Menu

ಭಾರತದಲ್ಲಿ ಕ್ಲೌಡ್, ಎಐ ಮೂಲಸೌಕರ್ಯ ಅಭಿವೃದ್ಧಿಗೆ ಮೈಕ್ರೋಸಾಫ್ಟ್ 3 ಬಿಲಿಯನ್ ಡಾಲರ್ ಹೂಡಿಕೆ!

ಬೆಂಗಳೂರು: ಭಾರತ ಪ್ರವಾಸದಲ್ಲಿರುವ ಮೈಕ್ರೋಸಾಫ್ಟ್ ಅಧ್ಯಕ್ಷ ಮತ್ತು ಸಿಇಒ ಸತ್ಯ ನಾದೆಲ್ಲಾ ಅವರು, ಮುಂದಿನ ಎರಡು ವರ್ಷಗಳಲ್ಲಿ ಭಾರತದಲ್ಲಿ ಕ್ಲೌಡ್ ಮತ್ತು ಎಐ(AI) ಮೂಲಸೌಕರ್ಯ ಮತ್ತು ಕೌಶಲ್ಯ ಕ್ಷೇತ್ರದಲ್ಲಿ 3 ಬಿಲಿಯನ್ ಯುಎಸ್ ಡಾಲರ್ ಹೂಡಿಕೆ ಮಾಡಲಾಗುವುದು ಎಂದು ಘೋಷಿಸಿದ್ದಾರೆ.

ಇದರಲ್ಲಿ ಪ್ರಮುಖವಾಗಿ ಡೇಟಾ ಸೆಂಟರ್ ಗಳ ಸ್ಥಾಪನೆಯೂ ಸೇರಿದೆ. ಭಾರತದಲ್ಲಿ ಎಐ ಆವಿಷ್ಕಾರಕ್ಕೆ ಇನ್ನಷ್ಟು ವೇಗ ತುಂಬುದ ಉದ್ದೇಶ ಈ ಹೂಡಿಕೆಯದ್ದಾಗಿದೆ. ಈ ಮೂಲಕ 2047 ರ ವೇಳೆಗೆ ಭಾರತವನ್ನು ಅಭಿವೃದ್ಧಿಶೀಲ ರಾಷ್ಟ್ರವನ್ನಾಗಿಸುವ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ದೃಷ್ಟಿಯ ಸಾಕಾರದಲ್ಲಿ ಪ್ರಮುಖ ಪಾತ್ರ ವಹಿಸಲಿದೆ.

ತನ್ನ ಅಡ್ವಾಂಟೇಜ್ ಇಂಡಿಯಾ ಕಾರ್ಯಕ್ರಮದ ಎರಡನೇ ಆವೃತ್ತಿಯ ಭಾಗವಾಗಿ ಮೈಕ್ರೋಸಾಫ್ಟ್ ಮುಂದಿನ ಐದು ವರ್ಷಗಳಲ್ಲಿ ಎಐ(AI) ಕೌಶಲ್ಯಗಳೊಂದಿಗೆ 10 ಮಿಲಿಯನ್ ಜನರಿಗೆ ತರಬೇತಿಯನ್ನು ನೀಡುವ ಮೂಲಕ ದೇಶದ ದೀರ್ಘಾವಧಿಯ ಸ್ಪರ್ಧಾತ್ಮಕತೆಗೆ ಬೆಂಬಲ ನೀಡಲಿದೆ.

