Menu

ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದ ವಿಪಕ್ಷ ನಾಯಕರ ಬಂಧನ: ಮಾಜಿ ಸಿಎಂ ಸಿದ್ದರಾಮಯ್ಯ ಆಕ್ರೋಶ

ವಿರೋಧ ಪಕ್ಷದ ನಾಯಕರಾದ ರಾಹುಲ್ ಗಾಂಧಿ,  ಪ್ರಿಯಾಂಕಾ ಗಾಂಧಿ, ಅಖಿಲೇಶ್ ಯಾದವ್ ಹಾಗೂ ಇತರ ವಿರೋಧ ಪಕ್ಷದ ನಾಯಕರನ್ನು ಬಂಧಿಸಿರುವುದನ್ನು ತೀವ್ರವಾಗಿ ಖಂಡಿಸುತ್ತೇನೆ. ದೆಹಲಿಯಲ್ಲಿ ವಿದ್ಯಾರ್ಥಿಗಳ ಮೇಲೆ ನಡೆದ ಕ್ರೂರ ದಾಳಿಯನ್ನು ವಿರೋಧಿಸಿ ಪ್ರಧಾನಮಂತ್ರಿಯವರ ನಿವಾಸದ ಸಮೀಪ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದವರನ್ನು ಬಂಧಿಸಿರುವುದು ಪ್ರಜಾಪ್ರಭುತ್ವದ ಮೌಲ್ಯಗಳ ಮೇಲಿನ ದಾಳಿಯಾಗಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರತಿಭಟನಾಕಾರರನ್ನು, ವಿಶೇಷವಾಗಿ ರಾಹುಲ್ ಗಾಂಧಿ ಸೇರಿದಂತೆ ಇತರ ನಾಯಕರನ್ನು ತಳ್ಳಾಡಿ, ಅವರೊಂದಿಗೆ

ನೀಟ್‌ ರದ್ದುಗೊಳಿಸಲು ಟಿವಿಕೆ, ಡಿಎಂಕೆ ಆಗ್ರಹ

ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳು ಮತ್ತು ವಿದ್ಯಾರ್ಥಿಗಳ ಪ್ರತಿಭಟನೆಗಳ ಕುರಿತು ತಮಿಳುನಾಡಿನ ಆಡಳಿತಾರೂಢ ಟಿವಿಕೆ ವಿರೋಧ ಪಕ್ಷಗಳ ಸಾಲಿಗೆ ಸೇರ್ಪಡೆಗೊಂಡಿದೆ.  ವಿಜಯ್ ಸರ್ಕಾರ ತನ್ನ ಧ್ವನಿಯನ್ನು ತೀವ್ರಗೊಳಿಸಿದ್ದು, ನೀಟ್ ಪರೀಕ್ಷೆಯಲ್ಲಿನ ಅಕ್ರಮಗಳ ವಿರುದ್ಧ ಮಾತ್ರವಲ್ಲದೆ, ವೈದ್ಯಕೀಯ ಪ್ರವೇಶ ಪರೀಕ್ಷೆಯನ್ನೇ ಸಂಪೂರ್ಣವಾಗಿ ರದ್ದುಪಡಿಸಬೇಕೆಂದು

ವಿದ್ಯಾರ್ಥಿಗಳ ಬೇಡಿಕೆ ಈಡೇರಿಸದಿದ್ದರೆ ಲಕ್ಷಾಂತರ ಮಂದಿ ದೆಹಲಿಗೆ: ಕೇಂದ್ರಕ್ಕೆ ಸಿಜೆಪಿ ಎಚ್ಚರಿಕೆ

ನೀಟ್‌ ಅಕ್ರಮದಿಂದ ವಿದ್ಯಾರ್ಥಿಗಳಿಗೆ ಆಗಿರುವ ಅನ್ಯಾಯಕ್ಕೆ ನ್ಯಾಯ ಒದಗಿಸಬೇಕು, ಶಿಕ್ಷಣ ಮಂತ್ರಿ ಧರ್ಮೇಂದ್ರ ಪ್ರಧಾನ್‌ ರಾಜೀನಾಮೆ ನೀಡಬೇಕು ಎಂಬ ಆಗ್ರಹ ಸೇರಿದಂತೆ ಕೇಂದ್ರ ಸರ್ಕಾರ ನಮ್ಮ ಬೇಡಿಕೆಗಳನ್ನು ಈಡೇರಿಸದಿದ್ದರೆ ಮುಂದಿನ ದಿನಗಳಲ್ಲಿ ಲಕ್ಷಾಂತರ ಮಂದಿ ದೆಹಲಿಗೆ ಮುನ್ನುಗ್ಗಲಿದ್ದಾರೆ ಎಂದು ಕಾಕ್ರೋಚ್ ಜನತಾ

