Monday, September 07, 2026
Menu

ಇಂಡೋನೇಷ್ಯಾದಲ್ಲಿ ಜ್ವಾಲಾಮುಖಿ ಸ್ಫೋಟ

ಇಂಡೋನೇಷ್ಯಾದ ಅನಕ್‌ ಕ್ರಾಕಟೌ ದ್ವೀಪದಲ್ಲಿ ಜ್ವಾಲಾಮುಖಿ ಸ್ಫೋಟಗೊಂಡಿದ್ದು, ದೇಶದ ಪ್ರಮುಖ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸೇರಿದಂತೆ ಎಂಟು ವಿಮಾನ ನಿಲ್ದಾಣಗಳನ್ನು ಬಂದ್‌ ಮಾಡಲಾಗಿದೆ. ಇದರಿಂದ ೧೭೦೦೦೦ ಪ್ರಯಾಣಿಕರಿಗೆ ತೊಂದರೆಯಾಗಿದೆ ಎಂದು ವರದಿಯಾಗಿದೆ.

ಜಾವಾ ಮತ್ತು ಸುಮಾತ್ರಾ ದ್ವೀಪಗಳ ನಡುವೆ ಸುಂದಾ ಜಲಸಂಧಿಯಲ್ಲಿರುವ ಅನಕ್ ಕ್ರಾಕಟೌ ದ್ವೀಪದಲ್ಲಿ ಜ್ವಾಲಾಮುಖಿ ಸ್ಫೋಟಗೊಂಡು ದಟ್ಟ ಹೊಗೆ ಮತ್ತು ಬೂದಿ ಆ ಪ್ರದೇಶದಲ್ಲಿ ಆವರಿಸಿಕೊಂಡಿದೆ. 1,500ಕ್ಕೂ ಹೆಚ್ಚು ವಿಮಾನಗಳ ಸಂಚಾರ ಸ್ಥಗಿತಗೊಳಿಸಲಾಗಿದೆ, ಜಕಾರ್ತ ಸುತ್ತಮುತ್ತಲ ಪ್ರದೇಶದ ಶಾಲೆಗಳನ್ನು ಮುಚ್ಚಲಾಗಿದೆ.

ಜ್ವಾಲಮುಖಿಯಿಂದ ಚಿಮ್ಮುವ ಕಣಗಳು ವಿಮಾನದ ಎಂಜಿನ್‌ಗಳನ್ನು ಹಾನಿಗೊಳಿಸುವ ಸಾಧ್ಯತೆ ಇದೆ, ದೃಷ್ಟಿ ಗೋಚರತೆ ತಗ್ಗುವ ಅಪಾಯವಿದೆ ಹೀಗಾಗಿ ವಿಮಾನ ನಿಲ್ದಾಣಗಳನ್ನು ಬಂದ್‌ ಮಾಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

Related Posts

Leave a Reply

Your email address will not be published. Required fields are marked *