Menu

ನಿಶ್ಚಿತಾರ್ಥ ಮುಗಿಸಿ ವಾಪಸಾಗುತ್ತಿದ್ದಾಗ ಹನೂರಿನಲ್ಲಿ ಬಸ್‌ ಪಲ್ಟಿಯಾಗಿ ವ್ಯಕ್ತಿ ಸಾವು

ಚಾಮರಾಜನಗರದ ಹನೂರು ತಾಲೂಕಿನ ಬಂಡಳ್ಳಿ ಹೊರ ವಲಯದ ತೆಳ್ಳನೂರು ರಸ್ತೆಯಲ್ಲಿ ಭಾನುವಾರ ರಾತ್ರಿ ಚಾಲಕನ ನಿಯಂತ್ರಣ ತಪ್ಪಿದ ಖಾಸಗಿ ಬಸ್​ ಉರುಳಿ ಬಿದ್ದು ಕ್ಲೀನರ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಕೊಳ್ಳೇಗಾಲ ತಾಲೂಕಿನ ದೊಡ್ಡಿಂದುವಾಡಿ ಗ್ರಾಮದ ನವೀನ್(38) ಮೃತಪಟ್ಟವರು. ಘಟನೆಯಲ್ಲಿ 30ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಶಾಗ್ಯ ಗ್ರಾಮದ ಜನರು ನಿಶ್ಚಿತಾರ್ಥಕ್ಕೆಂದು ಬಸ್​​ನಲ್ಲಿ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಹಳ್ಳಿಗೆ ಹೋಗಿದ್ದವರು ಕಾರ್ಯಕ್ರಮ ಮುಗಿಸಿ ಗ್ರಾಮಕ್ಕೆ ಹಿಂತಿರುಗು ತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿ

ಕರೆದಾಗ ಬರಲಿಲ್ಲವೆಂದು ಮೂರು ವರ್ಷದ ಮಗುವಿನ ಕೈ ಮುರಿದ ಚಿಕ್ಕಪ್ಪ

ಮೈಸೂರಿನ ಹುಣಸೂರು ತಾಲೂಕು ಬೀರನಹಳ್ಳಿ ಗ್ರಾಮದಲ್ಲಿ ಆಟವಾಡುತ್ತಿದ್ದ ಮೂರು ವರ್ಷದ ಮಗು ತಾನು ಕರೆದಾಗ ಬರಲಿಲ್ಲವೆಂದು  ಚಿಕ್ಕಪ್ಪನೊಬ್ಬ ಮಗುವಿನ ಮೇಲೆ ಹಲ್ಲೆ ಮಾಡಿ ಕೈ ಮುರಿದಿದ್ದಾನೆ. ಚಿಕ್ಕಪ್ಪ  ಆನಂದ್‌ ಎಂಬಾತ ಮಗುವಿಗೆ ದೊಣ್ಣೆಯಿಂದ ಹೊಡೆದು ಎರಡು ಕೈಮುರಿದಿದ್ದು  ಪೊಲೀಸರು ಆತನನ್ನು ಬಂಧಿಸಿದ್ದಾರೆ. 

ಚಿನ್ನಾಭರಣವಿದ್ದ ಬ್ಯಾಗ್ ಹಿಂತಿರುಗಿಸಿದ ತುಮಕೂರಿನ ಆಟೋ‌ ಚಾಲಕ

ತುಮಕೂರು‌ ನಗರದಲ್ಲಿ  ಆಟೋ‌ ಚಾಲಕರೊಬ್ಬರು ಚಿನ್ನಾಭರಣವಿದ್ದ ಬ್ಯಾಗ್ ಅನ್ನು ಪ್ರಯಾಣಿಕರಿಗೆ ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದು ಸುದ್ದಿಯಾಗಿದ್ದಾರೆ. ತುಮಕೂರಿನ ಹನುಮಂತಪುರ  ನಿವಾಸಿ ರವಿಕುಮಾರ್‌ ಅವರ ಆಟೋದಲ್ಲಿ ಪ್ರಯಾಣಿಕರು 4 ಲಕ್ಷ ಬೆಲೆ ಬಾಳುವ ಒಡವೆ ಇದ್ದ ಬ್ಯಾಗ್ ಬಿಟ್ಟು ಹೋಗಿದ್ದರು. ಅರಸೀಕೆರೆ ಮೂಲದ

