Menu

ಜಾಮರ್‌ ಇದ್ರೂ ಜೈಲಿನಲ್ಲಿ ಆಂಧ್ರದ ಸಿಮ್‌ ಸಕ್ರಿಯ: ಸೋಷಿಯಲ್‌ ಮೀಡಿಯಾ, ನಗ್ನ ಚಿತ್ರ ವೀಕ್ಷಣೆಯಲ್ಲಿ ಪ್ರಜ್ವಲ್‌

ಅತ್ಯಾಚಾರ ಪ್ರಕರಣದಲ್ಲಿ ಬೆಂಗಳೂರು ಸೆಂಟ್ರಲ್‌ ಜೈಲಿನಲ್ಲಿ ಪ್ರಜ್ವಲ್‌ ರೇವಣ್ಣ ಮೊಬೈಲ್‌ ಬಳಸಿಕೊಂಡು ಸೋಷಿಯಲ್‌ ಮೀಡಿಯಾ, ನಗ್ನ ಚಿತ್ರಗಳ ವೀಕ್ಷಿಸುತ್ತಾ ಆರಾಮವಾಗಿ ಕಾಲ ಕಳೆಯುತ್ತಿರುವ ವೀಡಿಯೊ ವೈರಲ್‌ ಆಗಿದೆ.
ಜೈಲಿನಲ್ಲಿ ಜಾಮರ್‌ ಅಳವಡಿಸಲಾಗಿದ್ದರೂ ಆಂಧ್ರದಲ್ಲಿ ಖರೀದಿಯಾಗಿರುವ ಏರ್‌ಟೆಲ್‌ ಸಿಮ್‌ ಪ್ರಜ್ವಲ್‌ ಬಳಸುವ ಮೊಬೈಲ್‌ನಲ್ಲಿ ಸಕ್ರಿಯವಾಗಿದೆ.

ಬೆಂಗಳೂರು ಕೇಂದ್ರ ಕಾರಾಗೃಹದಲ್ಲಿ ದಾಳಿ ನಡೆಸಿದಾಗಲೆಲ್ಲ ಮೊಬೈಲ್‌ಗಳು ಪತ್ತೆಯಾಗುತ್ತಿವೆ. ಆಂಧ್ರ ಪ್ರದೇಶದಲ್ಲಿ ಖರೀದಿಸಿದ ಸಿಮ್ ಕಾರ್ಡ್‌ಗಳನ್ನು ಕೈದಿಗಳಿಗೆ ಪೂರೈಸುವ ಸುಸಂಘಟಿತ ಜಾಲವೊಂದು ಪರಪ್ಪನ ಅಗ್ರಹಾರ ಜೈಲಿನೊಳಗಿದೆ ಎಂದು ಜೈಲು ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ.

ಎಂಟು ತಿಂಗಳಲ್ಲಿ ಈ ಜೈಲಿನಿಂದ 300 ಕ್ಕೂ ಹೆಚ್ಚು ಮೊಬೈಲ್ ಫೋನ್‌ಗಳನ್ನು ವಶಪಡಿಕೊಳ್ಳಲಾಗಿದೆ, ಅವೆಲ್ಲವೂ ಏರ್‌ಟೆಲ್‌ ಸಿಮ್‌ ಕಾಡ್‌ ಹೊಂದಿವೆ. ಆಂಧ್ರ ಪ್ರದೇಶದಲ್ಲಿ ಆ್ಯಕ್ಟಿವ್​ ಮಾಡಲಾಗಿದೆ ಎಂದು ಪೊಲೀಸ್ ಮಹಾನಿರ್ದೇಶಕ (ಕಾರಾಗೃಹಗಳು ಮತ್ತು ತಿದ್ದುಪಡಿ ಸೇವೆಗಳು) ಅಲೋಕ್ ಕುಮಾರ್ ಮಾಹಿತಿ ನೀಡಿದ್ದಾರೆ.

ಜೈಲಿನ ಒಳಗೆ ವೈಫೈ ಆಫ್ ಮಾಡಿಸಿದ್ದರೂ ಏರ್‌ಟೆಲ್ 5G ನೆಟ್‌ ವರ್ಕ್ ಸ್ಪೀಡ್‌ ಆಗಿ ಸಿಗುತ್ತಿರುವ ಕಾರಣ ಪ್ರಜ್ವಲ್ ರೇವಣ್ಣ ಸೋಷಿಯಲ್ ಮೀಡಿಯಾ ಬಳಕೆ ಮಾಡುತ್ತಿದ್ದ ಶಂಕೆಯಿದೆ, ಏರ್‌ಟೆಲ್‌ ಕಂಪೆನಿ ವಿರುದ್ಧವೂ ಕಾನೂನು ಕ್ರಮ ಕೈಗೊಳ್ಳುವುದಾಗಿ ಡಿಜಿಪಿ ತಿಳಿಸಿದ್ದಾರೆ.

ಏರ್‌ಟೆಲ್‌ನವರು ಜೈಲಿನೊಳಗೆ ನೆಟ್‌ವರ್ಕ್ ಸಿಗದಂತೆ ಕ್ರಮ ವಹಿಸುತ್ತಿಲ್ಲ. ಪ್ರಜ್ವಲ್ ಬಳಸುತ್ತಿದ್ದ ಸಿಮ್ ಕಾರ್ಡ್ ಮಾರ್ಚ್ ತಿಂಗಳಿನಿಂದಲೇ ಬಳಕೆಯಲ್ಲಿರುವುದು ತನಿಖೆಯಲ್ಲಿ ಪತ್ತೆಯಾಗಿದೆ. ಕಾನ್‌ಸ್ಟೆಬಲ್‌ವೊಬ್ಬರು 100 ಮೊಬೈಲ್ ಫೋನ್‌ಗಳನ್ನು ಪೂರೈಸಿದ ಬಗ್ಗೆ ತನಿಖೆ ನಡೆದಿದೆ ಎಂದು ಅಲೋಕ್ ಕುಮಾರ್ ಹೇಳಿದ್ದಾಗಿ ಟೈಮ್ಸ್​ ಆಫ್​ ಇಂಡಿಯಾ ವರದಿಯಲ್ಲಿ ತಿಳಿಸಿದೆ.

ಪ್ರಜ್ವಲ್ ರೇವಣ್ಣನನ್ನು ವಿಐಪಿ ಸೆಲ್​​​​​​​​​​ನಿಂದ ಸಾಮಾನ್ಯ ಸಜಾ ಬಂಧಿಗಳ ಸೆಲ್​​​​ಗೆ ಶಿಫ್ಟ್ ಮಾಡಲಾಗಿದೆ. ಪ್ರಜ್ವಲ್​​​​ 20 ಖೈದಿಗಳ ಜೊತೆ ಒಂದೇ ಟಾಯ್ಲೆಟ್ ಬಳಸಬೇಕಿದೆ. ಕಡ್ಡಾಯವಾಗಿ ಯೂನಿಫಾರ್ಮ್ ಹಾಕಿ ಲೈಬ್ರರಿ ಕೆಲಸ ಮಾಡಲು ಸೂಚನೆ ನೀಡಲಾಗಿದೆ.

Related Posts

Leave a Reply

Your email address will not be published. Required fields are marked *