ಬೆಂಗಳೂರು
ಆನ್‌ಲೈನ್ ಬೆಟ್ಟಿಂಗ್ ಚಟ: ಪತ್ನಿಯ ಇರಿದು ಕೊಂದು ಪತಿ ಆತ್ಮಹತ್ಯೆಗೆ ಯತ್ನ
ಬೆಂಗಳೂರಿನ ಮಹದೇವಪುರ ಪ್ರದೇಶದಲ್ಲಿ ಗೃಹರಕ್ಷಕ ದಳದಲ್ಲಿ ಕೆಲಸ ಮಾಡುತ್ತಿದ್ದ 32 ವರ್ಷದ ಮಹಿಳೆಯನ್ನು ಆನ್‌ಲೈನ್ ಬೆಟ್ಟಿಂಗ್ ಚಟಕ್ಕೆ ದಾಸನಾಗಿದ್ದ ಪತಿಯೇ ಚಾಕುವಿನಿಂದ ಇರಿದು ಕೊಂದಿದ್ದಾನೆ. ಮಂಜುಳಾ ಕೊಲೆಯಾದ ಮಹಿಳೆ, ಆಕೆ ಮಹದೇವಪುರ ಪೊಲೀಸ್ ಠಾಣೆಯಲ್ಲಿ ಗೃಹರಕ್ಷಕ ದಳದ ಸಿಬ್ಬಂದಿಯಾದ್ದರು. ಮಂಜುಳಾ ಮತ್ತು ಪ್ರದೀಪ್ ಮದುವೆಯಾಗಿ 15 ವರ್ಷಗಳಾಗಿವೆ ಮತ್ತು ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಪ್ರದೀಪ್ ಆನ್‌ಲೈನ್ ಬೆಟ್ಟಿಂಗ್ ವ್ಯಸನಿಯಾಗಿದ್ದು, ಇದು ಆಗಾಗ ಕೌಟುಂಬಿಕ ಕಲಹಗಳಿಗೆ ಕಾರಣವಾಗುತ್ತಿತ್ತು. ಮಂಜುಳಾ ಬಗ್ಗೆ ಅನುಮಾನ
ಲೇಖಕಿ, ಪ್ರಕಾಶಕಿ ಇಂದಿರಾ ಲಂಕೇಶ್ ನಿಧನ
ಹಿರಿಯ ಪತ್ರಕರ್ತಪಿ. ಲಂಕೇಶ್ ಅವರ ಪತ್ನಿ ಲೇಖಕಿ ಇಂದಿರಾ ಲಂಕೇಶ್ (84) ವಯೋಸಹಜ ಕಾಯಿಲೆಯಿಂದ ಬೆಂಗಳೂರಿನ ರಾಜಾಜಿನಗರದಲ್ಲಿರುವ ನಿವಾಸದಲ್ಲಿ ನಿಧನರಾಗಿದ್ದಾರೆ. ಮಗಳು ಕವಿತಾ ಲಂಕೇಶ್ (ಚಿತ್ರನಿರ್ದೇಶಕಿ), ಮಗ ಇಂದ್ರಜಿತ್ ಲಂಕೇಶ್ (ಚಿತ್ರನಿರ್ದೇಶಕ ಹಾಗೂ ಪತ್ರಕರ್ತ) ಸೇರಿದಂತೆ ಬಂಧು-ಮಿತ್ರರನ್ನು ಅಗಲಿದ್ದಾರೆ. ಇಂದಿರಾ ಲಂಕೇಶ್
ಪೂಜೆ ಮಾಡಿಸದಿದ್ದರೆ ಹತ್ತು ದಿನದಲ್ಲಿ ಸೋದರನ ಸಾವು: ಹೆದರಿಸಿ ಟೆಕ್ಕಿಗೆ ವಂಚನೆ
ಸಹೋದರನಿಗೆ ಗಂಡಾಂತರವಿದೆ, ಪೂಜೆ ಮಾಡಿಸದಿದ್ದರೆ 10 ದಿನದಲ್ಲಿ ಸಾಯುತ್ತಾನೆ ಎಂದು ಹೆದರಿಸಿ ವೈಟ್‌ಪೀಲ್ಡ್‌ನ ಟೆಕ್ಕಿಯೊಬ್ಬರಿಂದ ವಂಚಕರು ಏಳು ಲಕ್ಷ ರೂ. ಮೌಲ್ಯದ 35 ಗ್ರಾಂ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ. ಪ್ರಕರಣ ಸಂಬಂಧ ನವೀದಾ ಸುಲ್ತಾನ ಮತ್ತು ಪರ್ವೇಜ್ ಎಂಬವರನ್ನು ಪೊಲೀಸರು ಬಂಧಿಸಿ
