ಇಂಡೋನೇಷ್ಯಾದಲ್ಲಿ ಭೂಕಂಪ ಸಂಭವಿಸಿದ್ದು ಐವರು ಮೃತಪಟ್ಟಿದ್ದಾರೆ. ಭೂಕಂಪದ ಬಳಿಕ ಅಧಿಕಾರಿಗಳು ಸುನಾಮಿ ಎಚ್ಚರಿಕೆ ನೀಡಿ, ಜನ ಸುರಕ್ಷಿತ ಸ್ಥಳಗಳಲ್ಲಿ ಆಶ್ರಯ ಪಡೆಯುವಂತೆ ತಿಳಿಸಿದ್ದಾರೆ. ಇಂಡೋನೇಷ್ಯಾದಲ್ಲಿ 7.7 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದ್ದು, ಇಬ್ಬರು ಸಾವನ್ನಪ್ಪಿದ್ದಾರೆ ಹಾಗೂ ಅಧಿಕಾರಿಗಳು ಸುನಾಮಿ ಎಚ್ಚರಿಕೆ ನೀಡಿದ್ದಾರೆ.
ಬೆಳಿಗ್ಗೆ ಸ್ಥಳೀಯ ಕಾಲಮಾನ 5:58ಕ್ಕೆ 7.7 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದ್ದು, ಇಂಡೋನೇಷ್ಯಾದ ಪೂರ್ವ ನುಸಾ ತೇಂಗಾರಾ ಪ್ರಾಂತ್ಯದ ಎಂಡೆ ನಗರದಿಂದ 68 ಕಿ.ಮೀ ಉತ್ತರ-ವಾಯುವ್ಯಕ್ಕೆ ಕಂಪನದ ಕೇಂದ್ರ ಬಿಂದು ಇದೆ. ಪೂರ್ವ ಇಂಡೋನೇಷ್ಯಾದ ಫ್ಲೋರೆಸ್ ದ್ವೀಪಕ್ಕೂ ಇದು ಅಪ್ಪಳಿಸಿರುವುದಾಗಿ ಅಮೆರಿಕದ ಭೂವೈಜ್ಞಾನಿಕ ಸಮೀಕ್ಷೆ ಇಲಾಖೆ ಮಾಹಿತಿ ನೀಡಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಭೂಕಂಪದಿಂದ ಹಾನಿಗೊಳಗಾದ ಕಟ್ಟಡಗಳ ದೃಶ್ಯಗಳು ವೈರಲ್ ಆಗಿವೆ, ಜಪಾನ್ನಿಂದ ಆಗ್ನೇಯ ಏಷ್ಯಾ ಮತ್ತು ಪೆಸಿಫಿಕ್ ಜಲಾನಯನ ಪ್ರದೇಶದವರೆಗೆ ಹಬ್ಬಿರುವ ಪೆಸಿಫಿಕ್ “ರಿಂಗ್ ಆಫ್ ಫೈರ್”ನಲ್ಲಿ ಇಂಡೋನೇಷ್ಯಾ ಮತ್ತು ನೆರೆಯ ದೇಶಗಆಳಿವೆ. ಅಲ್ಲಿ ಆಗಾಗ ಭೂಕಂಪಗಳು ಸಂಭವಿಸುತ್ತವೆ. 2000ರ ಬಳಿಕ ಇಂಡೋನೇಷ್ಯಾದಲ್ಲಿ 2004ರಲ್ಲಿ ಸುಮತ್ರಾ ಕರಾವಳಿಯ ಬಳಿ ಅಪ್ಪಳಿಸಿದ 9.1 ತೀವ್ರತೆಯ ಕಂಪನ ಬೀಕರ ಸ್ವರೂಪದ್ದಾಗಿತ್ತು. ಆ ಭೂಕಂಪಕ್ಕೆ 2,20,000 ಜನ ಬಲಿಯಾಗಿದ್ದು, ಸುನಾಮಿ ಸೃಷ್ಟಿಸಿತ್ತು.


