Wednesday, November 04, 2026
Menu

 PSLV- C62 ನೌಕೆ ಸಮುದ್ರದಲ್ಲಿ  ಪತನ, ಸ್ಪೇನ್ ಉಪಗ್ರಹ ಮಾತ್ರ ಸುರಕ್ಷಿತ

ನಿಗದಿಗೊಳಿಸಿದ್ದ ಕಕ್ಷೆ ಸೇರಲು ವಿಫಲವಾಗಿ ಪಥ ಬದಲಿಸಿದ್ದ  ಭಾರತೀಯ ಬಾಹ್ಯಕಾಶ ಸಂಸ್ಥೆಯ ಪಿಎಸ್ ಎಲ್ ವಿ ಸಿ 62 ನೌಕೆ ದಕ್ಷಿಣ ಹಿಂದೂ ಮಹಾಸಾಗರ ಪ್ರದೇಶದಲ್ಲಿ ಪತನಗೊಂಡಿದ್ದು, ಸ್ಪೇನ್ ನ ಉಪಗ್ರಹ ಹೊರತುಪಡಿಸಿ ಉಳಿದ ಎಲ್ಲಾ 15 ಉಪಗ್ರಹಗಳು ಹೊತ್ತಿ ಉರಿದು ಹೋಗಿವೆ. ಸೋಮವಾರ ಬೆಳಗ್ಗೆ ಇಸ್ರೊ ಉಡಾಯಿಸಿದ್ದ PSLV-C62 ನೌಕೆ ಮೂರನೇ ಹಂತದ ವೇಳೆ ದಿಕ್ಕು ತಪ್ಪಿತ್ತು. ಸತತ ಪ್ರಯತ್ನದ ನಡುವೆಯೂ ನಿಯಂತ್ರಣಕ್ಕೆ ಸಿಗದ ನೌಕೆ ವಿಫಲವಾಗಿದ್ದು ಮಂಗಳವಾರ  ಸಮುದ್ರದಲ್ಲಿ

ಶಬರಿಮಲೆಯಿಂದ 100 ಕಿ.ಮೀ. ದೂರದಲ್ಲಿ ವಾಹನ ತಡೆದು ಕರ್ನಾಟಕದ  ಭಕ್ತರಿಗೆ ಲಾಠಿ ಏಟು

ಮಕರ ಸಂಕ್ರಮಣದ ಜ್ಯೋತಿ ದರ್ಶನಕ್ಕೆ ತೆರಳಿದ್ದ ರಾಜ್ಯದ ಸಾವಿರಾರು ಭಕ್ತರ ವಾಹನಗಳನ್ನು ಕೇರಳ ಪೊಲೀಸರು ತಡೆ ಹಿಡಿದಿದ್ದು, ಪ್ರತಿಭಟಿಸಿದ ರಾಜ್ಯದ ಭಕ್ತರ ಮೇಲೆ ಲಾಠಿಪ್ರಹಾರ ನಡೆಸಿದ್ದಾರೆ. ಚಿಕ್ಕಮಗಳೂರು, ಶಿವಮೊಗ್ಗ, ಬಾಗಲಕೋಟೆ ಸೇರಿದಂತೆ ರಾಜ್ಯಾದ್ಯಂತ 5000ಕ್ಕೂ ಅಧಿಕ ಭಕ್ತರು ಖಾಸಗಿ ವಾಹನಗಳ ಮೂಲಕ

ಅರಸೀಕೆರೆ ಅಂಗಡಿಯಲ್ಲೇ ಕುಸಿದು ವ್ಯಾಪಾರಿ ಸಾವು

ಹಾಸನದ ಅರಸೀಕೆರೆ ಪಟ್ಟಣದ ಅಂಗಡಿಯಲ್ಲಿ ವ್ಯಾಪಾರ ಮಾಡುತ್ತಿರುವಾಗಲೇ ಹಠಾತ್ ಕುಸಿದು ಬಿದ್ದು ವ್ಯಕ್ತಿ ಮೃತಪಟ್ಟಿರುವ ಘಟನೆ ನಡೆದಿದೆ. ಅಂಗಡಿಯಲ್ಲಿದ್ದ ಸಿಸಿಟಿವಿಯಲ್ಲಿ ಈ ದೃಶ್ಯ ದಾಖಲಾಗಿದೆ. ಪ್ರವೀಣ್ (45) ಮೃತ ವ್ಯಕ್ತಿ. ಅರಸೀಕೆರೆ ತಾಲೂಕಿನ ದುಮ್ಮೇನಹಳ್ಳಿ ಗ್ರಾಮದ ಪ್ರವೀಣ್ ಅರಸೀಕೆರೆ ಪಟ್ಟಣದಲ್ಲಿ ಅಟೊಮೊಬೈಲ್

