Wednesday, August 26, 2026
Menu

ಪಶು ವೈದ್ಯಾಧಿಕಾರಿ ನೇಮಕ ಅಕ್ರಮ: ಸ್ಟ್ರಾಂಗ್‌ರೂಂ ಡೇಟಾ ಡಿಲಿಟ್‌, ಸ್ಕ್ಯಾನ್‌ ಹಾರ್ಡ್‌ ಡಿಸ್ಕ್‌ ನಾಪತ್ತೆ

ಕೆಪಿಎಸ್ಸಿ ಪಶು ವೈದ್ಯಾಧಿಕಾರಿ ನೇಮಕದಲ್ಲಿ ಅಕ್ರಮ ಪ್ರಕರಣದ ತನಿಖೆ ನಡೆಸಬೇಕಾದರೆ ಪ್ರಶ್ನೆಪತ್ರಿಕೆ, OMR ಶೀಟ್‌ ಇಡುವ ಸ್ಟ್ರಾಂಗ್‌ರೂಂನ ದೃಶ್ಯಾವಳಿಗಳು ಡಿಲಿಟ್‌ ಆಗಿದ್ದು, OMR ಸ್ಕ್ಯಾನ್‌ ಹಾರ್ಡ್‌ ಡಿಸ್ಕ್‌ ನಾಪತ್ತೆಯಾಗಿರುವುದು ಬಯಲಾಗಿದೆ.

ನಿಯಮದಂತೆ ಸ್ಟ್ರಾಂಗ್‌ರೂಂನ ಸಿಸಿಟಿವ ಡೇಟಾವನ್ನು ಪರೀಕ್ಷೆ ಮುಗಿದ ಬಳಿಕ ವರ್ಷದ ತನಕ ಇಟ್ಟಿರಬೇಕು. ಆದರೆ ಇಲ್ಲಿ ನಾಪತ್ತೆಯಾಗಿವೆ. ಪರೀಕ್ಷೆ ಪ್ರಾರಂಭ ಆಗುವಾಗ ಸ್ಟ್ರಾಂಗ್‌ರೂಂ ತೆರೆಯಬೇಕು, ಪ್ರಶ್ನೆಪತ್ರಿಕೆ, OMR ಶೀಟ್‌ ಇಡುವಾಗ ಸಿಸಿಟಿವಿ ಕಣ್ಗಾವಲು ಇರಬೇಕು. ಸ್ಟ್ರಾಂಗ್‌ರೂಂನಲ್ಲಿ ಕ್ಯಾಮರಾ ಇದೆ, ಡೇಟಾ ಡಿಲೀಟ್‌ ಆಗಿದೆ.

ಆರು ತಿಂಗಳ ಡೇಟಾ ಕೂಡ ಸಂಗ್ರಹವಾಗಿಲ್ಲ. ಜೊತೆಗೆ OMR ಶೀಟ್‌ ಸ್ಕ್ಯಾನ್ ಮಾಡಿರುವ ಹಾರ್ಡ್ ಡಿಸ್ಕ್ ನಾಪತ್ತೆಯಾಗಿದೆ. ಪರೀಕ್ಷೆ ಮುಗಿದ ಮೇಲೆ ಎಲ್ಲಾ OMR ಶೀಟ್ ಸ್ಕ್ಯಾನ್ ಮಾಡಲಾಗುತ್ತದೆ. ಪಶುವೈದ್ಯಾಧಿಕಾರಿ ನೇಮಕಾತಿ ಪರೀಕ್ಷೆ ಸಂಬಂಧ ಹಾರ್ಡ್ ಡಿಸ್ಕ್ ನಾಪತ್ತೆಯಾಗಿದೆ. ಹೀಗಾಗಿ ಕೆಪಿಎಸ್ಸಿ ಕೇಂದ್ರ ಕಚೇರಿಯಲ್ಲೇ ಬೃಹತ್‌ ಅಕ್ರಮ ನಡೆದಿರುವುದಕ್ಕೆ ಪುಷ್ಟಿ ಸಿಕ್ಕಂತಿದೆ.

ಪಶುವೈದ್ಯಾಧಿಕಾರಿ ಹುದ್ದೆಗಳ ನೇಮಕಾತಿಯಲ್ಲಿ ಅಕ್ರಮ ಪ್ರಕರಣ ಸಂಬಂಧ ಕೆಪಿಎಸ್ಸಿ ಮಾಜಿ ಅಧ್ಯಕ್ಷ ಶಿವಶಂಕರಪ್ಪ, ಕೆಪಿಎಸ್​ಸಿ ಸದಸ್ಯೆ ಶಾಂತ ಹೊಸಮನಿ ಸೇರಿ 10 ಸದಸ್ಯರು, 45 ಅಧಿಕಾರಿಗಳು, ಸಿಬ್ಬಂದಿಗೂ ಸಿಐಡಿ ಈಗಾಗಲೇ ನೋಟಿಸ್ ನೀಡಿ ವಿಚಾರಣೆಗೆ ಬರಲು ಸೂಚಿಸಿದೆ. ಐಎಎಸ್‌ ಅಧಿಕಾರಿ ಜ್ಞಾನೇಂದ್ರ ಕುಮಾರ್​​ ಮನೆ, ಕಚೇರಿಗೂ ನೋಟಿಸ್ ಅಂಟಿಸಲಾಗಿದೆ. ಉತ್ತೀರ್ಣಗೊಂಡ 329 ಅಭ್ಯರ್ಥಿಗಳಿಗೂ ನೋಟಿಸ್ ಜಾರಿ ಮಾಡಲಾಗಿದೆ.

ಸಿಐಡಿ ಪ್ರತಿದಿನ 10 ಅಭ್ಯರ್ಥಿಗಳ ಹೇಳಿಕೆ ದಾಖಲಿಸುತ್ತಿದೆ. ಆಯ್ಕೆಯಾದ ಅಭ್ಯರ್ಥಿಗಳ OMR ಪ್ರತಿ ಜಪ್ತಿ ಮಡಲಾಗಿದೆ. ಮೂರು ಪರೀಕ್ಷಾ ಕೇಂದ್ರಗಳ ಸಿಸಿಟಿವಿಗಳ ಡಿವಿಆರ್ ವಶಕ್ಕೆ ಪಡೆದು ಎಲ್ಲವನ್ನೂ ಎಫ್‌ಎಸ್‌ಎಲ್‌ಗೆ ಕಳಿಸಲಾಗಿದೆ.

Related Posts

Leave a Reply

Your email address will not be published. Required fields are marked *