Tuesday, September 29, 2026
Menu

ಹಾಸನದಲ್ಲಿ ಪಾಠ ಮಾಡುತ್ತಿದ್ದಾಗಲೇ ಶಿಕ್ಷಕ ಕುಸಿದು ಸಾವು

ತರಗತಿಯಲ್ಲಿ ವಿದ್ಯಾರ್ಥಿಗಳಿಗೆ ಪಾಠ ಮಾಡುತ್ತಿದ್ದಾಗಲೇ ಮುಖ್ಯಶಿಕ್ಷಕರು ಹೃದಯಾಘಾತದಿಂದ ಮೃತಪಟ್ಟ ದುರ್ಘಟನೆ ಅರಕಲಗೂಡು ತಾಲೂಕಿನ ಕೆಬ್ಬೆಕೊಪ್ಪಲು ಗ್ರಾಮದಲ್ಲಿ ನಡೆದಿದೆ. ಕೆಬ್ಬೆಕೊಪ್ಪಲು ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಕೇರಳಾಪುರ ಗ್ರಾಮದ ಸತೀಶ್ (53) ಎಂದು ಗುರುತಿಸಲಾಗಿದೆ. ವಿದ್ಯಾರ್ಥಿಗಳಿಗೆ ಪಾಠ ಮಾಡುತ್ತಿದ್ದ ವೇಳೆ ಸತೀಶ್ ಅಸ್ವಸ್ಥಗೊಂಡು ಕುಸಿದು ಬಿದ್ದಿದ್ದಾರೆ. ಗಮನಿಸಿದ ವಿದ್ಯಾರ್ಥಿಗಳು ಹಾಗೂ ಸಹಶಿಕ್ಷಕರು ನೆರವಿಗೆ ಬಂದು ಅಂಬ್ಯುಲೆನ್ಸ್‌ಗೆ ಕರೆ ಮಾಡಿದ್ದಾರೆ. ಆಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲಿ ಅವರ ಪ್ರಾಣ ಹೋಗಿತ್ತು. ಶಿಕ್ಷಣ

ಅಪರೂಪದ ಕಾಯಿಲೆಗಳಿಂದ ಬಳಲುವವರು ಆತ್ಮವಿಶ್ವಾಸ ಕಳೆದುಕೊಳ್ಳದಿರಿ, ಹಣದ ಚಿಂತೆ ಬಿಡಿ: ಡಿಸಿಎಂ

“ಹಿಮೋಫಿಲಿಯಾ ಹಾಗೂ ಇತರ ಅಪರೂಪದ ಕಾಯಿಲೆಗಳಿಂದ ಬಳಲುತ್ತಿರುವ ರೋಗಿಗಳ ಜೊತೆ ಕಾಂಗ್ರೆಸ್ ಸರ್ಕಾರ ನಿಲ್ಲುತ್ತದೆ. ಹಣದ ಬಗ್ಗೆ ಚಿಂತೆ ಮಾಡಬೇಡಿ. ಆದರೆ ಯಾರೂ ಸಹ ತಮ್ಮ ಆತ್ಮವಿಶ್ವಾಸ ಕಳೆದುಕೊಳ್ಳಬೇಡಿ” ಎಂದು ಡಿಸಿಎಂ ಡಿಕೆ ಶಿವಕುಮಾರ್‌ ಧೈರ್ಯ ತುಂಬಿದ್ದಾರೆ. ಆರೋಗ್ಯ ಮತ್ತು ಕುಟುಂಬ

ಸಿಂಧನೂರು ಆಸ್ಪತ್ರೆಯಲ್ಲಿ ನವಜಾತ ಶಿಶು ಸಾವು: ಕುಟುಂಬದ ಪ್ರತಿಭಟನೆ

ಸಿಂಧನೂರಿನಲ್ಲಿರುವ ತಾಯಿ ಮಕ್ಕಳ ಆಸ್ಪತ್ರೆಯಲ್ಲಿ  ಹೆರಿಗೆ ವೇಳೆ ನವಜಾತ ಶಿಶು  ಮೃತಪಟ್ಟಿದ್ದು, ಮಗು ಸಾವಿಗೆ ಆಸ್ಪತ್ರೆ ವೈದ್ಯರು ಸಿಬ್ಬಂದಿ ಕಾರಣ ಎಂದು ಕುಟುಂಬಸ್ಥರು ಆಸ್ಪತ್ರೆ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದ್ದಾರೆ. ರೌ ಡಕುಂದ ಗ್ರಾಮದ ಅಮರೇಶ ಹಿರೇಮಠ್  ಅವರ ಪತ್ನಿ  ಚಂದ್ರಿಕಾ  ಅವರ ಹೆರಿಗೆ