ನಮ್ಮ ಭವಿಷ್ಯ ತೀರ್ಮಾನಿಸುವ ಎಸ್ಐಆರ್ ಬಗ್ಗೆ ಎಚ್ಚರವಾಗಿರಿ: ಡಿಕೆ ಶಿವಕುಮಾರ್‌

ನಮ್ಮ ರಾಜ್ಯಕ್ಕೆ ಎಸ್ಐಆರ್ ಬರುತ್ತಿದೆ. ಅಧಿಕಾರಿಗಳು ಈಗಾಗಲೇ ಕೆಲಸ ಮಾಡುತ್ತಿದ್ದಾರೆ. ಬಿಎಲ್ಎ ವಿಚಾರದಲ್ಲಿ ಯಾವುದೇ ಮುಲಾಜಿರುವುದಿಲ್ಲ. ನಮ್ಮ ಭವಿಷ್ಯ ತೀರ್ಮಾನವಾಗುವುದೇ ಎಸ್ಐಆರ್ ನಲ್ಲಿ. ಮತದಾರರ ರಕ್ಷಣೆ ಮಾಡುವ ಕೆಲಸ ಮಾಡಬೇಕು. ಬಿಎಲ್ಎಗಳು ಎಚ್ಚರಿಕೆಯಿಂದ ಇರಬೇಕು. ನೀವು ಹಕ್ಕನ್ನು ಕಾಪಾಡಿಕೊಳ್ಳಬೇಕು. ನಮ್ಮ ರಾಜ್ಯದಿಂದ

ತೀರ್ಥಹಳ್ಳಿಯಲ್ಲಿ ಬಸ್‌ ಕಾರು ಡಿಕ್ಕಿಯಾಗಿ ಇಬ್ಬರು ಮಕ್ಕಳು ಸೇರಿ ಮೂವರ ಸಾವು

ಶಿವಮೊಗ್ಗದ ತೀರ್ಥಹಳ್ಳಿ ತಾಲೂಕಿನ ಭಾರತೀಪುರ ಬಳಿ ಕೆಎಸ್‌ಆರ್‌ಟಿಸಿ ಬಸ್ ಮತ್ತು ಕಾರು ಡಿಕ್ಕಿಯಾಗಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರು ಮಕ್ಕಳು ಸೇರಿದಂತೆ ಒಂದೇ ಕುಟುಂಬದ ಮೂವರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ನಡೆದಿದೆ. ಮೃತರನ್ನು ರಿಹಾನ್ (15), ರಾಹಿಲ್ (9) ಮತ್ತು ಫಾತಿಮಾ (76)

ಶಿಕಾರಿಪುರ ಶಾಲೆ ಕೊಠಡಿಯಲ್ಲೇ ಆತ್ಮಹತ್ಯೆ ಮಾಡಿಕೊಂಡ  ಶಿಕ್ಷಕ

ಶಿಕಾರಿಪುರ ತಾಲೂಕಿನ ಬಳ್ಳೂರು ಗ್ರಾಮದ ಸರ್ಕಾರಿ‌ ಹಿರಿಯ ಪ್ರಾಥಮಿಕ ಶಾಲೆ‌ಯ ಶಿಕ್ಷಕ ಧನಂಜಯ್(51) ಶಾಲೆಯ ತರಗತಿ ಕೊಠಡಿಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.‌ ಮೃತ ಶಿಕ್ಷಕ ಧನಂಜಯ್ ಶಾಲೆಗೆ ಹೋಗಿ ತರಗತಿಯಲ್ಲಿ ವಿದ್ಯಾರ್ಥಿಗಳಿಗೆ ಪಾಠ ಮಾಡಿದ್ದಾರೆ. ನಂತರ ವಿಶ್ರಾಂತಿ

