ಬಸವಾದಿ ಶಿವಶರಣರ ಹಿಂದೂ ಸಮಾವೇಶ ಯಾಕೆ ಮಾಡ್ತಿದ್ದಾರೆ ಅಂತ ಪ್ರಶ್ನೆ ಮಾಡುವ ಕಮ್ಯುನಿಷ್ಟರ ಕೆಲಸವೇ ಯಾವಾಗಲೂ ಜಗಳ ಆಡೋದು ಎಂದು ಮಹಾರಾಷ್ಟ್ರದ ಕನ್ನೇರಿಯ ಕಾಡಸಿದ್ದೇಶ್ವರ ಸ್ವಾಮೀಜಿ ಆರೋಪಿಸಿದ್ದಾರೆ.
ಕಲಬುರಗಿ ನಗರದ ಎನ್.ವಿ. ಕಾಲೇಜ್ ಮೈದಾನದಲ್ಲಿ ಬಸವಾದಿ ಶಿವಶರಣರ ಹಿಂದೂ ಬೃಹತ್ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು, ಬಸವಾದಿ ಶಿವಶರಣರ ಹಿಂದೂ ಸಮಾವೇಶ ಯಾಕೆ ಮಾಡ್ತಿದ್ದಾರೆ ಅಂತ ಕಾವಿಧಾರಿ ಕಮ್ಯುನಿಷ್ಟರು ಕೇಳ್ತಿದ್ದಾರೆ . ಕಮ್ಯುನಿಷ್ಟರ ಕೇಲಸವೇ ಯಾವಾಗಲೂ ಜಗಳ ಆಡೋದು, ಬರೀ ಜಗಳ ಹಚ್ವೋದೆ ಅವರ ಕೆಲಸ ಎಂದು ಕಿಡಿಕಾರಿದರು.
ಸಮಾಜಗಳಲ್ಲಿ ಜಗಳ ಹಚ್ಚೋದೆ ಕಮ್ಯುನಿಷ್ಟರ ಕೆಲಸ. ಕಮ್ಯುನಿಷ್ಟರ ಮಾತು ಕೇಳದಿದ್ದರೆ ಕೊಲೆ ಮಾಡಿಸುತ್ತಾರೆ. ಇವರು ಕಳೆದ 80 ವರ್ಷಗಳಲ್ಲಿ 10 ಕೋಟಿ ಜನರ ಕೊಲೆ ಮಾಡಿದ್ದಾರೆ. 2 ಕೋಟಿ ಯುರೋಪ್, 6 ಕೋಟಿ ಚೀನಾದಲ್ಲಿ ಸಂಹಾರ. ಈಗ ಇವರು ದಯವೇ ಧರ್ಮದ ಮೂಲವಯ್ಯ ಎನ್ನುತ್ತಿದ್ದಾರೆ. ಇವರೆಲ್ಲ ಈವಾಗ ಬಸವಣ್ಣನ ಹೆಸರು ಹೇಳಿಕೊಂಡು ಬೀದಿಗೆ ಬರುತ್ತಿದ್ದಾರೆ. ಕಾಯಕ ಮಾಡು ಅಂತ ಬಸವಣ್ಣ ಹೇಳಿದ್ದಾರೆ ಇವರ‌್ಯಾರು ಕಾಯಕ ಮಾಡೋರಲ್ಲ.ಫುಗಸಟ್ಟೆ ತಿನ್ನೋರು ಕಮ್ಯುನಿಷ್ಟರು. ಇವರ ಜೊತೆ ಕಾಯಕ ಮಾಡದ ಕೆಲವು ಕಾವಿಧಾರಿಗಳು ಸೇರಿಕೊಂಡಿದ್ದಾರೆ. ಮತ್ತೊಬ್ಬರ ಸ್ವಾತಂತ್ರ್ಯ ಪ್ರಶ್ನಿಸುವ ಅಧಿಕಾರ ಕೊಟ್ಟವರು ಯಾರು ಈ ಹುಚ್ಚುನಾಯಿಗಳಿಗೆ. ಕಮ್ಯುನಿಷ್ಟರ ಮುಖವಾಡ ಬಿಚ್ಚಿಡಬೇಕಾಗಿದೆ ಎಂದು ಸ್ವಾಮೀಜಿ ವಾಗ್ದಾಳಿ ನಡೆಸಿದರು.