ಬಾಲಕಿಗೆ ಬಲವಂತವಾಗಿ ಮದುವೆ ಮಾಡಿ ಕರೆದೊಯ್ದ ಆರೋಪಿಗಳ ಬಂಧನ

ರಾಜ್ಯದ ಗಡಿಭಾಗ ತಮಿಳುನಾಡಿಗೆ ಸೇರಿರುವ ಅಂಚೆಟ್ಟಿ ಗ್ರಾಮದಲ್ಲಿ 7ನೇ ತರಗತಿ ವಿದ್ಯಾರ್ಥಿನಿಗೆ ಬಲವಂತವಾಗಿ ಬಾಲ್ಯವಿವಾಹ ಮಾಡಿ, ಬಾಲಕಿ ಬರುವುದಿಲ್ಲ ಎಂದು ಕಿರುಚಾಡಿದರೂ ಕುಟುಂಬಸ್ಥರು ಆಕೆಯನ್ನು ಹೊತ್ತೊಯ್ದ ಘಟನೆ ನಡೆದಿದೆ. ಈ ದೃಶ್ಯದ ವೀಡಿಯೊ ವೈರಲ್‌ ಆಗಿದ್ದು, ಆರೋಪಿಗಳು ಮದುವೆ ಮಾಡಿ ಬಾಲಕಿ

ಮುಡಾಗೆ ವಾಪಸ್‌ ಮಾಡಿರೋ ಸೈಟ್‌ ಪಾರ್ವತಿ ಮತ್ತೆ ಕೇಳಲಿದ್ದಾರೆ: ಶಾಸಕ ಯತೀಂದ್ರ

ಮುಡಾದಿಂದ ಅಕ್ರಮವಾಗಿ ಸೈಟುಗಳನ್ನು ಪಡೆದ ಆರೋಪ ಕೇಳಿ ಬಂದ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪತ್ನಿ ಬಿಎಂ ಪಾರ್ವತಿ ಸೈಟ್‌ಗಳನ್ನು ವಾಪಸ್‌ ಮಾಡಿದ್ದರು.  ಈ ಸೈಟ್‌ಗಳನ್ನು ಅವರು ಮತ್ತೆ ಕ್ಲೈಮ್ ಮಾಡಲಿದ್ದಾರೆ ಎಂದು ಶಾಸಕ ಯತೀಂದ್ರ ಸಿದ್ದರಾಮಯ್ಯ ಹೇಳಿದ್ದಾರೆ. ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ

ಚಾಂಪಿಯನ್ಸ್‌ ಟ್ರೋಫಿಯಲ್ಲಿ ಚಾಂಪಿಯನ್‌ ಆದ ಭಾರತ ತಂಡಕ್ಕೆ ಸಿಎಂ ಸಿದ್ದರಾಮಯ್ಯ ಅಭಿನಂದನೆ

ಅಮೋಘ‌ ಆಟದ ಮೂಲಕ ಭಾರತ ತಂಡ ಚಾಂಪಿಯನ್ ಟ್ರೋಫಿಯ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಇಡೀ ಪಂದ್ಯಾವಳಿಯಲ್ಲಿ ಸೋಲಿಲ್ಲದ ಸರದಾರರಾದ ಭಾರತೀಯ ತಂಡಕ್ಕೆ ಅಭಿನಂದನೆಗಳು  ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ  ಸಾಮಾಜಿಕ ಖಾತೆ ಎಕ್ಸ್‌ನಲ್ಲಿ  ಪೋಸ್ಟ್‌ ಮಾಡಿದ್ದಾರೆ. ಅಮೋಘ‌ ಆಟದ ಮೂಲಕ ಭಾರತ ತಂಡ

ಅಭಿವೃದ್ಧಿಯೇ ನಮ್ಮ ತಂದೆ ತಾಯಿ, ಗ್ಯಾರಂಟಿಗಳೇ ಬಂಧು ಬಳಗ: ಡಿ.ಕೆ.ಶಿವಕುಮಾರ್

“ಕಾಯಕದಲ್ಲಿಯೇ ದೇವರನ್ನು ಕಾಣಬೇಕು. ನಮಗೆ ಅಭಿವೃದ್ಧಿಯೇ ತಾಯಿ ತಂದೆ, ಗ್ಯಾರಂಟಿಗಳೇ ಬಂಧು ಬಳಗ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್  ಹೇಳಿದರು. ಕನಕಪುರ ಭೂಹಳ್ಳಿ ಹೊಸಕೆರೆ ಬಳಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿ,  “ನನ್ನ ಕ್ಷೇತ್ರಕ್ಕೆ ಸುಮಾರು ರೂ.400 ಕೋಟಿಗಳಷ್ಟು ಅನುದಾನ

