ವಿವಾಹಿತ ಮಹಿಳೆಯು ಗಂಡ ಮಕ್ಕಳಿಗೆ ನಿದ್ರೆ ಮಾತ್ರೆ ನೀಡಿ ಕಟ್ಟಿಂಗ್ ಶಾಪ್ ಹೊಂದಿದ್ದ ವ್ಯಕ್ತಿ ಜೊತೆ ರಾತ್ರಿ ಪರಾರಿಯಾಗಿರುವ ಘಟನೆ ಬೆಂಗಳೂರಿನ ಬಾಗಲಗುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ವಿವಾಹಿತ ಮಹಿಳೆ ಪ್ರಿಯಾಂಕಾ ಎಂಬಾಕೆ ಮಾಡಿರುವ ಈ ಕೃತ್ಯದಿಂದ ಗಂಡ ಮಕ್ಕಳು ಕಂಗಾಲಾಗಿದ್ದಾರೆ.
ರಾತ್ರಿ ಮನೆಯಲ್ಲಿದ್ದ ಕಸ ಎಸೆದು ಬರುವುದಾಗಿ ಹೇಳಿ ಪ್ರಿಯಾಂಕಾ ಮನೆಯಿಂದ ಹೊರಗೆ ಹೋಗಿದ್ದು, ವಾಪಸ್ ಬಂದಿಲ್ಲ, ಹೋಗುವ ಮೊದಲು ಗಂಡ ಮಕ್ಕಳಿಗೆ ನಿದ್ರೆ ಮಾತ್ರೆ ಹಾಕಿದ್ದಾಳೆ. ಪ್ರಿಯಾಂಕಾಗೆ ಮನೆ ಪಕ್ಕದಲ್ಲೇ ಕಟ್ಟಿಂಗ್ ಶಾಪ್ ಇಟ್ಟುಕೊಂಡಿದ್ದ ಪ್ರಭು ಎಂಬಾತನ ಜೊತೆ ಅನೈತಿಕ ಸಂಬಂಧವಿತ್ತು.
ಪ್ರಿಯಾಂಕಾ ಪತಿ ಶರತ್‌ಕುಮಾರ್ ಕೆಲಸಕ್ಕೆ ಹೋಗ್ತಿದ್ದ ಸಮಯದಲ್ಲಿ ಈ ಜೋಡಿ ಭೇಟಿಯಾಗುತ್ತಿದ್ದರು. ಪ್ರಭು ಪ್ರಿಯಾಂಕಾ ಮೊಬೈಲ್‌ಗೆ ರಿಚಾರ್ಜ್ ಮಾಡುತ್ತಿದ್ದ. ಮೊಬೈಲ್ ರಿಚಾರ್ಜ್ ಯಾರು ಮಾಡುತ್ತಿದ್ದಾರೆಂದು ಪತಿ ಶರತ್ ಕುಮಾರ್ ಚೆಕ್ ಮಾಡಿದಾಗ ಇವರಿಬ್ಬರ ಆಟ ಗೊತ್ತಾಗಿತ್ತು. ಶರತ್‌ಕುಮಾರ್ ಪತ್ನಿ ಪ್ರಿಯಾಂಕಳಿಗೆ ಎರಡ್ಮೂರು ಬಾರಿ ಬುದ್ದಿ ಹೇಳಿದ್ದ. ಆದರೂ ಕೇಳದ ಪ್ರಿಯಾಂಕಾ ಪ್ರಭು ಜೊತೆ ಓಡಿ ಹೋಗಿದ್ದಾಳೆ ಎಂದು ಶರತ್‌ಕುಮಾರ್ ಹೇಳಿದ್ದಾರೆ.
ಏಪ್ರಿಲ್ 11ರ ರಾತ್ರಿ ಮನೆ ಬಿಟ್ಟು ಹೋಗಿರುವ ಪ್ರಿಯಾಂಕಾ ಒಂದು ಕೈಯಲ್ಲಿ ಕಸದ ಬಕೆಟ್, ಮತ್ತೊಂದು ಕೈಯಲ್ಲಿ ಬ್ಯಾಗ್ ತೆಗೆದುಕೊಂಡು ಹೋಗಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಪತ್ನಿಗಾಗಿ ಹಲವು ಕಡೆಲ್ಲಿ ಹುಡುಕಾಡಿದ ನಂತರ ಶರತ್‌ಕುಮಾರ್ ಪೊಲೀಸರಿಗೆ ದೂರು ನೀಡಿದ್ದಾರೆ.