ಲಿಂಗಾಯತ ಸಮಾಜ ಒಡೆಯುವ ಹುನ್ನಾರ ಮಾಡ್ತಿದ್ದಾರೆ. ಲಿಂಗಾಯತ ಸಮಾಜ ಒಡದರೆ ಇವರ ಸಮುದಾಯದ ಸಂಖ್ಯೆ ಕಡಿಮೆ ಆಗುತ್ತದೆ ಎಂದು ಧರ್ಮ, ಸಮಾಜ ಒಡೆಯುವ ಕೆಲಸ ಮಾಡ್ತಿದ್ದಾರೆ ಎಂದು ಟೀಕಾ ಪ್ರಹಾರ ನಡೆಸಿದರು.
ರಾಜ್ಯದಲ್ಲಿ ಕಲಬುರಗಿ ಎರಡನೇ ಅತಿದೊಡ್ಡ ಜಿಲ್ಲೆ. ನಿಜಾಮರು, ಸುಲ್ತಾನರು ಆಳಿದರು. ಕಲಬುರಗಿ ಇವತ್ತಿಗೂ ಗಂಡು ಮೆಟ್ಟಿದ ನಾಡು. ಇಂತಹ ನಗರದಲ್ಲಿ ಬಸವಾದಿ ಶಿವಶರಣ ಹಿಂದೂ ಸಮಾವೇಶ ನಡೆಯುತ್ತಿದೆ.
ಇದನ್ನ ಕೆಲವುರು ಪ್ರಶ್ನೆ ಮಾಡುತ್ತಿದ್ದಾರೆ.ಇವರೆಲ್ಲಾ ಬಸವಾದಿ ಶರಣರ ಪೇಟೆಂಟ್ ಮಾಡಿಕೊಂಡಿದ್ದಾರಾ ಇವರು. ಇವರು ದಿನಾ ಬೀದಿ ಮೇಲೆ ಇರುತ್ತಾರೆ. ವರಿಗೆ ನಾಚಿಕೆ ಏನು ಇಲ್ಲ. ಇವರು ನಮಗೆ ಬಸವಾದಿ ಶಿವಶರಣರ ಸಮಾವೇಶ ಮಾಡಬೇಡಿ ಎನ್ನುತ್ತಾರೆ. ನಮ್ಮ ಸಂವಿಧಾನ ಎಲ್ಲರಿಗೂ ವಾಕ್ ಸ್ವಾತಂತ್ರ್ಯ ನೀಡಿದೆ. ಇವರ ಹಿಡನ್ ಅಜೆಂಡಾ ಬೇರೆ ಇದೆ ಎಂದರು.
ವೀರಶೈವ-ಲಿಂಗಾಯತರನ್ನ ಒಡೆಯುತ್ತಿದ್ದಾರೆ. ಲಿಂಗಾಯತರು, ವೀರಶೈವರ ಬೇರೆ ಬೇರೆ ಎನ್ನುತ್ತಿದ್ದಾರೆ. ಕಲಬುರಗಿಯಲ್ಲಿಯೂ ನೀಲವ್ವ, ಬಾಳವ್ವ ಎನ್ನೋರು ಇದ್ದಾರೆ ಎಂದು ಪ್ರಗತಿಪರ ಹೋರಾಟಗಾರರ ವಿರುದ್ದ ಪರೋಕ್ಷ ವಾಗ್ದಾಳಿ ನಡೆಸಿದರು. ಸ್ವಾಮೀಜಿ ಕುಂಕುಮ ಯಾಕೆ ಹಚ್ಕೋತಾರೆ ಎನ್ನುತ್ತಾರೆ. ತಾಳಿಯನ್ನ ನಿಮ್ಮ ಗಂಡದಿರಗೂ ಕಟ್ಟಿ. ಸಮಾನತೆ ಎನ್ನುತ್ತಿರಿ ನೀವೊಬ್ಬರೇ ತಾಳಿ ಕಟ್ಟಿಕೊಂಡಿದ್ದಿರಿ. ಲಿಂಗಾಯತರನ್ನ ಇಸ್ಲಾಂನೊಂದಿಗೆ ತಳುಕು ಹಾಕೋಕೆ ಹೊರಟಿದ್ಸಾರೆ.