ಮೆಲ್ಬೋರ್ನ್: ಕ್ರಿಕೆಟ್ ಜಗತ್ತಿನಲ್ಲಿ ‘ದಿ ಬಿಗ್ ಶೋ’ ಎಂದೇ ಖ್ಯಾತಿ ಪಡೆದಿರುವ ಆಸ್ಟ್ರೇಲಿಯಾದ ಸ್ಟಾರ್ ಆಲ್ರೌಂಡರ್ ಗ್ಲೆನ್ ಮ್ಯಾಕ್ಸ್ವೆಲ್ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಅಧಿಕೃತವಾಗಿ ನಿವೃತ್ತಿ ಘೋಷಿಸಿದ್ದಾರೆ. ಜನಪ್ರಿಯ ‘ದಿ ಫೈನಲ್ ವರ್ಡ್’ ಪಾಡ್ಕ್ಯಾಸ್ಟ್ನಲ್ಲಿ ಮಾತನಾಡುತ್ತ ಅವರು ತಮ್ಮ ನಿರ್ಧಾರವನ್ನು ಪ್ರಕಟಿಸಿದ್ದು, ಅಂತರರಾಷ್ಟ್ರೀಯ ಕ್ರಿಕೆಟ್ನೊಂದಿಗೆ ವಿಕ್ಟೋರಿಯಾ ತಂಡದ ಪರ ದೇಶೀಯ 50 ಓವರ್ ಹಾಗೂ ಪ್ರಥಮ ದರ್ಜೆ (ರೆಡ್ ಬಾಲ್) ಕ್ರಿಕೆಟ್ಗೂ ವಿದಾಯ ಹೇಳಿರುವುದಾಗಿ ಸ್ಪಷ್ಟಪಡಿಸಿದ್ದಾರೆ.
ಅದ್ಭುತ ವೃತ್ತಿಜೀವನ ಮತ್ತು ಐತಿಹಾಸಿಕ ಇನ್ನಿಂಗ್ಸ್ಗಳ ಮೆಲುಕು
38 ವರ್ಷ ವಯಸ್ಸಿನ ಮ್ಯಾಕ್ಸ್ವೆಲ್ ಆಸ್ಟ್ರೇಲಿಯಾ ಪರ 149 ಏಕದಿನ, 130 ಟಿ20 ಹಾಗೂ 7 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. 2015 ಮತ್ತು 2023ರ ಏಕದಿನ ವಿಶ್ವಕಪ್ ಹಾಗೂ 2021ರ ಟಿ20 ವಿಶ್ವಕಪ್ ಜಯಿಸಿದ ಆಸ್ಟ್ರೇಲಿಯಾ ತಂಡದ ಪ್ರಮುಖ ಅಸ್ತ್ರವಾಗಿದ್ದರು. ಭಾರತದ ರೋಹಿತ್ ಶರ್ಮಾ ಜೊತೆ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಅತಿ ಹೆಚ್ಚು (5) ಶತಕ ಸಿಡಿಸಿದ ಜಗತ್ತಿನ ಇಬ್ಬರೇ ಆಟಗಾರರಲ್ಲಿ ಇವರೂ ಒಬ್ಬರು. ವಿಶೇಷವಾಗಿ 2023ರ ವಿಶ್ವಕಪ್ನಲ್ಲಿ ಅಫ್ಘಾನಿಸ್ತಾನ ವಿರುದ್ಧ ಮುಂಬೈನಲ್ಲಿ ನಡೆದ ಪಂದ್ಯದಲ್ಲಿ ಕಾಲು ಸೆಳೆತದ ನಡುವೆಯೂ ಅಜೇಯ 201 ರನ್ ಗಳಿಸಿ ಅವರು ಬಾರಿಸಿದ ಐತಿಹಾಸಿಕ ದ್ವಿಶತಕ ಕ್ರಿಕೆಟ್ ಇತಿಹಾಸದಲ್ಲೇ ಎಂದಿಗೂ ಮರೆಯಲಾರದ ಸಾಹಸಯಾನವಾಗಿದೆ. ದೇಹವನ್ನು ದಂಡಿಸಿ ಫಿಟ್ನೆಸ್ ಕಾಪಾಡಿಕೊಳ್ಳಲು ಹಾಗೂ ಮುಂದಿನ ಸೀಮಿತ ಟೂರ್ನಿಗಳತ್ತ ಗಮನಹರಿಸಲು ಇದುವೇ ಸರಿಯಾದ ಸಮಯ ಎಂದು ಅವರು ತಿಳಿಸಿದ್ದಾರೆ.
ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಗ್ಲೆನ್ ಮ್ಯಾಕ್ಸ್ವೆಲ್ ತಮ್ಮದೇ ಆದ ವಿಶಿಷ್ಟ ಛಾಪು ಮೂಡಿಸಿದ್ದಾರೆ. ಭಾರತದ ರೋಹಿತ್ ಶರ್ಮಾ ಅವರೊಂದಿಗೆ ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 5 ಶತಕ ಸಿಡಿಸಿದ ವಿಶ್ವದ ಇಬ್ಬರೇ ಆಟಗಾರರಲ್ಲಿ ಮ್ಯಾಕ್ಸ್ವೆಲ್ ಕೂಡ ಒಬ್ಬರಾಗಿದ್ದಾರೆ. ಬ್ಯಾಟಿಂಗ್ ಜತೆಗೆ ತಮ್ಮ ಪರಿಣಾಮಕಾರಿ ಆಫ್-ಸ್ಪಿನ್ ಬೌಲಿಂಗ್ ಮೂಲಕ ಅವರು ಸೀಮಿತ ಓವರ್ಗಳ ಕ್ರಿಕೆಟ್ನಲ್ಲಿ 128 ವಿಕೆಟ್ಗಳನ್ನು ಕಬಳಿಸಿದ್ದಾರೆ.
