ಅಪರಾಧ
ಬೆಂಗಳೂರಿನಲ್ಲಿ 410 ಕೋಟಿ ರೂ. ಜಿಎಸ್‌ಟಿ ಹಗರಣ: ಕಿಂಗ್‌ಪಿನ್ ಅರೆಸ್ಟ್
ಬೆಂಗಳೂರಿನಲ್ಲಿ 410 ಕೋಟಿ ರೂಪಾಯಿ ಜಿಎಸ್‌ಟಿ ಹಗರಣ ನಡೆದಿದ್ದು, ಅಮಾಯಕರ ಆಧಾರ್, ಪಾನ್ ಕಾರ್ಡ್ ಬಳಸಿ 102.೫ ಕೋಟಿ ತೆರಿಗೆ ಲೂಟಿ ಮಾಡಿರುವುದನ್ನು ವಾಣಿಜ್ಯ ತೆರಿಗೆ ಇಲಾಖೆಯ ಜಾರಿ ವಿಭಾಗದ ಅಧಿಕಾರಿಗಳು ಪತ್ತೆಹಚ್ಚಿದ್ದಾರೆ. ಈ ಸಂಬಂಧ ಕಿಂಗ್‌ಪಿನ್ ಆಂಧ್ರದ ತೌಕೀರ್ ಎಂಬವನನ್ನು ಬಂಧಿಸಿ ಆರ್ಥಿಕ ಅಪರಾಧಗಳ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ. ಸಹಚರ ಶೇಕ್ ಜಾಕೀರ್ ಹುಸೇನ್ ಅಲಿಯಾಸ್ ಬಾಷಾ ಎಂಬಾತ ವಿದೇಶಕ್ಕೆ
ಬೆಂಗಳೂರಿನ ಮನೆಯಲ್ಲಿ ದಂಪತಿಯ ಮೃತದೇಹ ಪತ್ತೆ
ಬೆಂಗಳೂರಿನ ಆರ್.ಟಿ.ನಗರ ಗಂಗೇನಹಳ್ಳಿಯ ಮನೆಯೊಂದರಲ್ಲಿ ದಂಪತಿಯ ಮೃತದೇಹ ಪತ್ತೆಯಾಗಿದ್ದು, ಹಲವು ಅನುಮಾನಗಳು ವ್ಯಕ್ತವಾಗಿವೆ. 35 ವರ್ಷದ ಡೇವಿಡ್ ಮತ್ತು 30 ವರ್ಷದ ಸುಮಿತ್ರಾ ಮೃತರು. ಇವರು 10 ವರ್ಷದ ಹಿಂದೆ ಮದುವೆಯಾಗಿದ್ದರು. ಆರ್.ಟಿ.ನಗರ ಪೊಲೀಸರು ಮತ್ತು ಸೊಕೊ ತಂಡ ಸ್ಥಳಕ್ಕೆ ಆಗಮಿಸಿದ್ದು,
ಚಿನ್ನ ಖರೀದಿಗೆ ಹೋದವನ ಎರಡು ಕೋಟಿ ರೂ. ದೋಚಿದ ಅಂಗಡಿ ಮಾಲೀಕ ಮತ್ತು ಮಹಿಳೆ
ಚಿನ್ನ ಖರೀದಿಗೆ ಹೋಗಿದ್ದವರಿಂದ ಎಂಪಿ ಚಿನ್ನದ ಮಳಿಗೆಯ ಮಾಲೀಕ ಇಂದರ್ ಚಂದ್ ಮತ್ತು ಮಹಿಳೆಯೊಬ್ಬರು ಎರಡು ಕೋಟಿ ರೂ. ಪಡೆದು ವಂಚಿಸಿರುವ ಘಟನೆ ಬೆಂಗಳೂರಿನ ಹೆಚ್‌ಎಸ್‌ಆರ್ ಲೇಔಟ್‌ನಲ್ಲಿ ನಡೆದಿದೆ. ಸರ್ಜಾಪುರದ ಪುನೀತ್ ಎಂಬಾತ ಚಿನ್ನ ಖರೀದಿ ಮಾಡಲು ಮುಂದಾಗಿದ್ದರು. ಪುನೀತ್ ಸಂಬಂದಿ
ಚಿನ್ನ ಕಳ್ಳ ಸಾಗಣೆ ಪ್ರಕರಣ: ನಟಿ ರನ್ಯಾ ರಾವ್‌ಗೆ ಜಾಮೀನು