ಜಿಬಿಎ ಮೊದಲ ಚುನಾವಣೆ ನೂರಕ್ಕೆ ನೂರು ದೋಷರಹಿತ ಮತ್ತು ಪಾರದರ್ಶಕವಾಗಲಿ

ಗ್ರೇಟರ್ ಬೆಂಗಳೂರು ಅಥಾರಿಟಿ ವ್ಯಾಪ್ತಿಯಲ್ಲಿ ವಾಸವಾಗಿರುವವರೆಲ್ಲರೂ ಇಲ್ಲಿನ ಮತದಾರರಲ್ಲ. ಚುನಾವಣಾ ಆಯೋಗವೀಗ ನೂರಕ್ಕೆ ನೂರರಷ್ಟು ದೋಷರಹಿತ ಮತ್ತು ಪಾರದರ್ಶಕ ಮತದಾರರಪಟ್ಟಿಯನ್ನು ಮೊದಲು ಸಿದ್ಧಪಡಿಸಬೇಕಿರುವ ತುರ್ತು ಅನಿವಾರ್ಯತೆ ಇದೆ. ಗ್ರೇಟರ್ ಬೆಂಗಳೂರು ಅಥಾರಿಟಿ ಚುನಾವಣೆಗೆ ಸುಪ್ರೀಂಕೋರ್ಟ್ ಆದೇಶಿಸಿದೆ. ಮುಂದಿನ ಜೂನ್ ತಿಂಗಳೊಳಗೆ ಚುನಾವಣೆ

ಬೆಂಗಳೂರಿನಲ್ಲಿ ದಿ ಎನರ್ಜಿ ರನ್ 2.0: 2500 ಓಟಗಾರರು ಭಾಗಿ

ಬೆಂಗಳೂರು : ಹಿಟಾಚಿ ಎನರ್ಜಿ ಇಂಡಿಯಾ ಭಾನುವಾರ ಬೆಂಗಳೂರಿನಲ್ಲಿ ದಿ ಎನರ್ಜಿ ರನ್ 2.0 ಅನ್ನು ಆಯೋಜಿಸಿತ್ತು, ಇದು ಟೀಮ್ ವರ್ಕ್, ಯೋಗಕ್ಷೇಮ ಮತ್ತು ಭಾರತದ ಬೆಳವಣಿಗೆಗೆ ಶಕ್ತಿ ತುಂಬುವ ಹಂಚಿಕೆಯ ಬದ್ಧತೆಯನ್ನು ಆಚರಿಸಲು ಉದ್ಯೋಗಿಗಳು, ಗ್ರಾಹಕರು ಮತ್ತು ಪಾಲುದಾರರನ್ನು ಒಟ್ಟುಗೂಡಿಸಿತು.

ನಾಯಿ ಕಚ್ಚಿದರೆ ರಾಜ್ಯ ಸರ್ಕಾರವೇ ಪರಿಹಾರ ನೀಡಬೇಕು: ಸುಪ್ರೀಂಕೋರ್ಟ್

ನವದೆಹಲಿ: ಪ್ರತಿ ನಾಯಿ ಕಡಿತದಿಂದ ಗಾಯಗೊಂಡಲ್ಲಿ ಅಥವಾ ಮೃತಪಟ್ಟಲ್ಲಿ  ಆಯಾ ರಾಜ್ಯ ಸರ್ಕಾರಗಳು ದುಬಾರಿ ಪರಿಹಾರವನ್ನು ತೆರಬೇಕಾಗುತ್ತದೆ ಎಂದು ಸುಪ್ರೀಂ ಕೋರ್ಟ್​ ಅಭಿಪ್ರಾಯ ವ್ಯಕ್ತಪಡಿಸಿದೆ. ಬೀದಿ ನಾಯಿಗಳ ಕುರಿತು ಪ್ರಕರಣದ ವಿಚಾರಣೆಯು ಮಂಗಳವಾರ ನ್ಯಾ. ವಿಕ್ರಂನಾಥ್​, ನ್ಯಾ. ಸಂದೀಪ್​ ಮೆಹ್ತಾ ಮತ್ತು ನ್ಯಾ.

ಮಾರ್ಚ್ ನಲ್ಲಿ ಬಜೆಟ್ ಮಂಡನೆ: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರ ಎರಡುವರೆ ವರ್ಷ ಪೂರ್ಣಗೊಳಿಸಿದ ಹಿನ್ನೆಲೆಯಲ್ಲಿ ಫೆಬ್ರವರಿ 13 ಕ್ಕೆ ಹಾವೇರಿಯಲ್ಲಿ ಸಾಧನಾ ಸಮಾವೇಶ ಹಮ್ಮಿಕೊಳ್ಳಲು ತೀರ್ಮಾನ ಮಾಡಲಾಗಿದೆ. ಇದೇ ಸಂದರ್ಭದಲ್ಲಿ ಮಾರ್ಚ್ ತಿಂಗಳಲ್ಲಿ ಬಜೆಟ್ ಮಂಡನೆ ಮಾಡುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ. ನಗರದಲ್ಲಿ