ಸಿಂದಗಿ ಸರ್ಕಾರಿ ಆಸ್ಪತ್ರೆಯಲ್ಲಿ ಶಿಶು, ಬಾಣಂತಿ ಸಾವು: ವೈದ್ಯರ ನಿರ್ಲಕ್ಷ್ಯ ಆರೋಪ

ಸಿಂದಗಿ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರ ನಿರ್ಲಕ್ಷ್ಯದಿಂದ ಬಾಣಂತಿ ಮತ್ತು ನವಜಾತ ಶಿಶು ಮೃತಪಟ್ಟಿರುವುದಾಗಿ ಆರೋಪ ಕೇಳಿಬಂದಿದೆ. ಆಸ್ಪತ್ರೆಯಲ್ಲಿ ವೈದ್ಯರಿಲ್ಲದ ಕಾರಣ ಗರ್ಭಿಣಿಗೆ ನರ್ಸ್​ಗಳೇ ಹೆರಿಗೆ ಮಾಡಿಸಿದ್ದರು. ಈ ವೇಳೆ ಶಿಶು ಮೃತಪಟ್ಟಿದ್ದು, ಬಾಣಂತಿ ತೀವ್ರ ರಕ್ತಸ್ರಾವದಿಂದ ಅಸು ನೀಗಿರುವುದಾಗಿ ಕುಟುಂಬಸ್ಥರು

ಹಲ್ಲಿನ ಚಿಕಿತ್ಸೆಗೆಂದು ಜೇವರ್ಗಿಯ ಆಸ್ಪತ್ರೆಗೆ ಬಂದಿದ್ದ ಮಹಿಳೆ ಕೋಮಾಗೆ

ಹಲ್ಲಿನ ಸಮಸ್ಯೆಗೆ ಚಿಕಿತ್ಸೆ ಪಡೆಯಲೆಂದು ಖಾಸಗಿ ಆಸ್ಪತ್ರೆಗೆ ಹೋಗಿರುವ ಮಹಿಳೆ ಕೋಮಾ ಸ್ಥಿತಿ ತಲುಪಿರುವ ಘಟನೆ ಕಲಬುರಗಿ ಜಿಲ್ಲೆಯ ಜೇವರ್ಗಿ ಪಟ್ಟಣದಲ್ಲಿ ನಡೆದಿದೆ. ವೈದ್ಯರ ಯಡವಟ್ಟು ಈ ಸ್ಥಿತಿಗೆ ಕಾರಣವೆಂದು ಕುಟುಂಬ ಹೇಳಿದರೆ, ವೈದ್ಯರ ತಪ್ಪಿಲ್ಲ ಎಂದು ಆಸ್ಪತ್ರೆಯವರು ಹೇಳುತ್ತಿದ್ದಾರೆ. ಜೇವರ್ಗಿ

ಹತ್ತು ವರ್ಷ ಕಾನೂನು ಹೋರಾಟ: ಅಪರಿಚಿತೆಗೆ ಕಿಡ್ನಿ ದಾನಗೈದು ಇತಿಹಾಸ ಸೃಷ್ಟಿಸಿದ ಡಾ. ಥಂಕಮ್ ಎಸ್

ಜೀವಂತವಾಗಿರುವಾಗಲೇ ಕಿಡ್ನಿ ದಾನ ಮಾಡುವುದಾದರೆ ಕಿಡ್ನಿ ದಾನ ಪಡೆಯುವವರು ಸಂಬಂಧಿಕರು, ಪರಿಚಿತರು ಆಗಿರಬೇಕು. ಪೋಷಕರು, ಒಡಹುಟ್ಟಿದವರು, ಮಕ್ಕಳು ಆಗಿರಬೇಕು ಎಂಬ ನಿಯಮವಿದ್ದ ಕಾರಣ ಬೆಂಗಳೂರಿನ ವೈದ್ಯೆಯೊಬ್ಬರು 10 ವರ್ಷ ಕಾನೂನು ಹೋರಾಟ ನಡೆಸಿ ಯಶಸ್ವಿಯಾಗಿ ಅಪರಿಚಿತ ಮಹಿಳೆಗೆ ತಮ್ಮ ಕಿಡ್ನಿ ದಾನ

ಹೋಟೆಲ್‌ನಲ್ಲಿ ಸ್ಕ್ವಿಡ್ ಮಸಾಲ, ಮೊಟ್ಟೆ ಮರಗೆಣಸು ಸೇವಿಸಿದ ಇಬ್ಬರ ಸಾವು

ಹೋಟೆಲ್‌ನಲ್ಲಿ ಸ್ಕ್ವಿಡ್ ಮಸಾಲೆ, ಮೊಟ್ಟೆ ಮರಗೆಣಸು ಜೊತೆ ಪರೋಟ ತಿಂದು ಊಟ ಮುಗಿಸಿ ಹೊರಟ ಕೆಲವೇ ಕ್ಷಣಗಳಲ್ಲಿ ಇಬ್ಬರು ಅಸ್ವಸ್ಥಗೊಂಡು ಮೃತಪಟ್ಟ ಘಟನೆ ಕೇರಳದ ವಿಳಿಂಜಂನಲ್ಲಿ ನಡೆದಿದೆ. ವಿಳಿಂಜಂನ ‘ಅಸ್ಮಾಕ್’ ಹೋಟೆಲ್‌ನಲ್ಲಿ ಊಟ ಮಾಡಿದ್ದ ಕೊಲ್ಲಂ ನಿವಾಸಿಗಳಾದ ಶಾಜಿ ಮತ್ತು ಅವರ

