Saturday, October 31, 2026
Menu

ವಾಯುಪಡೆ ನೂತನ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ಅಶುತೋಷ್ ದೀಕ್ಷಿತ್

ಉದಯಕಾಲ ನ್ಯೂಸ್, ನವದೆಹಲಿ: ಭಾರತೀಯ ವಾಯುಪಡೆಯ (IAF) ಅತ್ಯುನ್ನತ ಹುದ್ದೆಯಾದ ವಾಯುಪಡೆಯ ಮುಖ್ಯಸ್ಥರಾಗಿ ಅನುಭವಿ ಹಾಗೂ ದಕ್ಷ ಫೈಟರ್ ಪೈಲಟ್ ಏರ್ ಚೀಫ್ ಮಾರ್ಷಲ್ ಅಶುತೋಷ್ ದೀಕ್ಷಿತ್ ಅವರು ಶನಿವಾರ ಅಧಿಕಾರ ವಹಿಸಿಕೊಂಡಿದ್ದಾರೆ. ಕಳೆದ 43 ವರ್ಷಗಳ ಸುದೀರ್ಘ ಹಾಗೂ ವಿಶಿಷ್ಟ ಸೇವೆ ಸಲ್ಲಿಸಿ ನಿವೃತ್ತರಾದ ಏರ್ ಚೀಫ್ ಮಾರ್ಷಲ್ ಎ.ಪಿ. ಸಿಂಗ್ ಅವರ ಸ್ಥಾನವನ್ನು ದೀಕ್ಷಿತ್ ಅವರು ಅಲಂಕರಿಸಿದ್ದಾರೆ. ನವದೆಹಲಿಯಲ್ಲಿ ನಡೆದ ಅಧಿಕೃತ ಹಸ್ತಾಂತರ ಸಮಾರಂಭದಲ್ಲಿ ಅವರು ದೇಶದ ರಕ್ಷಣಾ ಪಡೆಯ ಅತ್ಯುನ್ನತ ಜವಾಬ್ದಾರಿಯನ್ನು ವಹಿಸಿಕೊಂಡರು.

ವಾಯುಪಡೆಯ ಮುಖ್ಯಸ್ಥರಾಗಿ ಅಧಿಕಾರ ಸ್ವೀಕರಿಸುವ ಮೊದಲು ಅವರು ಐಎಎಫ್‌ ಉಪ ಮುಖ್ಯಸ್ಥರಾಗಿ ಹಾಗೂ ಪ್ರಧಾನ ಕಚೇರಿಯಲ್ಲಿ ಇಂಟಿಗ್ರೇಟೆಡ್ ಡಿಫೆನ್ಸ್ ಸ್ಟಾಫ್ ಮುಖ್ಯಸ್ಥರ ಸಮಿತಿಯ (CISC) ಅಧ್ಯಕ್ಷರಿಗೆ ಇಂಟಿಗ್ರೇಟೆಡ್ ಡಿಫೆನ್ಸ್ ಸ್ಟಾಫ್ ಮುಖ್ಯಸ್ಥರಾಗಿಯೂ ಸೇವೆ ಸಲ್ಲಿಸಿ ತಮ್ಮ ಕಾರ್ಯಕ್ಷಮತೆಯನ್ನು ಸಾಬೀತುಪಡಿಸಿದ್ದಾರೆ. ವಾಯುಸೇನೆಯಲ್ಲಿನ ಅವರ ದೀರ್ಘಕಾಲದ ಅನುಭವ ಮತ್ತು ವ್ಯೂಹಾತ್ಮಕ ನಾಯಕತ್ವವು ಭಾರತೀಯ ರಕ್ಷಣಾ ಕ್ಷೇತ್ರಕ್ಕೆ ಮತ್ತಷ್ಟು ಬಲ ತುಂಬಲಿದೆ.

ಏರ್ ಚೀಫ್ ಮಾರ್ಷಲ್ ಹಿನ್ನೆಲೆ

ಒಬ್ಬ ಅನುಭವಿ ಫೈಟರ್ ಪೈಲಟ್ ಮತ್ತು ಪ್ರಾಯೋಗಿಕ ಪರೀಕ್ಷಾ ಪೈಲಟ್ ಆಗಿರುವ ಅಶುತೋಷ್ ದೀಕ್ಷಿತ್ ಅವರು ಮಿರಾಜ್-2000, ಜಾಗ್ವಾರ್, ಮಿಗ್ (MiG) ಸರಣಿ, ಸ್ವದೇಶಿ ತೇಜಸ್, ಹಾಕ್, ಕಿರಣ್, ಎಎನ್-32 ಹಾಗೂ ಐಎಲ್-78 ಸೇರಿದಂತೆ ವಿವಿಧ ಬಗೆಯ ವಿಮಾನಗಳಲ್ಲಿ ಬರೋಬ್ಬರಿ 3,500 ಗಂಟೆಗಳಿಗೂ ಹೆಚ್ಚು ಕಾಲ ಹಾರಾಟ ನಡೆಸಿದ ಹೆಗ್ಗಳಿಕೆ ಹೊಂದಿದ್ದಾರೆ.

ಪ್ರಮುಖ ಮಿಲಿಟರಿ ಕಾರ್ಯಾಚರಣೆಗಳು

ದೇಶದ ಪ್ರಮುಖ ಮಿಲಿಟರಿ ಕಾರ್ಯಾಚರಣೆಗಳಾದ ‘ಆಪರೇಷನ್ ಸಫೇದ್ ಸಾಗರ್’, ‘ಆಪರೇಷನ್ ರಕ್ಷಕ್’, ‘ಕೋಪ್ ಇಂಡಿಯಾ’ ಹಾಗೂ ಇತ್ತೀಚಿನ ‘ಆಪರೇಷನ್ ಸಿಂಧೂರ್’ (Operation Sindhoor) ಸೇರಿದಂತೆ ಹಲವು ಆಪರೇಷನ್‌ಗಳಲ್ಲಿ ಅವರು ಸಕ್ರಿಯವಾಗಿ ಪಾತ್ರವಹಿಸಿ ತಮ್ಮ ಕಾರ್ಯಕ್ಷಮತೆಯನ್ನು ಮೆರೆದಿದ್ದಾರೆ. ಭಾರತೀಯ ವಾಯುಪಡೆಯನ್ನು ಆಧುನೀಕರಣಗೊಳಿಸುವ ಹಾಗೂ ಸ್ವಾವಲಂಬನೆಯತ್ತ ಕೊಂಡೊಯ್ಯುವ ನಿಟ್ಟಿನಲ್ಲಿ ಇವರ ನಾಯಕತ್ವವು ಅತ್ಯಂತ ನಿರ್ಣಾಯಕವಾಗಲಿದೆ ಎಂದು ರಕ್ಷಣಾ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

#AshutoshDixit #IAFChief #IndianAirForce #AirChiefMarshal #DefenceNews #UdayakalaNews #NewDelhi #IndianMilitary

Related Posts

Leave a Reply

Your email address will not be published. Required fields are marked *