Wednesday, September 16, 2026
Menu

ಮೆಕ್ಕಾದಲ್ಲಿ ಹೌತಿಯ ಡ್ರೋನ್‌ ಹೊಡೆದುರುಳಿಸಿದ ಸೌದಿ

ಮೆಕ್ಕಾದಲ್ಲಿ ಬಂಡುಕೋರ ಸಂಘಟನೆ ಹೌತಿಯ ಡ್ರೋನ್‌ ಅನ್ನು ಸೌದಿ ಅರೇಬಿಯಾ ಹೊಡೆದುರುಳಿಸಿದೆ. ಮೆಕ್ಕಾ, ಜೆಡ್ಡಾ ಮತ್ತು ತೈಫ್ ಗವರ್ನರೇಟ್‌ಗಳಲ್ಲಿ ಸೌದಿ ಅರೇಬಿಯಾದ ನಾಗರಿಕ ರಕ್ಷಣಾ ಇಲಾಖೆ ವೈಮಾನಿಕ ದಾಳಿಯ ಭೀತಿಯಿಂದ ತುರ್ತು ಎಚ್ಚರಿಕೆ ಘೋಷಿಸಿದೆ.

ಮುಂಜಾಗ್ರತಾ ಕ್ರಮವಾಗಿ ಮದೀನಾದ ಪ್ರಿನ್ಸ್ ಮೊಹಮ್ಮದ್ ಬಿನ್ ಅಬ್ದುಲ್ ಅಜೀಜ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ವಿಮಾನ ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು. ಇತಿಹಾಸದಲ್ಲೇ ಮೆಕ್ಕಾದಲ್ಲಿ ಮೊದಲ ಬಾರಿಗೆ ಇಂಥ ವೈಮಾನಿಕ ಎಚ್ಚರಿಕೆಯ ಸೈರನ್‌ ಮೊಳಗಿದೆ.

ಯೆಮೆನ್‌ನ ಇರಾನ್ ಬೆಂಬಲಿತ ಹೌತಿ ಬಂಡುಕೋರರು ಇತ್ತೀಚೆಗೆ ಸೌದಿ ಅರೇಬಿಯಾವನ್ನು ಗುರಿಯಾಗಿಸಿಕೊಂಡು ಕ್ಷಿಪಣಿ ಮತ್ತು ಮೆಕ್ಕಾದ ಸ್ಥಳೀಯ ಕಾಲಮಾನ ಸಂಜೆ 6:50ಕ್ಕೆ ನಿರ್ಬಂಧಿತ ವಾಯುಪ್ರದೇಶವನ್ನು ಪ್ರವೇಶಿಸಲು ಯತ್ನಿಸುತ್ತಿದ್ದ ಹೌತಿಗಳ ಡ್ರೋನ್‌ ಅನ್ನು ಸೌದಿ ವಾಯು ರಕ್ಷಣಾ ಪಡೆ ಹೊಡೆದುರುಳಿಸಿದೆ ಎಂದು ಸೌದಿ ನೇತೃತ್ವದ ಒಕ್ಕೂಟದ ವಕ್ತಾರ ಮೇಜರ್ ಜನರಲ್ ತುರ್ಕಿ ಅಲ್-ಮಾಲಿಕಿ ಮಾಹಿತಿ ನೀಡಿದ್ದಾರೆ. 2017ರ ಕ್ಷಿಪಣಿ ದಾಳಿಯ ಯತ್ನದ ಬಳಿಕ ಮೆಕ್ಕಾವನ್ನು ಗುರಿಯಾಗಿಸಲು ಹೌತಿಗಳು ನಡೆಸಿದ ಎರಡನೇ ಪ್ರಯತ್ನ ಇದಾಗಿದೆ ಎಂದು ಅವರು ಹೇಳಿದ್ದಾರೆ.

ಮೆಕ್ಕಾ ನಗರದಲ್ಲಿದ್ದ ಅಪಾಯ ತಪ್ಪಿದೆ. ನಾಗರಿಕರು ಸುರಕ್ಷತಾ ಸೂಚನೆಗಳನ್ನು ಪಾಲಿಸಬೇಕು. ಗುಂಪು ಸೇರುವುದು ಮತ್ತು ವಿಡಿಯೋ ಚಿತ್ರೀಕರಣ ಮಾಡುವುದನ್ನು ತಪ್ಪಿಸಿ. ತುರ್ತು ಪರಿಸ್ಥಿತಿಯಲ್ಲಿ 911 ಗೆ ಕರೆ ಮಾಡಿ ಎಂದು ದಾಳಿಯ ಭೀತಿ ದೂರವಾದ ಬಳಿಕ ಸೌದಿ ಸಿವಿಲ್ ಡಿಫೆನ್ಸ್ ಎಕ್ಸ್‌ ಖಾತೆಯಲ್ಲಿ ಮನವಿ ಮಾಡಿದೆ.

ಯೆಮೆನ್‌ನಲ್ಲಿ ಅಂತರ್ಯುದ್ಧ ತೀವ್ರಗೊಂಡ ಬಳಿಕ ಹೌತಿಗಳು ಸೌದಿ ಅರೇಬಿಯಾದ. ಸೌದಿ ತೈಲ ಕೇಂದ್ರಗಳನ್ನು ಗುರಿಯಾಗಿಸಿ ದಾಳಿ ನಡೆಸುತ್ತಿದ್ದಾರೆ. ಸೌದಿಯ ಖಮಿಸ್ ಮುಶೈತ್, ಅಭಾ ಮತ್ತು ತೈಫ್ ಪ್ರದೇಶಗಳ ಮೇಲೆ ನಡೆದ ದಾಳಿಯಲ್ಲಿ 13 ನಾಗರಿಕರು ಗಾಯಗೊಂಡಿ, ಮನೆ ಮತ್ತು ವಾಹನಗಳಿಗೆ ಹಾನಿಯಾಗಿದೆ. ಸೌದಿ ಪಡೆಗಳು ಯೆಮೆನ್‌ನ ತೈಜ್ ನಗರದ ಬಳಿಯ ಬಂಡುಕೋರರ ನೆಲೆಗಳ ಮೇಲೆ ವೈಮಾನಿಕ ದಾಳಿ ನಡೆಸಿವೆ.

Related Posts

Leave a Reply

Your email address will not be published. Required fields are marked *