ಪಬ್‌ಜಿ ಆಡುತ್ತಿದ್ದವನಿಗೆ ರಕ್ತದೊತ್ತಡ ಹೆಚ್ಚಿ ಕುಸಿದು ಸಾವು

ಪಬ್‌ಜಿ ಗೇಮ್ ಆಡುತ್ತಿರುವಾಗಲೇ ರಕ್ತದೊತ್ತಡ ಹೆಚ್ಚಿ ಯುವಕನೊಬ್ಬ ಮೃತಪಟ್ಟಿರುವ ಘಟನೆ ಉತ್ತರ ಪ್ರದೇಶದ ಮೀರತ್‌ನಲ್ಲಿ ನಡೆದಿದೆ. ಮೊಹಮ್ಮದ್ ಕೈಫ್ (22) ಮೃತಪಟ್ಟವ. ಖೈರ್‌ನಗರದ ಗುಲಾರ್ ವಾಲಿ ಗಾಲಿಯ ನಿವಾಸಿಯಾಗಿರುವ ಪ್ರಾಪರ್ಟಿ ಡೀಲರ್ ಫಾರುಕ್ ಎಂಬವರ ಪುತ್ರ ಕೈಫ್ ಕಳೆದ ನಾಲ್ಕು ತಿಂಗಳಿನಿಂದ

ಪ್ರಿವೆಂಟಿವ್‌ ಹೆಲ್ತ್‌ ಕೇರ್‌ ಯೋಜನೆಯಡಿ ಅಕ್ರಮಕ್ಕೆ ಅವಕಾಶವಿಲ್ಲ: ಸಂತೋಷ್‌ ಲಾಡ್‌

ನೋಂದಾಯಿತ ಕಟ್ಟಡ ಕಾರ್ಮಿಕರ ಆರೋಗ್ಯ ಕಾಪಾಡಲು ನಡೆಸುವ ಪ್ರಿವೆಂಟಿವ್‌ ಹೆಲ್ತ್‌ ಕೇರ್‌ ಯೋಜನೆಯಡಿ ಪರೀಕ್ಷೆಗಳನ್ನು ನಿಯಮಾನುಸಾರ ನಡೆಸಲಾಗುತ್ತದೆ. ಅಕ್ರಮ ನಡೆದಿರುವ ದೂರುಗಳಿದ್ದರೆ ತನಿಖೆ ನಡೆಸಲಾಗುವುದು ಎಂದು ಕಾರ್ಮಿಕ ಸಚಿವ ಸಂತೋಷ್‌ ಎಸ್‌ ಲಾಡ್‌  ಭರವಸೆ ನೀಡಿದರು. ವಿಧಾನಸಭೆಯ ಕಲಾಪದಲ್ಲಿ ಶಿರಹಟ್ಟಿ ಮತಕ್ಷೇತ್ರದ

ಮಂಗನಕಾಯಿಲೆಗೆ ತೀರ್ಥಹಳ್ಳಿ ಯುವಕ ಬಲಿ

ಶಿವಮೊಗ್ಗದ ತೀರ್ಥಹಳ್ಳಿ ತಾಲೂಕಿನ ಕಟಗಾರು ಗ್ರಾಮದ 29 ವರ್ಷದ ಯುವಕ ಮಂಗನಕಾಯಿಲೆ (ಕೆಎಫ್ ಡಿ)ಯಿಂದ ಮೃತಪಟ್ಟಿದ್ದಾರೆ.   ಸೋಂಕಿನಿಂದಾಗಿ  ತೀವ್ರ ಜ್ವರದಿಂದ ಬಳಲುತ್ತಿದ್ದ ಅವರು ಕಳೆದ ಭಾನುವಾರದಿಂದ  ಮಣಿಪಾಲ್ ಆಸ್ಪತ್ರೆ ಯಲ್ಲಿ ಚಿಕಿತ್ಸೆ  ಪಡೆಯುತ್ತಿದ್ದರೂ ಫಲಕಾರಿಯಾಗದೆ ಅಸು ನೀಗಿದ್ದಾರೆ. ಜಿಲ್ಲಾ ಆರೋಗ್ಯ ಇಲಾಖೆಯು ಈಗಾಗಲೇ