Sunday, September 27, 2026
Menu

ಪಾಕ್ ಜೊತೆ ನಿರಂತರ ಸಂಪರ್ಕ: ಕಲ್ಬುರ್ಗಿಯಲ್ಲಿ ಆರೋಪಿ ಪೊಲೀಸ್‌ ವಶಕ್ಕೆ

ಕೇಂದ್ರ ಗುಪ್ತಚರ ಇಲಾಖೆ ಮಾಹಿತಿ ಮೇರೆಗೆ ಭಯೋತ್ಪಾದನೆ ನಿಗ್ರಹ ದಳ  ಹಾಗೂ ಕಲಬುರಗಿ ಪೊಲೀಸ್  ಜಂಟಿ ಕಾರ್ಯಾಚರಣೆ ನಡೆಸುವ ಮೂಲಕ ಪಾಕ್ ಜೊತೆ ನಿರಂತರ ಸಂಪರ್ಕ ಹೊಂದಿದ್ದ ಆರೋಪಿಯನ್ನು ಕಲ್ಬುರ್ಗಿಯಲ್ಲಿ ಬಂಧಿಸಿದೆ.

ಸಮೀರ್ ಬಂಧಿತ ಆರೋಪಿಯಾಗಿದ್ದಾನೆ. ಕಲ್ಬುರ್ಗಿ ನಗರದ ಸಮೀಪದ ಮಾಲಗತ್ತಿ ಗ್ರಾಮದ ಬಳಿ ಆರೋಪಿಯನ್ನು ಬಂಧಿಸಲಾಗಿದೆ. ಉತ್ತರ ಪ್ರದೇಶದ ಎಟಿಎಸ್ ಅಧಿಕಾರಿಗಳು ಹಾಗೂ ಕಲಬುರಗಿ ನಗರ ಪೊಲೀಸ್ ಜಂಟಿಯಾಗಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.

ಬಂಧಿತ ಆರೋಪಿ ಸಮೀರ್, ಉತ್ತರ ಪ್ರದೇಶದ ಸೀತಾಪೂರದವ. ಮಾಲಗತ್ತಿ ಗ್ರಾಮದ ಬಳಿ ಇರುವ ಬೀಫ್ ಸ್ಟೋರೇಜ್ ನಲ್ಲಿ ಕೆಲಸ ಮಾಡುತ್ತಲೇ ಪಾಕ್ ನೊಂದಿಗೆ ನಿರಂತರ ಸಂಪರ್ಕ ಹೊಂದಿದ್ದ. ವಾಟ್ಸ್ ಆಪ್ ಕಾಲ್ , ಫೇಸ್ ಬುಕ್ , ಮುಖಾಂತರ ಪಾಕ್ ಜೊತೆ ಸಂಪರ್ಕ್ ಹೊಂದಿರುವ ಖಚಿತ ಮಾಹಿತಿ ಮೇರೆಗೆ ಉತ್ತರ ಪ್ರದೇಶದ ಎಟಿಎಸ್ ತಂಡ ಹಾಗೂ ಕಲಬುರಗಿ ಪೊಲೀಸ್ ದಾಳಿ ನಡೆಸಿ  ಬಂಧಿಸಿದೆ.  ಆರೋಪಿ ಉಳಿದುಕೊಂಡಿದ್ದ ರೂಮ್ ಜಾಲಾಡಿದ ಪೊಲೀಸ್ ರಿಗೆ ಮ್ಯಾಪ್ ಗಳು ಹಾಗೂ ಇತರ ವಸ್ತುಗಳು ಪತ್ತೆಯಾಗಿದ್ದು ಹೆಚ್ಚಿನ ಮಾಹಿತಿ ಕಲೆ ಹಾಕುತ್ತಿದ್ದಾರೆ.

ಈತನೊಂದಿಗಿದ್ದ ಇನ್ನೊಬ್ಬ ಮಹಮ್ಮದ್ ಸಲ್ಮಾನನ್ನೂ ವಿಚಾರಣೆಗೊಳಪಡಿಸಿದ್ದು,, ಆತನಲ್ಲಿ ಪಾಕ್ ಜೊತೆ ಸಂಪರ್ಕದ ಯಾವುದೇ ಚಟುವಟಿಕೆ ಕಂಡು ಬಂದಿಲ್ಲ.  ಈ ಕುರಿತು ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಂಧಿತ ಸಮೀರ್, ದೇಶ ವಿರೋಧಿ ಚಟುವಟಿಕೆ‌ ನಡೆಸೋ‌ ಖಾತೆಗಳ‌‌ ಸಂರ್ಪಕದಲ್ಲಿದ್ದ. ಆ ಖಾತೆಗಳನ್ನ ಪಾಕ್‌ ಮೂಲದ ವ್ಯಕ್ತಿಗಳು ಹ್ಯಾಂಡಲ್‌ ಮಾಡುತ್ತಿದ್ದರು ಎನ್ನೋ ಅನುಮಾನವಿದೆ. ಹೀಗಾಗಿ ಆತನ ಮೇಲೆ ಪ್ರಕರಣ ದಾಖಲಿಸಿ ಬಂಧಿಸಿದ್ದೆವೆ. ಸೋಷಿಯಲ್‌ ಮೀಡಿಯಾ‌ ಮಾನಿಟಿರಿಂಗ್ ಮಾಡಲಾಗುತಿತ್ತು.  ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾನೆ. ಬಿಎನ್ ಎಸ್ ಕಾಯ್ದೆ 113(3)197 ಕಲಂ ನಡಿ ಕಲಬುರಗಿ ವಿ.ವಿ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದೇವೆ ಎಂದು ಕಲ್ಬುರ್ಗಿ ನಗರ ಪೊಲೀಸ್‌ ಆಯುಕ್ತ ಡಾ> ಶರಣಪ್ಪ ಎಸ್‌ಡಿ ಹೇಳಿದರು.

Related Posts

Leave a Reply

Your email address will not be published. Required fields are marked *