು (ಚಾರ್ಜ್‌ಶೀಟ್) ಸಲ್ಲಿಸಲಾಗಿದ್ದು, ವಿಚಾರಣಾ ನ್ಯಾಯಾಲಯದಲ್ಲಿ ಪ್ರಕರಣವು ಸದ್ಯ ಪರಿಗಣನೆಗೆ ತೆಗೆದುಕೊಳ್ಳುವ ಹಂತದಲ್ಲಿದೆ.
ಅರ್ಜಿದಾರರ ವಾದ
ಚಾರ್ಜ್‌ಶೀಟ್‌ನಲ್ಲಿರುವ ಆರೋಪಗಳ ಪ್ರಮಾಣ ಹಾಗೂ ಸಾಕ್ಷಿಗಳ ಸಂಖ್ಯೆಯನ್ನು ಪರಿಗಣಿಸಿದರೆ ಮುಂದಿನ ದಿನಗಳಲ್ಲಿ ವಿಚಾರಣೆ ಶೀಘ್ರವಾಗಿ ಪೂರ್ಣಗೊಳ್ಳುವ ಸಾಧ್ಯತೆ ತೀರಾ ಕಡಿಮೆ ಎಂದು ಅರ್ಜಿದಾರರು ವಾದಿಸಿದ್ದರು. ಅಲ್ಲದೆ, ಇದೇ ರೀತಿಯ ಸಂದರ್ಭಗಳಲ್ಲಿ ಸುಪ್ರೀಂ ಕೋರ್ಟ್ ನಿಯಮಿತ ಜಾಮೀನು ನೀಡಿರುವುದನ್ನು ಉಲ್ಲೇಖಿಸಿ ತಮ್ಮ ಪರ ವಕೀಲರ ಮೂಲಕ ಮನವಿ ಮಾಡಿಕೊಂಡಿದ್ದರು.
ಇಡಿ (ED) ವಾದದ ವಿರೋಧ: ಅಂತಿಮ ವರದಿ ಸಲ್ಲಿಕೆಯಾಗಿದ್ದರೂ ಆದಾಯದ ಸಂಪೂರ್ಣ ಮೊತ್ತವನ್ನು ಇನ್ನೂ ಸಂಪೂರ್ಣವಾಗಿ ಪತ್ತೆಹಚ್ಚಲಾಗಿಲ್ಲ ಎಂದು ಜಾರಿ ನಿರ್ದೇಶನಾಲಯ ವಾದಿಸಿತು. ಅರ್ಜಿದಾರರಿಗೆ ಜಾಮೀನು ನೀಡಿದರೆ ಅವರು ಅಪರಾಧದ ಮೂಲಕ ಗಳಿಸಿದ ಆದಾಯವನ್ನು ದುರ್ಬಳಕೆ ಮಾಡುವ ಅಥವಾ ಬೇರೆಡೆಗೆ ವರ್ಗಾಯಿಸುವ ಸಾಧ್ಯತೆಯಿದೆ ಎಂದು ತಿಳಿಸಿ, ಜಾಮೀನು ಅರ್ಜಿಯನ್ನು ತಿರಸ್ಕರಿಸುವಂತೆ ಕೋರಿತ್ತು.

ನ್ಯಾಯಾಲಯದ ಕಠಿಣ ಷರತ್ತುಗಳು

ಉಭಯ ಪಕ್ಷಗಳ ವಾದ-ಪ್ರತಿವಾದಗಳನ್ನು ಆಲಿಸಿದ ಹೈಕೋರ್ಟ್, ಕೆಲವು ಕಟ್ಟುನಿಟ್ಟಿನ ಷರತ್ತುಗಳೊಂದಿಗೆ ಆರೋಪಿಗಳಿಗೆ ಬಿಡುಗಡೆ ಭಾಗ್ಯ ಕರುಣಿಸಿದೆ:

1. ಆರೋಪಿಗಳು ತಲಾ 1 ಲಕ್ಷ ರೂಪಾಯಿ ಮೊತ್ತದ ವೈಯಕ್ತಿಕ ಬಾಂಡ್ ಹಾಗೂ ಅದೇ ಮೊತ್ತಕ್ಕೆ ಇಬ್ಬರು ಭದ್ರತಾ ಜಾಮೀನುದಾರರನ್ನು ಒದಗಿಸಬೇಕು.
2. ವಿಚಾರಣಾ ನ್ಯಾಯಾಲಯದಲ್ಲಿ (Trial Court) ನಡೆಯುವ ಎಲ್ಲಾ ವಿಚಾರಣೆಗಳ ದಿನಾಂಕದಂದು ತಪ್ಪದೆ ಕಡ್ಡಾಯವಾಗಿ ಹಾಜರಾಗಬೇಕು.
#CryptoScam #PMLACase #KarnatakaHighCourt #Sriki #RobinKhandelwal #ED #BitcoinScam #LegalNews #Udayakala

Related Posts

Leave a Reply

Your email address will not be published. Required fields are marked *