Tuesday, September 01, 2026
Menu

ಲಾರಿಗೆ ಬೈಕ್‌ ಡಿಕ್ಕಿ: ಸವಾರರಿಬ್ಬರು ಸ್ಥಳದಲ್ಲೇ ಸಾವು

ಗದಗದ ರೋಣ ತಾಲೂಕಿನ ಇಟಗಿ ಕ್ರಾಸ್‌ ಬಳಿ ಲಾರಿಗೆ ಬೈಕ್‌ ಡಿಕ್ಕಿ ಹೊಡೆದು ಸವಾರರಿಬ್ಬರು ಸ್ಥಳದಲ್ಲೇ ಮೃತಪಟ್ಟಿರುವ ದಾರುಣ ಘಟನೆ ನಡೆದಿದೆ. 65 ವರ್ಷದ ಶರಣಪ್ಪ ಜಾಲಿಹಾಳ, 59 ವರ್ಷದ ಸುರೇಶ ತಳವಾರ ಮೃತಪಟ್ಟವರು ಎಂದು ಗುರುತಿಸಲಾಗಿದೆ. ಇವರು ರೋಣ ತಾಲೂಕಿನ ಹೊಸಳ್ಳಿ ಗ್ರಾಮದ ನಿವಾಸಿಗಳು.

ಅಕ್ರಮವಾಗಿ ಮಣ್ಣು ತುಂಬಿಕೊಂಡು ಟಿಪ್ಪರ್‌ ರೋಣದಿಂದ ಗಜೇಂದ್ರಗಡ ಕಡೆಗೆ ಅತಿವೇಗವಾಗಿ ಹೊರಟಿತ್ತು. ಇಟಗಿಯಿಂದ ಹೊಸಳ್ಳಿ ಕಡೆಗೆ ಬೈಕ್ ಸವಾರರು ಹೊರಟಿದ್ದರು. ಟಿಪ್ಪರ್‌ ಡಿಕ್ಕಿ ಹೊಡೆದ ರಭಸಕ್ಕೆ ಬೈಕ್ ಸಂಪೂರ್ಣ ನಜ್ಜುಗುಜ್ಜಾಗಿದೆ. ಟಿಪ್ಪರ್ ಕೂಡ ಉರುಳಿ ಬಿದ್ದಿದೆ. ಚಾಲಕ ಟಿಪ್ಪರ್‌ ಅಲ್ಲೇ ಬಿಟ್ಟು ಪರಾರಿ ಆಗಿದ್ದಾನೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ರೋಣ ಪೊಲೀಸ್ ಠಾಣೆಯಲ್ಲಿ ‌ಪ್ರಕರಣ ದಾಖಲಾಗಿದೆ.

Related Posts

Leave a Reply

Your email address will not be published. Required fields are marked *