ಕಳೆದ ವರ್ಷವೇ ಏಕದಿನ ಕ್ರಿಕೆಟ್ನಿಂದ ಹಿಂದೆ ಸರಿದಿದ್ದ ಮ್ಯಾಕ್ಸ್ವೆಲ್, ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್ನಲ್ಲಿ (MCG) ತಮ್ಮ ಕೊನೆಯ ಅಂತಾರಾಷ್ಟ್ರೀಯ ಪಂದ್ಯವನ್ನಾಡಿ ವಿದಾಯ ಹೇಳುವ ನಿರೀಕ್ಷೆಯಲ್ಲಿದ್ದರು. ಆದರೆ, ಮುಂಬರುವ ಇಂಗ್ಲೆಂಡ್ ವಿರುದ್ಧದ ಸರಣಿಗೆ ಕ್ರಿಕೆಟ್ ಆಸ್ಟ್ರೇಲಿಯಾ ಸೋಮವಾರ ಯುವ ಆಟಗಾರರನ್ನೊಳಗೊಂಡ ತಂಡವನ್ನು ಪ್ರಕಟಿಸಿದ ಬೆನ್ನಲ್ಲೇ ಅವರ ಆ ಆಸೆ ಕೈಗೂಡಲಿಲ್ಲ.
ತವರು ಮೈದಾನದಲ್ಲಿ ಬೀಳ್ಕೊಡುಗೆ ಸಿಗದ ಬಗ್ಗೆ ಮಾತನಾಡಿದ ಅವರು, ತನಗೆ ಮೆಲ್ಬೋರ್ನ್ ಮೈದಾನದಲ್ಲಿ ಬೀಳ್ಕೊಡುಗೆ ಪಂದ್ಯ ಸಿಗಬಹುದು ಎಂಬ ಸಣ್ಣ ಆಸೆ ಇತ್ತು. ಆದರೆ ಮಂಡಳಿ ಯುವ ಆಟಗಾರರೊಂದಿಗೆ ತಂಡವನ್ನು ಮುನ್ನಡೆಸುತ್ತಿರುವ ನಿಲುವನ್ನು ತಾನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಬಲ್ಲೆ ಎಂದಿದ್ದಾರೆ.
ತವರು ಮೈದಾನದಲ್ಲಿ ಸಿಗದ ಬೀಳ್ಕೊಡುಗೆ ಹಾಗೂ ಮುಂದಿನ ಹಾದಿ
ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್ನಲ್ಲಿ (MCG) ತಮ್ಮ ಕೊನೆಯ ಅಂತಾರಾಷ್ಟ್ರೀಯ ಪಂದ್ಯವನ್ನಾಡಿ ಬೀಳ್ಕೊಡುಗೆ ಪಡೆಯುವ ಸಣ್ಣಾಸೆ3 ಇತ್ತು ಎಂದಿರುವ ಮ್ಯಾಕ್ಸ್ವೆಲ್, ಕ್ರಿಕೆಟ್ ಆಸ್ಟ್ರೇಲಿಯಾ ಮಂಡಳಿಯು ಭವಿಷ್ಯದ ದೃಷ್ಟಿಯಿಂದ ಯುವ ಆಟಗಾರರಿಗೆ ಅವಕಾಶ ನೀಡುತ್ತಿರುವ ನಿರ್ಧಾರವನ್ನು ತಾವು ಸಂಪೂರ್ಣವಾಗಿ ಗೌರವಿಸುವುದಾಗಿ ತಿಳಿಸಿದ್ದಾರೆ. ಫೆಬ್ರವರಿಯಲ್ಲಿ ಶ್ರೀಲಂಕಾದಲ್ಲಿ ನಡೆದ ಟಿ20 ವಿಶ್ವಕಪ್ನ ಒಮಾನ್ ವಿರುದ್ಧದ ಪಂದ್ಯವೇ ಅವರ ಕೊನೆಯ ಅಂತಾರಾಷ್ಟ್ರೀಯ ಪಂದ್ಯವಾಗಿದೆ. 2022ರಲ್ಲಿ ಭಾರತೀಯ ಮೂಲದ ವಿನಿ ರಾಮನ್ ಅವರನ್ನು ವಿವಾಹವಾಗಿರುವ ಮ್ಯಾಕ್ಸ್ವೆಲ್, ಇನ್ನು ಮುಂದೆ ಕೇವಲ ಆಯ್ದ ಟಿ20 ಲೀಗ್ಗಳಲ್ಲಿ ಮಾತ್ರ ಮುಂದುವರಿಯುವ ಸಾಧ್ಯತೆಯಿದೆ.
#GlennMaxwell #CricketAustralia #TheBigShow #InternationalRetirement #UdayakalaNews #CricketNews #T20Cricket


