Menu

ಜಾರಕಿಹೊಳಿಗೆ ಸ್ಟಿಂಗ್‌ ಮಾಡಿದವರು ಸಿದ್ದರಾಮಯ್ಯ ಮೇಲೂ ಮಾಡಿದ್ದಾರೆ: ಕೆ.ಎನ್‌. ರಾಜಣ್ಣ ಸ್ಫೋಟಕ ಮಾಹಿತಿ

ಉದಯಕಾಲ ನ್ಯೂಸ್, ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ನಡೆದಿದೆ ಎನ್ನಲಾದ ಸ್ಟಿಂಗ್ ಆಪರೇಷನ್ (Sting Operation) ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಕೆ.ಎನ್. ರಾಜಣ್ಣ (KN Rajanna) ಗಂಭೀರ ಹಾಗೂ ಸ್ಫೋಟಕ ಹೇಳಿಕೆಗಳನ್ನು ನೀಡುವ ಮೂಲಕ ರಾಜ್ಯ ರಾಜಕೀಯ ವಲಯದಲ್ಲಿ ತೀವ್ರ ಸಂಚಲನ ಮೂಡಿಸಿದ್ದಾರೆ.ರಾಜ್ಯದಲ್ಲಿ ಸಿಡಿ ದಾಖಲು ಹಾಗೂ ಸ್ಟಿಂಗ್ ಆಪರೇಷನ್‌ಗಳಿಗೆ ಒಂದು ವಿಶಿಷ್ಟವಾದ ಫ್ಯಾಕ್ಟರಿ ಇದೆ, ಆದರೆ ಅದರಲ್ಲಿ ಪಾಲುದಾರರು (Partners) ಮಾತ್ರ ಬೇರೆ ಬೇರೆ ಎಂದು ಗಂಭೀರ ಆರೋಪ ಮಾಡುವ ಮೂಲಕ ವಿರೋಧಿಗಳಿಗೆ ರಾಜಣ್ಣ ಟಾಂಗ್‌ ನೀಡಿದ್ದಾರೆ.

ನ್ಯಾಯಾಲಯದ ತಡೆಯಾಜ್ಞೆ ಬಗ್ಗೆ ಪ್ರಸ್ತಾಪ
ಸಿಎಂ ಸಿದ್ದರಾಮಯ್ಯ ಅವರು ನ್ಯಾಯಾಲಯದಿಂದ ತಡೆಯಾಜ್ಞೆ (Stay) ತಂದಿರುವ ವಿಚಾರವನ್ನು ಪ್ರಸ್ತಾಪಿಸಿರುವ ಅವರು, “ಸ್ಟಿಂಗ್ ಆಗಿರುವುದಕ್ಕಾಗಿಯೇ ಸಿದ್ದರಾಮಯ್ಯನವರು ಸ್ಟೇ ಪಡೆದುಕೊಂಡಿದ್ದಾರೆ. ಇದು ಹೊಸದೇನಲ್ಲ, ಹಿಂದೆ ಸ್ಟಿಂಗ್ ಆಪರೇಷನ್ ಮಾಡಿಯೇ ಸಿದ್ದರಾಮಯ್ಯನವರ ರಾಜೀನಾಮೆ ಪಡೆಯಲಾಯಿತೇ ಎಂಬ ಅನುಮಾನವೂ ಇರಬಹುದು, ಅದನ್ನು ತಳ್ಳಿಹಾಕಲು ಸಾಧ್ಯವಿಲ್ಲ” ಎಂದು ಅಭಿಪ್ರಾಯಪಟ್ಟಿದ್ದಾರೆ.

