ಬಿಟ್‌ಕಾಯಿನ್ ಅಕ್ರಮ: ಶಾಸಕ ಹ್ಯಾರಿಸ್ ಮಕ್ಕಳ ಮನೆ ಮೇಲೆ ಇಡಿ ದಾಳಿ
ಬಿಟ್‌ಕಾಯಿನ್ ಅಕ್ರಮ ಪ್ರಕರಣದ ಪ್ರಮುಖ ಆರೋಪಿ ಶ್ರೀಕಿ ಜತೆ ಹಣಕಾಸು ವಹಿವಾಟು ನಡೆಸಿರುವ ಹಿನ್ನೆಲೆ ಕಾಂಗ್ರೆಸ್ ಶಾಸಕ ಎನ್ ಎ ಹ್ಯಾರಿಸ್ ಅವರ ಇಬ್ಬರು ಮಕ್ಕಳು ಮತ್ತು ಇತರರ ನಿವಾಸಗಳ ಮೇಲೆ ಇಡಿ ದಾಳಿ ನಡೆಸಿದೆ. ಸೋಮವಾರ ಬೆಳಿಗ್ಗೆ 6.30ಕ್ಕೆ ಇಡಿ ಬೆಂಗಳೂರು ವಲಯದ 100ಕ್ಕೂ ಹೆಚ್ಚು ಸಿಬ್ಬಂದಿ ಬೆಂಗಳೂರಿನ ಗರುಡಾ ಮಾಲ್ ಹಿಂಭಾಗದಲ್ಲಿರುವ ಶಾಸಕ ಹ್ಯಾರಿಸ್ ಅವರ ಶಾಂತಿನಗರದ ನಿವಾಸವೂ ಸೇರಿ ಒಟ್ಟು 17 ಕಡೆ ದಾಳಿ ನಡೆಸಿದ್ದಾರೆ.
ಕ್ಷೇತ್ರ ಮರುವಿಂಗಡನೆ ಹೊಸ ಜನಗಣತಿ ನಂತರ ಮಾಡುವುದು ಸೂಕ್ತ : ಸಿಎಂ ಸಿದ್ದರಾಮಯ್ಯ
ಕ್ಷೇತ್ರ ಮರುವಿಂಗಡನೆಯನ್ನು ಹೊಸ ಜನಗಣತಿಯಾದ ನಂತರ ಮಾಡುವುದು ಸೂಕ್ತ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಮೈಸೂರಿಗೆ ಆಗಮಿಸಿದ ಸಂದರ್ಭದಲ್ಲಿ ಮಾಧ್ಯಮದವರ ಜೊತೆ ಮಾತನಾಡಿ, ನಾವು ಅದಕ್ಕಾಗಿಯೇ ಕ್ಷೇತ್ರ ಮರು ವಿಂಗಡಣೆಯನ್ನು ವಿರೋಧ ಮಾಡಿದೆವು. ನಾವು ಎಂದಿಗೂ ಮಹಿಳಾ ಮೀಸಲಾತಿಯ ಪರವಾಗಿಯೇ
ಉಧಂಪುರದಲ್ಲಿ ಬಸ್ ಉರುಳಿ 15 ಮಂದಿ ಸಾವು
ಚಾಲಕನ ನಿಯಂತ್ರಣ ತಪ್ಪಿದ ಬಸ್ ಕಂದಕಕ್ಕೆ ಉರುಳಿಬಿದ್ದು, 15 ಮಂದಿ ಪ್ರಾಣ ಕಳೆದುಕೊಂಡಿರುವ ಘಟನೆ ಜಮ್ಮು ಮತ್ತು ಕಾಶ್ಮೀರದ ಉಧಂಪುರ ಜಿಲ್ಲೆಯಲ್ಲಿ ನಡೆದಿದೆ. ಘಟನೆಯಲ್ಲಿ ಹಲವರು ಗಾಯಗೊಂಡಿದ್ದು, ಕೆಲವರ ಸ್ಥಿತಿ ಗಂಭೀರವಾಗಿದೆ, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಮುಂದುವರಿದಿದೆ. ರಾಮನಗರದಿಂದ ಉಧಂಪುರಕ್ಕೆ
ಹರ್ಮುಜ್ ಜಲಸಂಧಿಯಲ್ಲಿ ಹಡಗುಗಳ ಮೇಲೆ ಇರಾನ್ ದಾಳಿ: ನಾಲ್ವರು ಭಾರತೀಯರ ಸಾವು