ಸಚಿವ ಸಂಪುಟ ವಿಸ್ತರಣೆ: ನಮ್ಮ ಪಕ್ಷದಲ್ಲಿ ಹೈಕಮಾಂಡ್ ಸುಪ್ರೀಂ ಎಂದ ಸಿಎಂ ಡಿಕೆ ಶಿವಕುಮಾರ್‌

ನಮ್ಮ ಪಕ್ಷದಲ್ಲಿ ಹೈಕಮಾಂಡ್ ಸುಪ್ರೀಂ. ನಮ್ಮ ಅಭಿಪ್ರಾಯ ಪಡೆದು ತೀರ್ಮಾನ ಮಾಡುತ್ತಾರೆ. ಹೊಸ ಮುಖ, ಜಿಲ್ಲೆ ಹಾಗೂ ಪ್ರಾಂತ್ಯವಾರು ಲೆಕ್ಕಾಚಾರ ಮಾಡಿ ತೀರ್ಮಾನ ಮಾಡುತ್ತಾರೆ ಎಂದು ಸಿಎಂ ಡಿಕೆ ಶಿವಕುಮಾರ್  ಹೇಳಿದರು. ನವದೆಹಲಿಯ ಕರ್ನಾಟಕ ಭವನದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದರು. ಸಚಿವ

ನೀಟ್ ಅಕ್ರಮ: ಸಂಸತ್‌ನಲ್ಲಿ ಚರ್ಚೆಯಾಗಲಿ

ನೀಟ್ ಪರೀಕ್ಷೆ ಲೋಪಗಳನ್ನು ಸರಿಪಡಿಸಲು ಸರ್ಕಾರದ ಬಳಿ ದಾರಿ ಇಲ್ಲವೇ ? ಈ ವಿಚಾರದಲ್ಲಿ ಎರಡು ದಿನಗಳ ಹಿಂದೆ ಸಿಜೆಪಿ ಮುಖಂಡರು ಮತ್ತು ದೇಶದ ಇತರ ಪ್ರಮುಖ ಸ್ವಯಂ ಸೇವಾ ಸಂಘಟನೆಗಳ ಪ್ರತಿನಿಧಿಗಳ ಜೊತೆ ಕೇಂದ್ರ ಸರ್ಕಾರದ ಸಂಬಂಧಿತ ಸಚಿವರು ಚರ್ಚೆಗೆ

ನೀಟ್‌ ಅಕ್ರಮ: ಸಚಿವರು ರಾಜೀನಾಮೆ ನೀಡಲಿ, ವಿದ್ಯಾರ್ಥಿಗಳಿಗೆ ಕೇಂದ್ರ ನ್ಯಾಯ ಒದಗಿಸಲಿ ಎಂದು ಸಿಎಂ ಆಗ್ರಹ

ನೀಟ್‌ ಪರೀಕ್ಷೆಯಲ್ಲಿ ನಡೆದ ಅಕ್ರಮಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್‌ ರಾಜೀನಾಮೆಗೆ ಆಗ್ರಹಿಸಿ ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದ  ವಿದ್ಯಾರ್ಥಿಗಳ ಮೇಲೆ ಅಮಾನುಷವಾಗಿ ಹಲ್ಲೆ ಮಾಡಿ ಹೋರಾಟವನ್ನು ದಮನಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಇದನ್ನು ಇದೇ ದೇಶ ಖಂಡಿಸುತ್ತದೆ. ಕಾಂಗ್ರೆಸ್‌ ವಿದ್ಯಾರ್ಥಿಗಳ

