Saturday, September 19, 2026
Menu

ಅಂಗಡಿ ಗೋಡೆಗೆ ಬೈಕ್‌ ಗುದ್ದಿ ಎಂಜಿನಿಯರಿಂಗ್‌ ವಿದ್ಯಾರ್ಥಿಗಳಿಬ್ಬರ ಸಾವು

ಯಲಹಂಕದ ರಾಜಾನುಕುಂಟೆ ರಸ್ತೆಯಲ್ಲಿ ಅಂಗಡಿಯ ಗೋಡೆಗೆ ಬೈಕ್‌ ಗುದ್ದಿ ಇಬ್ಬರು ಎಂಜಿನಿಯರಿಂಗ್‌ ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ.

ವಚನ್ ಮತ್ತು ಪ್ರದೀಪ್ ಮೃತಪಟ್ಟಿರುವ ವಿದ್ಯಾರ್ಥಿಗಳು. ಬೆಳಗಿನ ಜಾವ ಇಬ್ಬರೂ ಸುತ್ತಾಡಲು ಬಂದಿದ್ದಾಗ ಈ ದುರಂತ ನಡೆದಿದೆ, ಸ್ಥಳಕ್ಕೆ ಯಲಹಂಕ ಸಂಚಾರಿ ಠಾಣೆ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ಪರಿಶೀಲನೆ ನಡೆಸಿದ್ದಾರೆ.

ಹೆಂಡತಿಯ ಕೊಲೆಗೈದಾತ ಆತ್ಮಹತ್ಯೆ

ದೊಡ್ಡಬಳ್ಳಾಪುರದ ಲಾಡ್ಜ್‌ನಲ್ಲಿ ಹೆಂಡತಿಯನ್ನು ಕೊಲೆಗೈದು ಪರಾರಿಯಾಗಿದ್ದ ಗಂಡ ಚಿಕ್ಕಬಳ್ಳಾಪುರ ಮದುಗೆರೆ ಗ್ರಾಮದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ದೊಡ್ಡಬಳ್ಳಾಪುರದಲ್ಲಿ ಪತ್ನಿ ವಿದ್ಯಾಳನ್ನು ಕೊಲೆ ಮಾಡಿದ್ದ ಆನಂದ್, ಗೌರಿಬಿದನೂರು ತಾಲೂಕಿನ ಮದುಗೆರೆ ಗ್ರಾಮದ ಕೆರೆ ಬಳಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ದೊಡ್ಡಬಳ್ಳಾಪುರ ಲಾಡ್ಜ್‌ನಲ್ಲೊ ೨೩ ವರ್ಷದ ಪತ್ನಿಯನ್ನು ಆಕೆಯ ಐಡಿ ಕಾರ್ಡ್‌ ಟ್ಯಾಗ್‌ನಿಂದ ಕತ್ತು ಬಿಗಿದು ಮೊಲೆ ಮಾಡಿ ಪರಾರಿಯಾಗಿದ್ದ. ಸೆಪ್ಟೆಂಬರ್ 16ರಂದು ಪ್ರಕರಣ ಬೆಳಕಿಗೆ ಬಂದಿತ್ತು.

ಪರಾರಿಯಾಗಿದ್ದ ಆನಂದ್ ಮದುಗೆರೆ ಗ್ರಾಮದಲ್ಲಿ ಶವವಾಗಿ ಪತ್ತೆಯಾಗಿದ್ದಾನೆ. ಕೆರೆಯ ಬಳಿ ಬೈಕ್ ಬಿಟ್ಟು ಮದ್ಯ ಸೇವಿಸಿ ಜಾಲಿ ಮರ ಹತ್ತಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಜಾಲಿ ಮರದ ಬುಡದಲ್ಲಿ ಮದ್ಯದ ಬಾಟಲಿ, ಸಿಗರೇಟ್ ಪ್ಯಾಕೆಟ್ ಪತ್ತೆಯಾಗಿದ್ದು, ಜೇಬಿನಲ್ಲಿ ಆತನ ಹಾಗೂ ವಿದ್ಯಾಳ ಮೊಬೈಲ್‌ಗಳು ಸಿಕ್ಕಿವೆ. ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Related Posts

Leave a Reply

Your email address will not be published. Required fields are marked *