ಹರ್ಮುಜ್ ಜಲಸಂಧಿಯಲ್ಲಿ ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ಭಾರತದ ಎರಡು ಹಡಗುಗಳ ಮೇಲೆ ಏಕಾಏಕಿ ಗುಂಡಿನ ದಾಳಿ ನಡೆಸಿದೆ. ದಾಳಿಯಲ್ಲಿ ನಾಲ್ವರು ಭಾರತೀಯ ನಾವಿಕರು ಬಲಿಯಾಗಿದ್ದು, ಒಬ್ಬ ನಾವಿಕ ನಾಪತ್ತೆಯಾಗಿರುವುದಾಗಿ ಭಾರತದ ವಿದೇಶಾಂಗ ಇಲಾಖೆ ಅಧಿಕೃತ ಮಾಹಿತಿ ನೀಡಿದೆ. ಭಾರತದ
ಮದುವೆ ಸಿದ್ಧತೆ, ಬ್ಯಾಂಕ್ ಲಾಕರ್‌ನಿಂದ ಒಡವೆ ಮನೆಯಲ್ಲಿ ತಂದಿಟ್ಟ ಶಿರಸಿಯ ವೈದ್ಯನ ಕೊಲೆ
ಮದುವೆ ಸಿದ್ಧತೆಯಲ್ಲಿದ್ದ ಶಿರಸಿಯ ನ್ಯೂ KHB ಕಾಲೋನಿಯ ನಿವಾಸಿಯಾಗಿದ್ದ ವೈದ್ಯರೊಬ್ಬರು ಬ್ಯಾಂಕ್ ಲಾಕರ್‌ನಿಂದ ಒಡವೆಗಳನ್ನು ಮನೆಗೆ ತಂದಿಟ್ಟಿದ್ದು, ದುಷ್ಕರ್ಮಿಗಳು ಮನೆಗೆ ನುಗ್ಗಿ ಕೊಲೆಗೈದು ಪರಾರಿಯಾಗಿದ್ದಾರೆ. ವೈದ್ಯ ರಮೇಶ್ ಕಲಗುಟಕರ(51) ಕೊಲೆಯಾದ ವ್ಯಕ್ತಿ, ಇವರ ಪತ್ನಿ ಎಂಟು ತಿಂಗಳ ಹಿಂದೆ ಮೃತಪಟ್ಟಿದ್ದು, 45
ಮದುವೆಗೆಂದು ಹುಡುಗಿ ನೋಡಲು ಹೋಗುತ್ತಿದ್ದ ಕುಟುಂಬ ಹೊಸಪೇಟೆಯಲ್ಲಿ ರಸ್ತೆ ಅಪಘಾತಕ್ಕೆ ಬಲಿ
ಹೊಸಪೇಟೆ ತಾಲೂಕಿನ ಡಾಣಾಪುರ ಬಳಿಯ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ನಡೆದ ಸರಣಿ ಅಪಘಾತದಲ್ಲಿ ಒಂದೇ ಕುಟುಂಬದ ನಾಲ್ವರು ಅಸು ನೀಗಿದ್ದು, ಹಲವರು ಗಾಯಗೊಂಡಿದ್ದಾರೆ. ಮರಿಯಮ್ಮನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಪಘಾತ ನಡೆದಿದೆ. ಮಗನ ಮದುವೆಗಾಗಿ ಕನ್ಯೆ ನೋಡಲು ತೆರಳುತ್ತಿದ್ದಾಗ ಈ ದುರಂತ
ಅರಸೀಕೆರೆಯಲ್ಲಿ ಕೆರೆಗೆ ಬಿದ್ದ ಅಳಿಯನ ರಕ್ಷಿಸಲು ಹೋದ ಮಾವನೂ ನೀರುಪಾಲು