ಬುಡುಬುಡುಕೆಯವನೆಂದು ನಂಬಿಸಿ ಸಾವಿನ ಕಂಟಕ ಪರಿಹರಿಸುವುದಾಗಿ ಹೇಳಿ ಚಿನ್ನ ದೋಚಿ ಪರಾರಿ

ಬೆಂಗಳೂರಿನಲ್ಲಿ ಬುಡುಬುಡುಕೆಯವನೆಂದು ಹೇಳಿಕೊಂಡು ನಂಬಿಸಿದ ವ್ಯಕ್ತಿ, ಗರ್ಭಿಣಿಗೆ ‘ನಿಮ್ಮ ಮನೆಯಲ್ಲಿ ದೋಷವಿದೆ, ಸಾವಿನ ಕಂಟಕ ಇದೆ’ ಎಂದು ಹೆದರಿಸಿ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾನೆ. ಬೆಂಗಳೂರು ಉತ್ತರ ತಾಲೂಕಿನ ಹೆಗ್ಗಡದೇವನಪುರದಲ್ಲಿ ಮೋಹನ್ ಎಂಬವರ ಮನೆಗೆ ಬುಡುಬುಡುಕೆಯವನ ವೇಷದಲ್ಲಿ ಬಂದ

ರಾಮೋಹಳ್ಳಿ ಕೆರೆಯಲ್ಲಿ ಶವ ಪತ್ತೆ: ಕೊಲೆ ಮಾಡಿ ಎಸೆದಿರುವ ಶಂಕೆ

ಬೆಂಗಳೂರಿನ ಕುಂಬಳಗೋಡು ಪೊಲೀಸ್ ಠಾಣಾ ವ್ಯಾಪ್ತಿಯ ರಾಮೋಹಳ್ಳಿಯಲ್ಲಿ ಕೆರೆಯಲ್ಲಿ ಅನುಮಾನಾಸ್ಪದ ರೀತಿ ಮಹಿಳೆಯ ಮೃತದೇಹ ಪತ್ತೆಯಾಗಿದೆ. ಸೂಟ್​ಕೇಸ್​ನಲ್ಲಿ ಮಹಿಳೆಯ ಶವ ತುಂಬಿ ಕೆಎಗೆ ಬಿಸಾಡಿರುವ ಶಂಕೆ ವ್ಯಕ್ತವಾಗಿದೆ. ರಾಮೋಹಳ್ಳಿಯಲ್ಲಿ ಮಹಿಳೆಯನ್ನು ಕೊಂದು ಎರಡ್ಮೂರು ದಿನಗಳ ಹಿಂದೆ ಸೂಟ್​ಕೇಸ್​ನಲ್ಲಿ ಶವ ತುಂಬಿ ಕೆರೆಗೆ

ಹುಣಸೂರಿನಲ್ಲಿ ಪತ್ನಿ, ಮಕ್ಕಳ ಕೊಂದು ವ್ಯಕ್ತಿ ಆತ್ಮಹತ್ಯೆ

ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಕೊಲೆ ಮಾಡಿದ ಬಳಿಕ ವ್ಯಕ್ತಿ ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆಯೊಂದು ಮೈಸೂರಿನಲ್ಲಿ ನಡೆದಿದೆ. ಹುಣಸೂರು ತಾಲೂಕಿನ ನ್ಯೂ ಮಾರುತಿ ಬಡಾವಣೆಯ ಮನೆಯಲ್ಲಿ ಹರೀಶ್(42) ಎಂಬ ವ್ಯಕ್ತಿ ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಕೊಂದು ಆತ್ಮಹತ್ಯೆ

ಅಗ್ನಿ ದುರಂತ: ರಕ್ಷಿಸಿ ಎಂದು ಕರೆ ಮಾಡುತ್ತಿದ್ದಂತೆಯೇ ತಾಯಿ, ಮಕ್ಕಳು ಸಜೀವ ದಹನ

ದಕ್ಷಿಣ ದೆಹಲಿಯ ಲೋಧಿ ರಸ್ತೆ ಪ್ರದೇಶದ ಬಿ.ಕೆ. ದತ್ ಕಾಲೋನಿಯಲ್ಲಿ ನಡೆದ  ಭೀಕರ ಅಗ್ನಿ ದುರಂತವೊಂದರಲ್ಲಿ ತಾಯಿ ಹಾಗೂ ಇಬ್ಬರು ಪುಟ್ಟ ಹೆಣ್ಣುಮಕ್ಕಳು ಅಸು ನೀಗಿದ್ದಾರೆ. ವಸತಿ ಕಟ್ಟಡದ ಮೂರನೇ ಮಹಡಿಯಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡು ಈ ದುರ್ಘಟನೆ ಸಂಭವಿಸಿದೆ. ಅಧಿಕಾರಿಗಳ