ಬ್ಯಾಂಕಾಕ್‌ನಿಂದ ಬೆಂಗಳೂರಿಗೆ ಸಾಗಿಸುತ್ತಿದ್ದ 13.14 ಕೋಟಿ ರೂ. ಮೌಲ್ಯದ ಗಾಂಜಾ ವಶ
ದೇವನಹಳ್ಳಿ ಬಳಿ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಬ್ಯಾಂಕಾಕ್‌ನಿಂದ ಅಕ್ರಮವಾಗಿ ಬೆಂಗಳೂರಿಗೆ ಸಾಗಿಸುತ್ತಿದ್ದ ಕೋಟ್ಯಂತರ ರೂಪಾಯಿ ಮೌಲ್ಯದ ಹೈಡ್ರೋಪೋನಿಕ್ ಗಾಂಜಾವನ್ನು ಜಪ್ತಿ ಮಾಡಿದ್ದಾರೆ. ಕಸ್ಟಮ್ಸ್ ಇಲಾಖೆಯ ತಪಾಸಣೆ ನಡೆಸುವಾಗ ಲಗೇಜ್ ಬ್ಯಾಗ್‌ನಲ್ಲಿ ಅಡಗಿಸಿಡಲಾಗಿದ್ದ ಒಟ್ಟು 38.34 ಕೆಜಿ ಗಾಂಜಾ
ಬೆಂಗಳೂರಲ್ಲಿ ಪ್ರತ್ಯೇಕ ರಸ್ತೆ ಅಪಘಾತಗಳು: ನಾಲ್ವರ ಸಾವು
ವೈಟ್ ಫೀಲ್ಡ್ ಬಳಿಯ ಸಿದ್ದಾಪುರದಲ್ಲಿ ತಾಯಿ-ಮಗಳು ಹೋಗುತ್ತಿದ್ದ ಬೈಕ್ ಮಳೆ ನೀರಲ್ಲಿ ಸ್ಕಿಡ್ ಆಗಿ ರಸ್ತೆಗೆ ಬಿದ್ದ ತಾಯಿ ಮೇಲೆ ಶಾಲಾ ಬಸ್ ಹರಿದು ತೀವ್ರ ಗಾಯಗೊಂಡಿದ್ದ ತಾಯಿ ಕಾಂತಮ್ಮ ಮೃತಪಟ್ಟಿದ್ದಾರೆ. ಮಗಳು ನೇಹಾ ಸ್ಥಿತಿ ಕೂಡ ಗಂಭೀರವಾಗಿದ್ದು, ಖಾಸಗಿ ಆಸ್ಪತ್ರೆಗೆ
ಬೈಕ್‌ಗೆ ಲಾರಿ ಡಿಕ್ಕಿ: ಇಬ್ಬರ ಸಾವು
ಬೆಂಗಳೂರಿನ ಗೊರಗುಂಟೆಪಾಳ್ಯದ ಟಿಎಂಟಿ ಜಂಕ್ಷನ್ ಬಳಿ ನಡೆದ ಭೀಕರ ಅಪಘಾತದಲ್ಲಿ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ದ್ವಿಚಕ್ರ ವಾಹನಕ್ಕೆ ಗ್ಯಾಸ್ ಸಿಲಿಂಡರ್ ತುಂಬಿದ್ದ ಗೂಡ್ಸ್ ಲಾರಿ ಡಿಕ್ಕಿ ಹೊಡೆದ ಪರಿಣಾಮ ಅಪಘಾತ ಸಂಭವಿಸಿದೆ. ಬೈಕ್‌ನಲ್ಲಿದ್ದ ಮಹಿಳೆ, ಪುರುಷ ಮೃತಪಟ್ಟಿದ್ದು, ಸ್ಥಳಕ್ಕೆ ಯಶವಂತಪುರ ಸಂಚಾರ
ನಕಲಿ ಪದವಿ ಅಂಕಪಟ್ಟಿ ಮಾರಾಟ ದಂಧೆ ಆರೋಪಿ ಅರೆಸ್ಟ್
