Thursday, October 08, 2026
Menu

ಕಾರ್ಗಿಲ್ ಯುದ್ಧ ವೇಳೆ ಸಿನಿಮಾ ಬಿಟ್ಟು ಸೇನೆ ಸೇರಿದ್ದ ನಾನಾ ಪಾಟೇಕರ್!

ಉದಯಕಾಲ ನ್ಯೂಸ್,ಗೋವಾ: ಬಾಲಿವುಡ್‌ನ ಹೆಮ್ಮೆಯ ಹಿರಿಯ ನಟ, ಸಮಾಜಮುಖಿ ಚಿಂತಕ ಹಾಗೂ ದೇಶಪ್ರೇಮಿ ನಾನಾ ಪಾಟೇಕರ್ (75) ಅವರು ಗೋವಾದ ತಮ್ಮ ನಿವಾಸದಲ್ಲಿ ಇಂದು ಬೆಳಿಗ್ಗೆ ತೀವ್ರ ಹೃದಯ ಸ್ತಂಭನದಿಂದ (Cardiac Arrest) ವಿಧಿವಶರಾಗಿದ್ದಾರೆ.ಕೇವಲ ನಟನೆಗೆ ಮಾತ್ರ ಸೀಮಿತವಾಗದೆ ಸಮಾಜ ಸೇವೆ ಮತ್ತು ದೇಶಸೇವೆಯಲ್ಲೂ ಮುಂಚೂಣಿಯಲ್ಲಿದ್ದ ನಾನಾ ಪಾಟೇಕರ್ ಅವರ ನಿಧನಕ್ಕೆ ಚಿತ್ರರಂಗ ಹಾಗೂ ಗಣ್ಯರು ಕಂಬನಿ ಮಿಡಿದಿದ್ದಾರೆ.

ಸೇನೆ ಮತ್ತು ಕಾರ್ಗಿಲ್ ಯುದ್ಧದ ಸೇವೆ
1991ರಲ್ಲಿ ತೆರೆಕಂಡ ‘ಪ್ರಹಾರ್ ದಿ ಫೈನಲ್ ಅಟ್ಯಾಕ್’ ಸಿನಿಮಾದ ಕಮಾಂಡೋ ಪಾತ್ರಕ್ಕಾಗಿ ನಾನಾ ಪಾಟೇಕರ್ ಅವರು ಮರಾಠಾ ಲೈಟ್ ಇನ್ವೆಂಟ್ರಿ ಜೊತೆ ಮೂರು ವರ್ಷಗಳ ಕಾಲ ಕಠಿಣ ಸೇನಾ ತರಬೇತಿ ಪಡೆದಿದ್ದರು. ಈ ತರಬೇತಿಯ ನಂತರ ಅವರು 1980ರ ದಶಕದ ಉತ್ತರಾರ್ಧದಲ್ಲಿ ಟೆರಿಟೋರಿಯಲ್ ಆರ್ಮಿಗೆ ಅಧಿಕೃತವಾಗಿ ಸೇರ್ಪಡೆಗೊಂಡಿದ್ದರು.

ಜಾರ್ಜ್ ಫರ್ನಾಂಡಿಸ್ ಅನುಮತಿ
1999ರಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ ಕಾರ್ಗಿಲ್ ಯುದ್ಧ ಸಂಭವಿಸಿದಾಗ, ಗಡಿಯಲ್ಲಿ ಸೇವೆ ಸಲ್ಲಿಸುವುದಾಗಿ ಹಿರಿಯ ಅಧಿಕಾರಿಗಳನ್ನು ಕೋರಿದ್ದರು. ರಕ್ಷಣಾ ಸಚಿವರು ಮಾತ್ರ ಇದಕ್ಕೆ ಅನುಮತಿ ನೀಡಬಹುದು ಎಂದಿದ್ದರಿಂದ, ತಕ್ಷಣವೇ ಆಗಿನ ರಕ್ಷಣಾ ಸಚಿವ ಜಾರ್ಜ್ ಫರ್ನಾಂಡಿಸ್ ಅವರನ್ನು ಸಂಪರ್ಕಿಸಿ ಗಡಿಯಲ್ಲಿ ಸೇವೆ ಸಲ್ಲಿಸಲು ವಿಶೇಷ ಅನುಮತಿ ಪಡೆದಿದ್ದರು.

ಸೈನಿಕರೊಂದಿಗೆ 60 ದಿನಗಳು
ಅನುಮತಿ ಸಿಕ್ಕ ಬಳಿಕ ನಟನೆಯನ್ನು ತಾತ್ಕಾಲಿಕವಾಗಿ ಬಿಟ್ಟು ಸೇನೆಯ ಕ್ವಿಕ್ ರಿಯಾಕ್ಷನ್ ಟೀಮ್ (QRT) ಸೇರಿಕೊಂಡಿದ್ದರು. ಶ್ರೀನಗರ, ಡ್ರಾಸ್, ಮತ್ತು ಲೇತ್‌ನಂತಹ ಅತಿ ಸೂಕ್ಷ್ಮ ಗಡಿ ಪ್ರದೇಶಗಳಲ್ಲಿ ಸೈನಿಕರೊಂದಿಗೆ ಸುಮಾರು 60 ದಿನಗಳನ್ನು ಕಳೆದಿದ್ದರು. ಈ ಕಠಿಣ ಸೇವೆಯ ಸಮಯದಲ್ಲಿ 76 ಕೆಜಿ ತೂಕವಿದ್ದ ಅವರು, ಸುಮಾರು 20 ಕೆಜಿ ತೂಕವನ್ನು ಕಳೆದುಕೊಂಡಿದ್ದರು ಎಂಬುದು ಅವರ ದೇಶಪ್ರೇಮಕ್ಕೆ ಹಿಡಿದ ಕನ್ನಡಿಯಾಗಿದೆ.
#NanaPatekar #BollywoodActor #KargilWar #IndianArmy #UdayakalaNews #RestInPeace #NationalHero #MarathiCinema

Related Posts

Leave a Reply

Your email address will not be published. Required fields are marked *