ತೆಲಂಗಾಣ ಸುರಂಗ ಕುಸಿತ: 16 ದಿನದ ಬಳಿಕ ಒಂದು ಶವ ಪತ್ತೆ

ತೆಲಂಗಾಣದ ನಾಗರ್‌ಕರ್ನೂಲ್ ಜಿಲ್ಲೆಯ ಶ್ರೀಶೈಲಂ ಎಡದಂಡೆ ಕಾಲುವೆಯ ನಿರ್ಮಾಣ ಹಂತದಲ್ಲಿದ್ದ ಸುರಂಗ ಕುಸಿತದಲ್ಲಿ 16 ದಿನಗಳ ಬಳಿಕ ಒಬ್ಬ ಕಾರ್ಮಿಕನ ಶವ ಪತ್ತೆಯಾಗಿದ್ದು, ಇನ್ನೂ 7 ಕಾರ್ಮಿಕರು ಪತ್ತೆಯಾಗಿಲ್ಲ. ಪತ್ತೆಯಾಗಿರುವ ಮೃತ ಕಾರ್ಮಿಕನನ್ನು ಗುರುಪ್ರೀತ್ ಸಿಂಗ್ ಎಂದು ಗುರುತಿಸಲಾಗಿದೆ. ತೆಲಂಗಾಣ ಸಿಎಂ

ರಾಜಕೀಯದವರನ್ನು ಒಳಗೆ ಬಿಟ್ಟುಕೊಳ್ಳದಿದ್ದರೆ ಶಿಕ್ಷಣ ಸಂಸ್ಥೆಗಳು ಬೆಳೆಯುತ್ತವೆ: ಡಿಸಿಎಂ

“ಶಿಕ್ಷಣ ಸಂಸ್ಥೆಯ ಒಳಗೆ ರಾಜಕೀಯದವರನ್ನು ಸೇರಿಸಬೇಡಿ. ಆಗ ಮಾತ್ರ ಆ ಶಿಕ್ಷಣ ಸಂಸ್ಥೆಗಳು ಉನ್ನತ ಮಟ್ಟಕ್ಕೆ ಬೆಳೆಯುತ್ತವೆ. ಇಲ್ಲದಿದ್ದರೇ ಶಿಕ್ಷಣದ ಗುಣಮಟ್ಟ ಹಾಳಾಗುತ್ತದೆ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಮಳವಳ್ಳಿಯಲ್ಲಿ ಬಿಎಂ ಎಜುಕೇಶನ್ ಟ್ರಸ್ಟ್ ವತಿಯಿಂದ ನಿರ್ಮಾಣವಾಗಿರುವ ಬಿಎಂ ಪಬ್ಲಿಕ್ ಶಾಲಾ

ಮೈಸೂರು ರೈಲು ನಿಲ್ದಾಣಕ್ಕೆ ಹುಸಿ ಬಾಂಬ್ ಕರೆ!

ಮೈಸೂರು: ಇಲ್ಲಿನ ಕೇಂದ್ರ ರೈಲು ನಿಲ್ದಾಣಕ್ಕೆ ಭಾನುವಾರ ಬಾಂಬ್ ಇಟ್ಟಿರುವುದಾಗಿ ಅನಾಮಧೇಯ ಕರೆ ಬಂತು ಆತಂಕ ಸೃಷ್ಟಿಸಿತ್ತು. ಆರ್‌ಪಿಎಫ್ ಹಾಗೂ ಬಾಂಬ್ ನಿಷ್ಕಿçಯ ದಳದ ಅಧಿಕಾರಿಗಳು ಮತ್ತು ಸಿಬ್ಬಂದಿ ರೈಲ್ವೆ ನಿಲ್ದಾಣದಲ್ಲಿ ತೀವ್ರ ತಪಾಸಣೆ ನಡೆಸಿದ ಬಳಿಕ ಹುಸಿ ಬಾಂಬ್ ಕರೆ