“ನನ್ನ ಮೇಲೂ ಸ್ಟಿಂಗ್ ಪ್ರಯತ್ನ ನಡೆದಿತ್ತು”

ಇದೇ ವೇಳೆ ಮಾತನಾಡುತ್ತಾ ತಮ್ಮ ಮೇಲೂ ಇಂತಹ ಕೃತ್ಯದ ಪ್ರಯತ್ನ ನಡೆದಿತ್ತು ಎಂಬುದನ್ನು ಬಹಿರಂಗಪಡಿಸಿದ ರಾಜಣ್ಣ, “ಹಿಂದೆ ನನ್ನ ಮೇಲೂ ಸ್ಟಿಂಗ್ ಮಾಡಲು ಪ್ರಯತ್ನ ಮಾಡಿದ್ದರು. ಅದು ಸರ್ಕಾರಿ ನಿವಾಸವಾಗಿದ್ದರಿಂದ ಭದ್ರತೆಗೆ ಸಿಸಿಟಿವಿ ಇರುತ್ತದೆ ಎಂದು ಭಾವಿಸಿದ್ದೆ, ಆದರೆ ನಂತರ ಅಲ್ಲಿ ಸಿಸಿಟಿವಿ ಇಲ್ಲ ಎಂಬುದು ಗೊತ್ತಾಯಿತು” ಎಂದು ಅಂದಿನ ಆತಂಕಕಾರಿ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

‘ಬ್ಲ್ಯಾಕ್‌ಮೇಲ್ ತಂತ್ರ’ ಖಂಡನೆ

ಈ ಇಡೀ ಬೆಳವಣಿಗೆಯನ್ನು ‘ಬ್ಲ್ಯಾಕ್‌ಮೇಲ್ ತಂತ್ರ’ ಎಂದು ಬಣ್ಣಿಸಿರುವ ಅವರು, “ಮುಖ್ಯಮಂತ್ರಿಗಳ ಬಳಿ ಎಲ್ಲಾ ತನಿಖಾ ಸಂಸ್ಥೆಗಳಿವೆ. ಜನರಲ್ಲಿರುವ ಗೊಂದಲವನ್ನು ಅವರೇ ತನಿಖೆ ಮಾಡಿಸಿ ದೂರ ಮಾಡಬೇಕು. ರಮೇಶ್ ಜಾರಕಿಹೊಳಿ ಅವರ ಸಿಡಿಯನ್ನು ಯಾರು ಮಾಡಿಸಿದ್ದು ಎಂದು ನೀವೇ ಹೇಳಿ? ಅವರದ್ದು ಮಾಡಿಸಿದವರೇ ಈಗ ಸಿದ್ದರಾಮಯ್ಯನವರದ್ದನ್ನೂ ಮಾಡಿಸಿದ್ದಾರೆ. ಇದರಿಂದ ಇಡೀ ಕರ್ನಾಟಕದ ಮಾನ-ಮರ್ಯಾದೆ ಹರಾಜಾಗುತ್ತಿದೆ, ನಮ್ಮ ಗೌರವವನ್ನು ನಾವೇ ಕಳೆದುಕೊಳ್ಳುತ್ತಿದ್ದೇವೆ. ಸಿಎಂ ಅವರೇ ಅಸಹಾಯಕರಂತೆ ಮಾತನಾಡಿದರೆ ಹೇಗೆ? ತನಿಖೆ ನಡೆಸಿ ಎಲ್ಲವನ್ನೂ ಬಹಿರಂಗಪಡಿಸಿದರೆ ಈ ಸ್ಟಿಂಗ್ ದಂಧೆ ಇಲ್ಲಿಗೇ ನಿಲ್ಲುತ್ತದೆ” ಎಂದು ಕಣ್ಣೀರಿಡುವಂತೆ ತೀವ್ರವಾಗಿ ಆಗ್ರಹಿಸಿದ್ದಾರೆ.
#KN_Rajanna #Siddaramaiah #StingOperation #RameshJarkiholi #KarnatakaPolitics #UdayakalaNews #PoliticalSting #BangaloreNews

Related Posts

Leave a Reply

Your email address will not be published. Required fields are marked *