ನಟಿ ರನ್ಯಾ ರಾವ್ ಅವರಿಗೆ ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಆರ್ಥಿಕ ಅಪರಾಧಗಳ ತಡೆ ನ್ಯಾಯಾಲಯವು ಜಾಮೀನು ಮಂಜೂರು ಮಾಡಿದೆ. ಚಿನ್ನ ಕಳ್ಳಸಾಗಣೆ ಆರೋಪದಡಿ ವಿಚಾರಣೆ ಎದುರಿಸುತ್ತಿದ್ದ ನಟಿ ರನ್ಯಾ ರಾವ್ ಅವರು ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿದ್ದರು. ಪ್ರಕರಣದ ತನಿಖೆ
ನದಿಯಲ್ಲಿ ಮುಳುಗುತ್ತಿದ್ದ ಮಗುವನ್ನು ರಕ್ಷಿಸಲು ಹೋಗಿ ತಾಯಿಯೂ ಸಾವು
ನದಿಯಲ್ಲಿ ಮುಳುಗುತ್ತಿದ್ದ ಮಗುವನ್ನು ರಕ್ಷಿಸಲು ಹೋದ ತಾಯಿ ಕೂಡ ನೀರು ಪಾಲಾಗಿರುವ ಘಟನೆ ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ ಸಂಕೇಶ್ವರದಲ್ಲಿ ನಡೆದಿದೆ. ತಾಯಿಯ ಮೃತದೇಹ ಪತ್ತೆಯಾಗಿದ್ದು, ಮಗನ ಮೃತದೇಹಕ್ಕಾಗಿ ಶೋಧ ಮುಂದುವರಿಸಲಾಗಿದೆ.27 ವರ್ಷದ ಲಕ್ಷ್ಮಿ ಕುಠೋಳಿ ಹಾಗೂ 10 ವರ್ಷದ ಸುಪ್ರೀತ್
ಪ್ರೀತಿಸಿ ಮದುವೆಯಾಗಿ ಗಂಡನ ಸ್ನೇಹಿತನಿಂದಲೇ ತಾಳಿ ಕಟ್ಟಿಸಿಕೊಂಡಳು
ಮನೆಯವರು ಬೇಡವೆಂದರೂ ಕಾಡಿಸಿ ಪೀಡಿಸಿ ಇಷ್ಟಪಟ್ಟವನನ್ನೇ ಮದ್ವೆಯಾಗಿದ್ದ ಮಹಿಳೆ, ಈಗ ಗಂಡನನ್ನು ಬಿಟ್ಟು ಆತನ ಸ್ನೇಹಿತನಿಂದಲೇ ತಾಳಿ ಕಟ್ಟಿಸಿಕೊಂಡ ಘಟನೆ ಮಂಡ್ಯದ ಪಾಂಡವಪುರ ತಾಲೂಕಿನ ಬನ್ನಂಗಾಡಿಯಲ್ಲಿ ನಡೆದಿದೆ. ಮದುವೆಯಾಗಿ ಎರಡು ವರ್ಷದ ಬಳಿಕ ತಂಗಿ ತಂಗಿ ಎಂದೇ ಕರೆಯುತ್ತಿದ್ದ ಗಂಡನ ಸ್ನೇಹಿತನ
ನೈಟಿ ಧರಿಸುತ್ತಾಳೆಂದು ಖಾನಾಪುರದಲ್ಲಿ ಪತ್ನಿಗೆ ಬೆಂಕಿ ಹಚ್ಚಿದ ಪತಿ
ನೈಟಿ ಧರಿಸುತ್ತಾಳೆ ಎಂಬ ಕಾರಣಕ್ಕೆ ಗಂಡನೊಬ್ಬ ಹೆಂಡತಿಗೆ ಬೆಂಕಿ ಹಚ್ಚಿರುವ ಘಟನೆ ಬೆಳಗಾವಿ ಜಿಲ್ಲೆಯ ಖಾನಾಪುರ ನಂದಗಡದಲ್ಲಿ ನಡೆದಿದೆ. ಕೃಷ್ಣಾಜಿ ಪಾಟೀಲ್ ಪತ್ನಿಗೆ ಬೆಂಕಿ ಹಚ್ಚಿದ್ದು, ಪತ್ನಿ ಮಂಜುಳಾ ಪಾಟೀಲ್‌ಗೆ ಗಂಭೀರ ಸುಟ್ಟ ಗಾಯಗಳಾಗಿದ್ದು ಬೆಳಗಾವಿ ಬಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. 80% ಸುಟ್ಟ
