Tuesday, September 29, 2026
Menu

ನಿಲ್ಲಿಸಿದ್ದ ಲಾರಿಗೆ ಪಿಕಪ್‌ ವಾಹನ ಡಿಕ್ಕಿಯಾಗಿ ಇಬ್ಬರ ಸಾವು

ಧಾರವಾಡದಲ್ಲಿ ನಿಲ್ಲಿಸಿದ್ದ ಲಾರಿಗೆ ಪಿಕಪ್‌ ವಾಹನ ಡಿಕ್ಕಿ ಹೊಡೆದು ಇಬ್ಬರು ಮೃತಪಟ್ಟಿದ್ದು, ಒಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಸವದತ್ತಿಯ ಸಕ್ಕರೆ ಕಾರ್ಖಾನೆಯಿಂದ ಕಾಕಂಬಿಯನ್ನು ಸಾಗಿಸುತ್ತಿದ್ದ ಲಾರಿಯ ಟೈರ್ ಅಮ್ಮಿನಭಾವಿ ಬಳಿ ಪಂಕ್ಚರ್ ಆಗಿತ್ತು. ಚಾಲಕ ಮತ್ತು ಅವರೊಂದಿಗೆ ಇದ್ದ ಇಬ್ಬರು ಲಾರಿಯನ್ನು ರಸ್ತೆ ಬದಿ ನಿಲ್ಲಿಸಿ ಪಂಕ್ಚರ್ ಆದ ಟೈರ್ ದುರಸ್ತಿ ಮಾಡುತ್ತಿದ್ದರು. ಆಗ ಸವದತ್ತಿ ಕಡೆಯಿಂದ ಈರುಳ್ಳಿ ತುಂಬಿಕೊಂಡು ಬರುತ್ತಿದ್ದ ಪಿಕಪ್ ವಾಹನ ನಿಯಂತ್ರಣ ತಪ್ಪಿ ನಿಲ್ಲಿಸಿದ್ದ ಲಾರಿಗೆ ಡಿಕ್ಕಿ ಹೊಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಡಿಕ್ಕಿಯ ರಭಸಕ್ಕೆ ಟೈರ್ ಬದಲಿಸುವ ಕೆಲಸದಲ್ಲಿ ನಿರತರಾಗಿದ್ದ ಒಬ್ಬರು ಸ್ಥಳದಲ್ಲೇ ಮೃತಪಟ್ಟರೆ, ಒಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಅಸು ನೀಗಿದ್ದಾರೆ. ಗಾಯಗೊಂಡಿದ್ದ ಮತ್ತೊಬ್ಬರ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅಪಘಾತಕ್ಕೆ ನಿಖರ ಕಾರಣ ಪತ್ತೆಹಚ್ಚಲು ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಟ್ರಕ್‌- ಕಾರು ಡಿಕ್ಕಿಗೆ ಮಹಿಳೆ ಬಲಿ

ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಪಿಕಪ್ ಟ್ರಕ್ ಮತ್ತು ಕಾರಿನ ನಡುವೆ ಡಿಕ್ಕಿ ಸಂಭವಿಸಿ 67 ವರ್ಷದ ಮಹಿಳೆ ಮೃತಪಟ್ಟಿದ್ದು, ಇತರ ಐವರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಂಗಳೂರಿನಿಂದ ಬೆಂಗಳೂರಿನತ್ತ ಪಿಕಪ್ ಟ್ರಕ್ ತೆರಳುತ್ತಿದ್ದಾಗ ದಕ್ಷಿಣ ಕನ್ನಡ ಜಿಲ್ಲೆಯ ಮಾಣಿ ಗ್ರಾಮದಲ್ಲಿ ಈ ಅಪಘಾತ ಸಂಭವಿಸಿದೆ.

ಪಿಕಪ್ ಟ್ರಕ್ ಹಲಿರಾ ಎಂಬಲ್ಲಿ ತಲುಪಿದಾಗ ಮುಂದೆ ಹೋಗುತ್ತಿದ್ದ ಕಾರೊಂದು ಮಂಗಳೂರಿನತ್ತ ಹಿಂತಿರುಗಲು ರಾಷ್ಟ್ರೀಯ ಹೆದ್ದಾರಿಯಲ್ಲಿ ಯು-ಟರ್ನ್ ತೆಗೆದುಕೊಂಡಾಗ ಈ ದುರಂತ ನಡೆದಿದೆ. ಸ್ಥಳೀಯರು ಸ್ಥಳಕ್ಕೆ ಧಾವಿಸಿ, ಕಾರು ಚಾಲಕ, ಪ್ರಯಾಣಿಕರು ಮತ್ತು ಪಿಕಪ್ ಚಾಲಕ ಸೇರಿದಂತೆ ಗಾಯಗೊಂಡವರನ್ನು ಆಸ್ಪತ್ರೆಗೆ ಸಾಗಿಸಲು ನೆರವಾದರು. ಗಾಯಗೊಂಡಿದ್ದ 67 ವರ್ಷದ ನೆಬಿಸಾ ಚಿಕಿತ್ಸೆ ಪಡೆಯುತ್ತಿದ್ದಾಗ ಮೃತಪಟ್ಟರು.

Related Posts

Leave a Reply

Your email address will not be published. Required fields are marked *