ಈ ಸಂದರ್ಭದಲ್ಲಿ ಮಾತನಾಡಿದ ಮೈಕ್ರೋಸಾಫ್ಟ್ ಅಧ್ಯಕ್ಷ ಮತ್ತು ಸಿಇಒ ಸತ್ಯ ನಾದೆಲ್ಲಾ, `ದೇಶಾದ್ಯಂತ ಹೊಸ ಹೊಸ ಅವಕಾಶಗಳನ್ನು ಅನ್ಲಾಕ್ ಮಾಡುವ ಮೂಲಕ ಭಾರತ ಎಐ(AI) ಆವಿಷ್ಕಾರದಲ್ಲಿ ನಾಯಕನಾಗಿ ಕ್ಷಿಪ್ರಗತಿಯಲ್ಲಿ ಮುನ್ನುಗ್ಗುತ್ತಿದೆ. ನಾವು ಇಂದು ಘೋಷಣೆ ಮಾಡುತ್ತಿರುವ ಮೂಲಸೌಕರ್ಯ ಮತ್ತು ಕೌಶಲ್ಯ ಕ್ಷೇತ್ರದಲ್ಲಿನ ಹೂಡಿಕೆಗಳು ಭಾರತವನ್ನು ಎಐ – ಪ್ರಥಮವನ್ನಾಗಿ ಮಾಡುವ ನಮ್ಮ ಬದ್ಧತೆಯನ್ನು ಪುನರುಚ್ಚರಿಸುತ್ತವೆ ಮತ್ತು ದೇಶದೆಲ್ಲೆಡೆ ಜನರು ಹಾಗೂ ಸಂಸ್ಥೆಗಳು ವ್ಯಾಪಕವಾಗಿ ಇದರ ಪ್ರಯೋಜನ ಪಡೆಯುವುದನ್ನು ಖಚಿತಪಡಿಸಿಕೊಳ್ಳಲು ನೆರವಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಮೈಕ್ರೋಸಾಫ್ಟ್ ಇಂಡಿಯಾ ಮತ್ತು ದಕ್ಷಿಣ ಏಷ್ಯಾದ ಅಧ್ಯಕ್ಷ ಪುನೀತ್ ಚಂಡೋಕ್ ಅವರು ಮಾತನಾಡಿ, “ಕಳೆದ 12 ತಿಂಗಳಲ್ಲಿ ಭಾರತದಲ್ಲಿ ಮೈಕ್ರೋಸಾಫ್ಟ್ ಎಐ(AI) ಅನ್ನು ನೈಜಸ್ಥಿತಿಗೆ ತರುವಲ್ಲಿ ಸಹಕಾರಿಯಾಗಿದೆ. ಅದನ್ನು ಬೋರ್ಡ್ ರೂಂಗಳಿಂದ ತರಗತಿಗಳವರೆಗೆ, ವಾಣಿಜ್ಯದಿಂದ ಸಮುದಾಯಗಳವರೆಗೆ ಮತ್ತು ರೈತರಿಗೆ ಹಣಕಾಸು ಒದಗಿಸುವವರೆಗೆ ಕೊಂಡೊಯ್ಯುತ್ತಿದೆ. ಇಂದಿನ ಘೋಷಣೆಯು ಭಾರತದ ಸಾಮರ್ಥ್ಯದ ಮೇಲೆ ನಾವಿಟ್ಟಿರುವ ನಂಬಿಕೆಯನ್ನು ಇನ್ನಷ್ಟು ಬಲಪಡಿಸುತ್ತದೆ.

ಜಾಗತಿಕ ಮಾರುಕಟ್ಟೆಯಲ್ಲಿ ಉತ್ಕೃಷ್ಟಗೊಳಿಸಲು ಅಗತ್ಯವಾದ ಸಂಪನ್ಮೂಲಗಳು ಮತ್ತು ಭವಿಷ್ಯಕ್ಕೆ ಸಿದ್ಧವಾಗಿರುವ ಕೌಶಲ್ಯಗಳೊಂದಿಗೆ ದೇಶವನ್ನು ಅಣಿಗೊಳಿಸುವ ನಿಟ್ಟಿನಲ್ಲಿ ನಾವು ಹೊಂದಿರುವ ಸಂಕಲ್ಪವನ್ನು ಬಲಪಡಿಸುತ್ತದೆ. ಮುಂದಿನ ಕೆಲವು ದಶಕಗಳವರೆಗೆ ಎದುರಾಗುವ ಸಾಧ್ಯತೆಗಳನ್ನು ಅನ್ಲಾಕ್ ಮಾಡಲು ನಾವು ಎಐ(AI) ಅನ್ನು ಬಳಸುವುದನ್ನು ಮುಂದುವರಿಸುತ್ತೇವೆ ಹಾಗೂ ಎಐ(AI) ಯುಗದಲ್ಲಿ ಏಳಿಗೆ ಹೊಂದಲು ಅಗತ್ಯವಿರುವ ಎಲ್ಲಾ ರೀತಿಯ ಸಹಕಾರವನ್ನು ದೇಶಾದ್ಯಂತದ ಸಮುದಾಯಗಳು ನೀಡುವುದನ್ನು ಖಚಿತಪಡಿಸುತ್ತೇವೆ’’ ಎಂದು ಭರವಸೆ ನೀಡಿದರು.

Related Posts

Leave a Reply

Your email address will not be published. Required fields are marked *