ಕೆರೆಯಲ್ಲಿ ಮುಳುಗುತ್ತಿದ್ದ ಅಳಿಯನ ರಕ್ಷಿಸಲು ಹೋಗಿ ಮಾವನೂ ನೀರಲ್ಲಿ ಮುಳುಗಿ ಮೃತಪಟ್ಟ ದಾರುಣ ಘಟನೆಯೊಂದು ಹಾಸನದ ಅರಸೀಕೆರೆ ತಾಲೂಕಿನ ಎನ್.ಹೊಸಳ್ಳಿ ಗ್ರಾಮದಲ್ಲಿ ನಡೆದಿದೆ. 12 ವರ್ಷದ ಪ್ರತೀಕ್ ಹಾಗೂ ಮಾವ 45 ವರ್ಷದ ಪ್ರಭಾಕರ್ ಮೃತಪಟ್ಟವರು. ಪ್ರತೀಕ್ ಬೇಸಿಗೆ ರಜೆಯಲ್ಲಿ ಮಾವ
ಬೇಕಿದೆ ದಕ್ಷಿಣಕ್ಕೆ ಸುಪ್ರೀಂಕೋರ್ಟ್ ಪೀಠ
ದಕ್ಷಿಣದಲ್ಲಿ ಎಲ್ಲಿ ಸುಪ್ರೀಂಕೋರ್ಟ್ ಸ್ಥಾಪನೆ ಆಗಬೇಕೆಂಬುದನ್ನು ಸುಪ್ರೀಂ ಕೋರ್ಟ್ ಆಡಳಿತದ ಪ್ರಧಾನ ಅಧಿಕಾರಿಯೂ ಆಗಿರುವ ಸಿಜೆಐ ಹಾಗೂ ಕೊಲಿಜಿಯಂ ವಿವೇಚನೆಗೆ ಬಿಟ್ಟ ವಿಚಾರ. ಬೆಂಗಳೂರು ಸೇರಿದಂತೆ ಹೈದರಾಬಾದ್ ಮತ್ತು ಚೆನ್ನೈ ಮಹಾನಗರಗಳು ಸುಪ್ರೀಂಕೋರ್ಟ್ ಪೀಠ ಸ್ಥಾಪನೆಗೆ ಎಲ್ಲ ರೀತಿಯಲ್ಲಿಯೂ ಯೋಗ್ಯ ಸ್ಥಳಗಳು.
ಅಮೆರಿಕದಿಂದ ಕದನ ವಿರಾಮ ಉಲ್ಲಂಘನೆ: ಹರ್ಮುಜ್ ಜಲಸಂಧಿ ಮೇಲೆ ಮತ್ತೆ ಇರಾನ್ ನಿರ್ಬಂಧ
ಅಮೆರಿಕ ಕದನ ವಿರಾಮವನ್ನು ಉಲ್ಲಂಘಿಸಿರುವ ಕಾರಣ ಹರ್ಮುಜ್ ಜಲಸಂಧಿಯನ್ನು ಮತ್ತೆ ಮುಚ್ಚಲಾಗುತ್ತಿದೆ ಎಂದು ಇರಾನ್ ಹೇಳಿದೆ. ಇರಾನ್ ನಿರ್ಣಾಯಕ ಜಲಮಾರ್ಗವಾಗಿರುವ ಹರ್ಮುಜ್ ಜಲಸಂಧಿಯ ಮೇಲೆ ಮತ್ತೆ ನಿರ್ಬಂಧಗಳನ್ನು ಹೇರಿದ್ದು, ತೆರೆಯುವ ನಿರ್ಧಾರವನ್ನು ಹಿಂತೆಗೆದುಕೊಂಡಿದೆ. ಇರಾನ್ ಸಂಬಂಧಿತ ಹಡಗು ಸಾಗಣೆಯ ಮೇಲಿನ ದಿಗ್ಬಂಧನವನ್ನು
ಒಮ್ಮತದಿಂದ ಸ್ವೀಕೃತಗೊಂಡಿದ್ದ ಮಹಿಳಾ ಮೀಸಲು ಮಸೂದೆ ಮರಳಿ ತನ್ನಿ: ಪ್ರಿಯಾಂಕಾ ಗಾಂಧಿ
ಹಿಂದೆ ಎಲ್ಲಾ ರಾಜಕೀಯ ಪಕ್ಷಗಳಿಂದ ಒಮ್ಮತದಿಂದ ಸ್ವೀಕೃತಗೊಂಡಿದ್ದ ಮಹಿಳಾ ಮೀಸಲು ಮಸೂದೆಯನ್ನು ಮರಳಿ ತರುವಂತೆ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಕೇಂದ್ರ ಸರ್ಕಾರಕ್ಕೆ ಸವಾಲು ಹಾಕಿದರು. ಎಲ್ಲಾ ಪಕ್ಷಗಳಿಂದ ಅಂಗೀಕರಿಸಲ್ಪಟ್ಟ ಹಳೆಯ ಮಹಿಳಾ ಮಸೂದೆಯನ್ನು ಸೋಮವಾರವೇ ಕೇಂದ್ರ ಸರ್ಕಾರ ಮಂಡಿಸಬೇಕು. ಸಂಸತ್