ನಕಲಿ ಪದವಿ ಅಂಕಪಟ್ಟಿಗಳನ್ನು ತಯಾರಿಸಿ ಮಾರಾಟ ಮಾಡುತ್ತಿದ್ದ ಜಾಲವನ್ನು ಬೆಂಗಳೂರು ಸಿಸಿಬಿ ಪೊಲೀಸರು ಪತ್ತೆ ಹಚ್ಚಿದ್ದಾರೆ. ಕೋರಮಂಗಲದಲ್ಲಿ ಕಚೇರಿ ತೆರೆದು ನಕಲಿ ಅಂಕಪಟ್ಟಿಗಳನ್ನು ಮಾರುತ್ತಿದ್ದ ಪ್ರಮುಖ ಆರೋಪಿ ರಾಜಾರೆಡ್ಡಿ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ದಂಧೆಯ ಪ್ರಮುಖ ಸೂತ್ರಧಾರಿಗಳಾದ ಕಾರ್ತಿಕ್ ಹಾಗೂ ಆರ್ಯನ್
ಕಸ ಸಂಸ್ಕರಣೆ 39,000 ಕೋಟಿ ರೂ. ಹಗರಣ, 10,000 ಕೋಟಿ ರೂ. ಕಿಕ್‌ಬ್ಯಾಕ್: ಆರ್ ಅಶೋಕ
ಕಾಂಗ್ರೆಸ್ ಸರ್ಕಾರ ಬೆಂಗಳೂರಿನಲ್ಲಿ ಕಸ ಸಂಸ್ಕರಣೆ ಮಾಡುವ ನೆಪದಲ್ಲಿ 39,000 ಕೋಟಿ ರೂ. ಹಗರಣ ನಡೆಸಿದೆ. 35 ವರ್ಷಗಳ ಸುದೀರ್ಘ ಅವಧಿಗೆ ಎಂಎಸ್‌ಡಬ್ಲ್ಯು ಸೊಲ್ಯೂಶನ್ಸ್ ಗೆ ನೀಡುತ್ತಿರುವ ಟೆಂಡರ್‌ನ ಒಟ್ಟು ಮೊತ್ತದಲ್ಲಿ 10,000 ಕೋಟಿ ರೂ. ಕಿಕ್‌ಬ್ಯಾಕ್ ಪಡೆಯಲಾಗಿದೆ ಎಂದು ಪ್ರತಿಪಕ್ಷ
ಕೆಲಸಕ್ಕಿದ್ದ ಮನೆಯಿಂದ 25 ಲಕ್ಷ ರೂ.ಕಳವುಗೈದು ಪರಾರಿಯಾಗುತ್ತಿದ್ದ ದಂಪತಿ ಅರೆಸ್ಟ್
ಬೆಂಗಳೂರಿನ ಕಾಂಟ್ರಾಕ್ಟರ್ ಮನೆಯಲ್ಲಿ ಕೆಲಸಕ್ಕೆ ಸೇರಿದ್ದ ನೇಪಾಳಿ ದಂಪತಿ, 25 ಲಕ್ಷ ರೂಪಾಯಿ ಕಳ್ಳತನ ಮಾಡಿ ಪರಾರಿಯಾಗಲು ಯತ್ನಿಸಿದ್ದು, ಅಮೃತಹಳ್ಳಿ ಪೊಲೀಸರು ದಾಳಿ ನಡೆಸಿ ಬಂಧಿಸಿ ಹಣ ವಶಕ್ಕೆ ಪಡೆದುಕೊಂಡಿದ್ದಾರೆ. ನೇಪಾಳದ ಪವನ್ ಬಿಸ್ತಾ ಮತ್ತು ಸೀತಾ ಬಿಸ್ತಾ ಬಂಧಿತರು. ದಂಪತಿ
ಅವಲಹಳ್ಳಿಯಲ್ಲಿ ಅಕ್ರಮ ಸ್ಫೋಟಕ ಸಂಗ್ರಹ ಪತ್ತೆ
ಬೆಂಗಳೂರಿನ ಅವಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಕಾಡ ಅಗ್ರಹಾರದಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ 225 ಜಿಲೆಟಿನ್ ಕಡ್ಡಿ ಹಾಗೂ 50 ಡಿಟೋನೇಟರ್ ಪತ್ತೆಯಾಗಿದ್ದು, ಪೊಲೀಸರು ವಶಪಡಿಸಿಕೊಂಡು ಯಾವ ಕಾರಣಕ್ಕೆ ಸ್ಫೋಟಕ ಸಂಗ್ರಹಿಸಿಡಲಾಗಿತ್ತು ಎಂಬ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಖಚಿತ ಮಾಹಿತಿ ಆಧರಿಸಿ ಕಾರ್ಯಾಚರಣೆ




