Menu

ಲಾರಿ, ವ್ಯಾನ್ ನಡುವೆ ಭೀಕರ ಅಪಘಾತ: 7 ಭಕ್ತರ ದುರ್ಮರಣ, 21 ಮಂದಿಗೆ ಗಂಭೀರ ಗಾಯ

ಲಾರಿ, ವ್ಯಾನ್ ನಡುವೆ ಭೀಕರ ಅಪಘಾತ: 7 ಭಕ್ತರ ದುರ್ಮರಣ, 21 ಮಂದಿಗೆ ಗಂಭೀರ ಗಾಯ

ಮುಂಬೈ/ಅಮರಾವತಿ: ಮಹಾರಾಷ್ಟ್ರದ ಸಮೃದ್ಧಿ ಮಹಾಮಾರ್ಗದಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಏಳು ಮಂದಿ ಭಕ್ತರು ದುರ್ಮರಣಕ್ಕೀಡಾಗಿದ್ದು, 21 ಜನರು ಗಂಭೀರವಾಗಿ ಗಾಯಗೊಂಡಿರುವ ಧಾಷ್ಟ್ರ ಘಟನೆ ಶುಕ್ರವಾರ ಬೆಳಗಿನ ಜಾವ ನಡೆದಿದೆ.
ಮಹಾರಾಷ್ಟ್ರದ ಅಮರಾವತಿ ಜಿಲ್ಲೆಯ ಧಾಮಂಗಾಂವ್ ರೈಲ್ವೆ ನಿಲ್ದಾಣದ ಸಮೀಪದ ಸಮೃದ್ಧಿ ಮಹಾಮಾರ್ಗದಲ್ಲಿ (ಚಾನೆಲ್ ಸಂಖ್ಯೆ 97) ಈ ಅಪಘಾತ ಸಂಭವಿಸಿದೆ.

ನವರಾತ್ರಿ ಮೂರ್ತಿ ತರುತ್ತಿದ್ದಾಗಲೇ ದುರಂತ!

ಸಿಂಧಿ ಮೇಘೆ ಹಾಗೂ ವಾರ್ಧಾ ಮೂಲದ ನವದುರ್ಗಾ ಪೂಜಾ ಸಮಿತಿಯ ಸದಸ್ಯರು ಶೇಗಾಂವ್‌ನಿಂದ ದುರ್ಗಾ ದೇವಿಯ ಮೂರ್ತಿಯನ್ನು ಪಿಕಪ್ (ಬೊಲೆರೋ) ವಾಹನದಲ್ಲಿ ಪ್ರತಿಯಿಟ್ಟುಕೊಂಡು ವಾರ್ಧಾಕ್ಕೆ ಹಿಂತಿರುಗುತ್ತಿದ್ದರು. ಈ ವೇಳೆ ವೇಗವಾಗಿ ಬಂದ ಲಾರಿಯೊಂದು ಪಿಕಪ್ ವ್ಯಾನ್‌ನ ಹಿಂಭಾಗಕ್ಕೆ ಭೀಕರವಾಗಿ ಡಿಕ್ಕಿ ಹೊಡೆದಿದೆ.
ಡಿಕ್ಕಿಯ ರಭಸಕ್ಕೆ ಐವರು ಸ್ಥಳದಲ್ಲೇ ಅಸುನೀಡಿದ್ದು, ಗಾಯಗೊಂಡವರನ್ನು ಧಾಮಂಗಾಂವ್ ಗ್ರಾಮೀಣ ಆಸ್ಪತ್ರೆ ಹಾಗೂ ಸಾವಂಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಮತ್ತಿಬ್ಬರು ಕೊನೆಯುಸಿರೆಳೆದಿದ್ದು, ಒಟ್ಟು ಸಾವಿನ ಸಂಖ್ಯೆ 7ಕ್ಕೆ ಏರಿಕೆಯಾಗಿದೆ.
ಘಟನಾ ಸ್ಥಳಕ್ಕೆ ಧಾಮಂಗಾಂವ್ ಪೊಲೀಸರು ಹಾಗೂ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಅಪಘಾತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ. ಹಬ್ಬದ ಸಂಭ್ರಮದಲ್ಲಿದ್ದ ಕುಟುಂಬಗಳಲ್ಲಿ ಈ ದುರಂತ ಶೋಕದ ಛಾಯೆ ಮೂಡಿಸಿದೆ.

#RoadAccident #MaharashtraNews #SamruddhiMahamarg #Amravati #Tragedy #KannadaNews #Udayakala #UdayakalaNews

Related Posts

Leave a Reply

Your email address will not be published. Required fields are marked *