ಮನೆಯಲ್ಲಿ ಯಾರೂ ಇಲ್ಲ ಎಂದು ಪ್ರಿಯಕರನನ್ನು ಕರೆಸಿಕೊಂಡು ಫಾರಿನ್ ಸ್ಟೈಲ್ ನಲ್ಲಿ ಪ್ರಪೋಸ್ ಮಾಡುವುದಾಗಿ ನಂಬಿಸಿದ ಪ್ರೇಯಸಿ, ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿ ಪ್ರಿಯಕರನನ್ನು ಕೊಲೆಗೈದ ಘಟನೆ ಬೆಂಗಳೂರಿನ ಬ್ಯಾಡರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಅಂಜನನಗರದಲ್ಲಿ ನಡೆದಿದೆ.
ಪ್ರೇಯಸಿ ಪ್ರೇಮಾಳ ವಿಕೃತ ಕ್ರೌರ್ಯಕ್ಕೆ ಪ್ರಿಯಕರ ಕಿರಣ್ ಸಜೀವ ದಹನಗೊಂಡಿದ್ದಾನೆ. ಆತನ ಸಾವಿನ ದೃಶ್ಯವನ್ನು ಪ್ರೇಯಸಿ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದುದಾಳೆ. ಪೊಲೀಸರು ಬಂದಾಗ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಕತೆ ಕಟ್ಟಿ ಯಾಮಾರಿಸಲು ಪ್ರಯತ್ನಿಸಿದ್ದಾಳೆ.
ಪ್ರೇಮಾ ಮತ್ತು ಕಿರಣ್ ಇಬ್ಬರೂ ಒಂದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ಪರಸ್ಪರ ಪ್ರೀತಿಸುತ್ತಿದ್ದಳು. ಅಣ್ಣ ಮತ್ತು ತಾಯಿಯ ಜೊತೆ ವಾಸವಾಗಿದ್ದ ಪ್ರೇಮಾ, ಮನೆಯಲ್ಲಿ ಯಾರೂ ಇಲ್ಲ ಬಾ ಎಂದು ಕರೆಸಿಕೊಂಡಿದ್ದಾಳೆ. ಬೈಕ್ ನಲ್ಲಿ ಬಂದ ಕಿರಣ್ ಗೆ ಮೊದಲೇ ಸಿದ್ದಪಡಿಸಿಕೊಟ್ಟುಕೊಂಡಿದ್ದ ಹಗ್ಗದಿಂದ ಕೈಕಾಲು ಕಟ್ಟಿ ಕಣ್ಣಿಗೆ ಬಟ್ಟೆ ಕಟ್ಟಿದ್ದಾಳೆ. ಕೇಳಿದಾಗ, ಫಾರಿನ್ ಸ್ಟೈಲ್ ಇದು ಎಂದು ನಂಬಿಸಿದ್ದಾಳೆ. ನಂಬಿದ ಕಿರಣ್ ಅಮಾಯಕನಂತೆ ಅವಳು ಹೇಳಿದಂತೆ ಕೇಳಿದ್ದಾನೆ. ಕಣ್ಣಿಗೆ ಬಟ್ಟೆ ಕಟ್ಟಿ ಕೈಕಾಲು ಕಟ್ಟಿದ ನಂತರ ಮೊದಲೇ ತಂದಿಟ್ಟುಕೊಂಡಿದ್ದ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ್ದಾಳೆ. ಪ್ರಿಯಕರ ಒದ್ದಾಡುತ್ತಿದ್ದರೆ ಮೊಬೈಲ್ ನಲ್ಲಿ ವೀಡಿಯೋ ಮಾಡಿದ್ದಾಳೆ.
ಆರಂಭದಲ್ಲಿ ,ಕಿರಣ್ ತಾನಾಗಿಯೇ ಬೆಂಕಿ ಹಚ್ಚಿಕೊಂಡ” ಎಂದು ಪೊಲೀಸರಿಗೆ ಸುಳ್ಳು ಹೇಳಿದ್ದ ಯುವತಿಯ ಬಣ್ಣ ಸಿಸಿಟಿವಿ ದೃಶ್ಯಾವಳಿಗಳಿಂದ ಬಯಲಾಗಿದೆ. ಕಿರಣ್ ಬರುವಾಗ ಯಾವುದೇ ಪೆಟ್ರೋಲ್ ತಂದಿರಲಿಲ್ಲ, ಹೀಗಾಗಿ ಯುವತಿಯೇ ಇದನ್ನು ಮೊದಲೇ ಸಂಚು ರೂಪಿಸಿ ತಂದಿಟ್ಟಿದ್ದಳು ಎಂಬ ಅನುಮಾನ ದಟ್ಟವಾಗಿದೆ. ಬ್ಯಾಡರಹಳ್ಳಿ ಪೊಲೀಸರು ಯುವತಿಯನ್ನು ವಶಕ್ಕೆ ಪಡೆದಿದ್ದು, ಈ ಕ್ರೌರ್ಯಕ್ಕೆ ನಿಖರ ಕಾರಣವೇನು ಎಂಬ ಬಗ್ಗೆ ವಿಚಾರಣೆ ತೀವ್ರಗೊಳಿಸಿದ್ದಾರೆ.
ಪರಸ್ಪರ ಪ್ರೀತಿಸುತ್ತಿದ್ದ ಇಬ್ಬರೂ ಚೆನ್ನಾಗಿದ್ದರು, ಕೆಲವು ದಿನಗಳಿಂದ ಯಾವುದೋ ಕಾರಣದಿಂದ ಕಿರಣ್ ಆಕೆಗೆ ಹೆಚ್ಚು ಟೈಮ್ ಕೊಡ್ತಿರಲಿಲ್ಲ. ಅವಾಯ್ಡ್ ಮಾಡ್ತಿದ್ದಾನೆ ಎಂದು ಕೋಪಗೊಂಡಿದ್ದ ಆಕೆ ಅವನ ಕೊಲೆ ಮಾಡಲು ನಿರ್ಧರಿಸಿ ಮನೆಯಲ್ಲಿ ಯಾರೂ ಇಲ್ಲ, ಬಾ ಎಂದು ಕಿರಣನನ್ನು ಕರೆಸಿಕೊಂಡು ಬೆಂಕಿ ಹಚ್ಚಿ ಸಾಯಿಸಿದ್ದಾಳೆ.
ಕಿರಣ್‌ನ ಚೀರಾಟ ಕೇಳಿ ಸ್ಥಳೀಯರು ಅಗ್ನಿಶಾಮಕ ಸಿಬ್ಬಂದಿ ಹಾಗೂ ಪೊಲೀಸರಿಗೆ ಕರೆ ಮಾಡಿದ್ದಾರೆ. ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಬರುವಷ್ಟರಲ್ಲಿ ಕಿರಣ್ ಸಜೀವ ದಹನ ಆಗಿದ್ದ. ಯುವಕ ಸಜೀವ ದಹನಗೊಂಡಿದ್ದರೂ ಯುವತಿಗೆ ಸ್ವಲ್ಪವೂ ಗಾಯ ಆಗಿರಲಿಲ್ಲ. ಹೀಗಾಗಿ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ಸತ್ಯ ಹೊರ ಬಂದಿದೆ. ಕೊಲೆ ಆರೋಪಿ ಯುವತಿಯನ್ನು ಪೊಲೀಸರು ಬಂಧಿಸಿದ್ದಾರೆ.