ಗಂಡ, ಮಕ್ಕಳಿಗೆ ನಿದ್ರೆ ಮಾತ್ರೆ ನೀಡಿ ರಾತ್ರಿ ಬಾರ್ಬರ್ ಜೊತೆ ಮಹಿಳೆ ಪರಾರಿ
ವಿವಾಹಿತ ಮಹಿಳೆಯು ಗಂಡ ಮಕ್ಕಳಿಗೆ ನಿದ್ರೆ ಮಾತ್ರೆ ನೀಡಿ ಕಟ್ಟಿಂಗ್ ಶಾಪ್ ಹೊಂದಿದ್ದ ವ್ಯಕ್ತಿ ಜೊತೆ ರಾತ್ರಿ ಪರಾರಿಯಾಗಿರುವ ಘಟನೆ ಬೆಂಗಳೂರಿನ ಬಾಗಲಗುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ವಿವಾಹಿತ ಮಹಿಳೆ ಪ್ರಿಯಾಂಕಾ ಎಂಬಾಕೆ ಮಾಡಿರುವ ಈ ಕೃತ್ಯದಿಂದ ಗಂಡ ಮಕ್ಕಳು
ಫಾರಿನ್ ಸ್ಟೈಲ್‌ನಲ್ಲಿ ಲವ್ ಪ್ರಪೋಸ್ ಎಂದು ಕೈ, ಕಾಲು, ಕಣ್ಣಿಗೆ ಬಟ್ಟೆ ಕಟ್ಟಿ ಬೆಂಕಿ ಹಚ್ಚಿ ಯುವಕನ ಕೊಲೆಗೈದ ಯುವತಿ
ಮನೆಯಲ್ಲಿ ಯಾರೂ ಇಲ್ಲ ಎಂದು ಪ್ರಿಯಕರನನ್ನು ಕರೆಸಿಕೊಂಡು ಫಾರಿನ್ ಸ್ಟೈಲ್ ನಲ್ಲಿ ಪ್ರಪೋಸ್ ಮಾಡುವುದಾಗಿ ನಂಬಿಸಿದ ಪ್ರೇಯಸಿ, ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿ ಪ್ರಿಯಕರನನ್ನು ಕೊಲೆಗೈದ ಘಟನೆ ಬೆಂಗಳೂರಿನ ಬ್ಯಾಡರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಅಂಜನನಗರದಲ್ಲಿ ನಡೆದಿದೆ. ಪ್ರೇಯಸಿ ಪ್ರೇಮಾಳ ವಿಕೃತ
ನಿಯಂತ್ರಣ ತಪ್ಪಿದ ಕಾರು ಮರಕ್ಕೆ ಡಿಕ್ಕಿ: ಕಾರವಾರದಲ್ಲಿ ಇಬ್ಬರ ಸಾವು
ಅತಿ ವೇಗದಲ್ಲಿ ಚಲಿಸುತ್ತಿದ್ದ ಕಾರು ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿಯಾಗಿ ಇಬ್ಬರು ಮೃತಪಟ್ಟಿದ್ದು, ಒಬ್ಬ ಗಂಭೀರ ಗಾಯಗೊಂಡ ಘಟನೆ ದಾಂಡೇಲಿ ತಾಲೂಕಿನ ಕರ್ಕಾ ಕ್ರಾಸ್‌ನ ಅಜಗಾಂವ ಬಳಿ ನಡೆದಿದೆ. ಧಾರವಾಡದ ಫಾರೂಖ್ ಸಾಬ್ ಮತ್ತು ಹಳಿಯಾಳದ ಮುದಸ್ಸಿರ್ ಇಸ್ಮಾಯಿಲ್ ಮುಲ್ಲಾ ಮೃತಪಟ್ಟವರು.




