Menu

ಸತ್ತಿದ್ದ ಚಿರತೆಯನ್ನು ಸುಟ್ಟ ವೀಡಿಯೊ ವೈರಲ್‌: ಮೂವರ ಬಂಧನ

ತುಮಕೂರು ತಾಲೂಕಿನ ಗೌರಗೊಂಡನಹಳ್ಳಿ ಗೇಟ್‌ ಬಳಿ ಉರುಳಿಗೆ ಸಿಲುಕಿ ಮೃತಪಟ್ಟಿದ್ದ ಚಿರತೆಯನ್ನು ಗ್ರಾಮಸ್ಥರು ಸುಟ್ಟು ಹಾಕಿರುವ ಪ್ರಕರಣ ಸಂಬಂಧ ಮೂವರನ್ನು ಅರಣ್ಯಾಧಿಕಾರಿಗಳು ಬಂಧಿಸಿದ್ದಾರೆ.

ಚಿರತೆಯನ್ನು ಸುಟ್ಟ ವೀಡಿಯೊ ವೈರಲ್‌ ಆದ ಬಳಿಕ ಅರಣ್ಯಾಧಿಕಾರಿಗಳು ಈ ಕ್ರಮ ಕೈಗೊಂಡಿದ್ದಾರೆ. ಚಿರತೆ ಸತ್ತಿರುವುದನ್ನು ಅರಣ್ಯ ಇಲಾಖೆಗೆ ತಿಳಿಸದೆ ಗ್ರಾಮಸ್ಥರು ತಾವೇ ಸುಟ್ಟು ಹಾಕಿರುವ ಕಾರಣಕ್ಕೆ ಅಧಿಕಾರಿಗಳು ಬಂಧಿಸಿದ್ದಾರೆ.

ಗೌರಗೊಂಡನಹಳ್ಳಿಯ ಜಿ.ಡಿ.ಶಿವಕುಮಾರ್, ನಾರಾಯಣಪ್ಪ ಹಾಗೂ ಚಂದ್ರಶೇಖರ್ ಬಂಧಿತ ಆರೋಪಿಗಳು. ನಾರಾಯಣಪ್ಪನ ಹೊಲಕ್ಕೆ ಕಾಡು ಪ್ರಾಣಿಗಳ ಹಾವಳಿ ತಪ್ಪಿಸಲು ಉರುಳು ಹಾಕಿದ್ದ. ಇತ್ತೀಚೆಗೆ ಉರುಳಿಗೆ ಚಿರತೆ ಸಿಕ್ಕು ಮೃತಪಟ್ಟಿತ್ತು. ಬಳಿಕ ಗ್ರಾಮಸ್ಥರು ಚಿರತೆಯನ್ನು ಸುಟ್ಟು ಹಾಕಿದ್ದರು. ಸತ್ತ ಚಿರತೆ ಸುಡುವುದನ್ನು ಗ್ರಾಮದ ಕೆಲವು ಯುವಕರು ವೀಡಿಯೊ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಈ ವೀಡಿಯೊ ಆಧರಿಸಿ ಮೂವರು ಆರೋಪಿಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ.

Related Posts

Leave a Reply

Your email address will not be published. Required fields are marked *