ಆ ಸಾಣೆಹಳ್ಳಿ ಸ್ವಾಮೀಜಿ ಕೆಲಸ ಇದು. ನಿಜಗುಣಾನಂದ ಸ್ವಾಮಿ ಯಾವಗಲೂ ನಮ್ಮ ದೇವರನ್ನ ಬೈತಾರೆ. ನಮಾಜ್ ಮತ್ತು ಪೂಜೆ ಎರಡೂ ಒಂದೇ ಎನ್ನುತ್ತಾರೆ. ರಂಜಾನ್ ದರ್ಗಾ ಹೇಳ್ತಾನೆ, ಲಿಂಗಾಯತ ಧರ್ಮ ಇಷ್ಟ ಎನ್ನುತ್ತಾನೆ. ಹಾಗಿದ್ರೆ ಯಾಕೆ ಇಲ್ಲಿಯವರೆಗೆ ಲಿಂಗ ಕಟ್ಟಿಕೊಳ್ಳಲಿಲ್ಲ.ನಿಮ್ಮದೂ ನೀವು ಮಾಡಿ ನಮ್ಮದು ನಾವು ಮಾಡ್ತಿವಿ. ನಮಗೆ ಉಪದೇಶ ಮಾಡೋಕೆ ಬರಬೇಡಿ. ಹಿಂದೂ ಸಂಸ್ಕೃತಿಯನ್ನ ಕ್ಷೀಣಸೋ ಕೆಲಸ ಆಗುತ್ತಿದೆ ಎಂದು ಹೇಳಿದರು.
ಬೀದರ್ ನಲ್ಲಿ ಅತೀ ಹೆಚ್ಚು ಚರ್ಚ್ ಗಳಿವೆ. ಅಲ್ಯಾಕೆ ಹೆಚ್ಚು ಚಚ್೯ಗಳಿವೆ ಅಂದ್ರೆ ಅಲ್ಲಿ ಬಸವ ಪ್ರಚಾರಕರು ಹೆಚ್ಚಿದ್ದಾರೆ. ಮಾತಿತ್ತೆದ್ದಿದ್ರೆ ಮನಸ್ಮೃತಿ ಎನ್ನುತ್ತಾರೆ. ಅದನ್ನಾದ್ರೂ ಪೂರ್ತಿ ಓದಿದ್ದಾರಾ ಅಂದ್ರೆ ಅದು ಇಲ್ಲ. ದಯಾನಂದ ಸರಸ್ವತಿ ಬರೆದ ಮನಸ್ಮೃತಿ ಮಾತ್ರ ನಿಜವಾದ ಮನಸ್ಮೃತಿ. ಅದನ್ನ ನೀವು ಓದಬೇಕು. ಇಸ್ಲಾಂನಲ್ಲಿ ಸ್ತ್ರೀಯರ ಪಾತ್ರ ಏನು ಎನ್ನೋದನ್ನ ತಿಳಿಸಿ. ಅವರನ್ನ ನೀವು ಬರೀ ಅವರನ್ನ ಚಿಲ್ಡ್ರನ್ ಫ್ಯಾಕ್ಟರಿ ಮಾಡಿದ್ದಿರಿ.ಇವರು ಹೇಳೋದು ಒಂದು ಮಾಡೋದು ಒಂದು ಎಂದು ಕಿಡಿಕಾರಿದರು.
ಭಾಲ್ಕಿ ಮುತ್ಯಾ ಕೋಟಿ ರೂಪಾಯಿ ಖರ್ಚು ಮಾಡಿ ಗುಡಿ ಕಟ್ಯಾನ. ಜನರಿಗೆ ಜನರಿಗೆ ಗುಡಿಗೆ ಹೋಗಬೇಡಿ ಎನ್ನುತ್ತಾರೆ. ನಿಮ್ಮ ಮಠದಾಗ ಕೋಟಿ ಕೋಟಿ ಹಣ ಡಿಪಾಸಿಟ್ ಮಾಡಿರಿ. ಎಲ್ಲಿದೆ ಬಸವಣ್ಣನ ತತ್ವ
ಎಂದು ಕನ್ನೇರಿ ಸ್ವಾಮೀಜಿ ಪ್ರಶ್ನೆ ಮಾಡಿದರು.


