Saturday, October 10, 2026
Menu

ಮಸೀದಿ  ಮೇಲೆ ನಿಂತು ಬಿಯರ್‌ ಕುಡಿದ ಕಾನ್ಸ್‌ಟೇಬಲ್‌: ವಿಡಿಯೋ ವೈರಲ್‌ ಬೆನ್ನಲ್ಲೇ ಅಮಾನತು!

ಉದಯಕಾಲ ನ್ಯೂಸ್, ಕಲಬುರಗಿ: ಇಲ್ಲೊಂದು ಬೇಲಿಯೇ ಎದ್ದು ಬೆಲೆ ಮೇಯ್ದ ಕಥೆ ನಡೆದಿದೆ. ಕಾನೂನು ಸುವ್ಯವಸ್ಥೆ ಪಾಲಿಸಬೇಕಾದ ಪೊಲೀಸಪ್ಪ ದರ್ಪ ಮೆರೆದಿರುವುದು ಬೆಳಕಿಗೆ ಬಂದಿದೆ.  ಮಹಾಗಾಂವ್ ಪೊಲೀಸ್ ಠಾಣೆಯ ಕಾನ್ಸ್‌ಟೇಬಲ್ ಮಸೀದಿ ಛಾವಣಿಯ ಮೇಲೆ ನಿಂತು ಕಾನ್ಸ್‌ಟೇಬಲ್ ಬಿಯರ್ ಕುಡಿಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಬೆನ್ನಲ್ಲೇ ಎಚ್ಚೆತ್ತ ಪೊಲೀಸ್ ಇಲಾಖೆ ಕರ್ತವ್ಯದ ಸಮಯದಲ್ಲಿ ಗಂಭೀರ ನಿರ್ಲಕ್ಷ್ಯ ಹಾಗೂ ಧಾರ್ಮಿಕ ಸ್ಥಳದ ಪಾವಿತ್ರ್ಯತೆಗೆ ಧಕ್ಕೆ ತಂದ ಆರೋಪದಡಿ ಈ ಪೇದೆಯನ್ನು ಸೇವೆಯಿಂದ ಅಮಾನತು ಮಾಡಿ ಕಠಿಣ ಕ್ರಮ ಜರುಗಿಸಿದೆ.

ಕಮಲಾಪುರ ತಾಲೂಕಿನ ಮಹಾಗಾಂವ್ ಪೊಲೀಸ್ ಠಾಣೆಗೆ ಸೇರಿದ ಪೇದೆ ಹಣಮಂತ ಎಂಬುವವರೇ ಅಮಾನತುಗೊಂಡಿರುವ ಕಾನ್ಸ್‌ಟೇಬಲ್. ಠಾಣಾ ವ್ಯಾಪ್ತಿಯ ಹರಸೂರು ಗ್ರಾಮದಲ್ಲಿ ಇತ್ತೀಚೆಗೆ ಗಲಾಟೆಯೊಂದು ನಡೆದಿತ್ತು. ಈ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು (ಬಂದೋಬಸ್ತ್‌ಗಾಗಿ) ಕಾನ್ಸ್‌ಟೇಬಲ್ ಹಣಮಂತ ಅವರನ್ನು ನಿಯೋಜನೆ ಮಾಡಲಾಗಿತ್ತು.

ಆದರೆ, ಕರ್ತವ್ಯದಲ್ಲಿದ್ದು ಜನರಿಗೆ ರಕ್ಷಣೆ ನೀಡಬೇಕಿದ್ದ ಜವಾಬ್ದಾರಿಯುತ ಪೇದೆ, ಅದೇ ಗ್ರಾಮದ ಮಸೀದಿ ಮೇಲ್ಛಾವಣಿಯ ಮೇಲೆ (ಛಾವಣಿ) ಏರಿ ಕುಳಿತು ಬಹಿರಂಗವಾಗಿ ಬಿಯರ್ ಕುಡಿದಿದ್ದಾರೆ.

ಪೇದೆಯ ಈ ಬೇಜವಾಬ್ದಾರಿ ವರ್ತನೆಯನ್ನು ಸ್ಥಳೀಯ ಗ್ರಾಮಸ್ಥರು ತಮ್ಮ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಹಿಡಿದು ವಿಡಿಯೋ ಮಾಡಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದ್ದಂತೆ ಸಾರ್ವಜನಿಕ ವಲಯದಿಂದ ತೀವ್ರ ಆಕ್ರೋಶ ವ್ಯಕ್ತವಾಯಿತು.

ವಿಡಿಯೋದ ದೃಶ್ಯಾವಳಿಗಳ ಆಧಾರದ ಮೇಲೆ ಕಾನ್ಸ್‌ಟೇಬಲ್ ಮದ್ಯ ಸೇವಿಸಿರುವುದು (ಬಿಯರ್ ಕುಡಿದಿರುವುದು) ಮೇಲ್ನೋಟಕ್ಕೆ ದೃಢಪಟ್ಟಿದೆ. ಸಾರ್ವಜನಿಕ ಶಾಂತಿ ಕದಡುವ ಹಾಗೂ ಇಲಾಖೆಗೆ ಮಸಿ ಬಳಿಯುವ ಇಂತಹ ಕೃತ್ಯವನ್ನು ಗಂಭೀರವಾಗಿ ಪರಿಗಣಿಸಿರುವ ಕಲಬುರಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಅಡ್ಡೂರು ಶ್ರೀನಿವಾಸಲು ಅವರು, ತಕ್ಷಣವೇ ಪೇದೆ ಹಣಮಂತ ಅವರನ್ನು ಅಮಾನತು (Suspend) ಮಾಡಿ ಆದೇಶ ಹೊರಡಿಸಿದ್ದಾರೆ.

#Udayakala #UdayakalaNews #KalaburagiNews #KarnatakaPolice #ConstableSuspended #ViralVideo #HarasurVillage #MahagaonPolice #AddurSrinivasulu #KarnatakaNews #PoliceAction

Related Posts

Leave a Reply

Your email address will not be published. Required fields are marked *