Menu

ರಷ್ಯಾದಿಂದ ತೈಲ ಖರೀದಿ: ಭಾರತ, ಚೀನಾಗಳಿಗೆ ಶೇ 100 ಸುಂಕ ವಿಧಿಸಲು ಅಮೆರಿಕ ಸಿದ್ಧತೆ

ರಷ್ಯಾದಿಂದ ಪೆಟ್ರೋಲಿಯಂ ಉತ್ಪನ್ನಗಳನ್ನು ಖರೀದಿಸುವ ಚೀನಾ ಮತ್ತು ಭಾರತ ಸೇರಿದಂತೆ ಕೆಲವು ದೇಶಗಳಿಂದ ಬರುವ ಸರಕುಗಳ ಮೇಲೆ ಶೇ.100 ಸುಂಕ ಸುಂಕ ವಿಧಿಸಲು ಅಮೆರಿಕ ಸೆನೆಟ್‌ ಬಹುಮತದ ಅನುಮೋದನೆ ನೀಡಿದೆ.

ಈ ಮಾದರಿ ವ್ಯಾಪಾರವು ಉಕ್ರೇನ್ ಯುದ್ಧಕ್ಕೆ ಹಣಕಾಸು ಒದಗಿಸಲು ನೆರವಾಗುತ್ತಿದೆ ಎಂದು ಮಸೂದೆ ಹೇಳುತ್ತದೆ. ಲಿಂಡ್ಸೆ ಒ. ಗ್ರಹಾಂ ಸ್ಯಾಂಕ್ಷನಿಂಗ್ ರಷ್ಯಾ ಅಂಡ್ ಇರಾನ್ ಆಕ್ಟ್ ಆಫ್ 2026 ಎಂದು ಮಸೂದೆಗೆ ಮರು ನಾಮಕರಣ ಮಾಡಲಾಗಿದೆ. ರಷ್ಯಾದ ತೈಲ ಮತ್ತು ಅನಿಲವನ್ನು ಅತಿ ಹೆಚ್ಚು ಆಮದು ಮಾಡಿಕೊಳ್ಳುವ ವಿಶ್ವದ ಐದು ಪ್ರಮುಖ ದೇಶಗಳಿಂದ ಬರುವ ಸರಕುಗಳ ಮೇಲೆ ಶೇ.100 ಸುಂಕ ವಿಧಿಸಲು ಅವಕಾಶ ನೀಡಲಾಗಿದೆ.

ಚೀನಾ, ಭಾರತ, ಅಜರ್‌ಬೈಜಾನ್, ಹಂಗೇರಿ ಮತ್ತು ಸ್ಲೋವಾಕಿಯಾ ರಷ್ಯಾದಿಂದ ತೈಲ ಮತ್ತು ಅನಿಲ ಆಮದು ಮಾಡಿಕೊಳ್ಳುವ ಪ್ರಮುಖ ರಾಷ್ಟ್ರಗಳು. ರಷ್ಯಾ ವಿರುದ್ಧದ ನಿರ್ಬಂಧಗಳ ಜತೆಗೆ, 1996ರ ಇರಾನ್ ನಿರ್ಬಂಧಗಳ ಕಾಯ್ದೆಯ ಅವಧಿಯನ್ನು 2031ರವರೆಗೆ ವಿಸ್ತರಿಸುವ ಅಂಶವನ್ನು ಕೂಡ ಮಸೂದೆ ಒಳಗೊಂಡಿದೆ. ಇರಾನ್‌ನ ಇಂಧನ ವಲಯದಲ್ಲಿ ಹೂಡಿಕೆ ಮಾಡುವ ಕಂಪನಿಗಳ ವಿರುದ್ಧ ಕಾಯ್ದೆಯಡಿ ದಂಡದ ಕ್ರಮ ಕೈಗೊಳ್ಳಲು ಅವಕಾಶವಿದೆ.

ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್, ರಷ್ಯಾದ ಶ್ರೀಮಂತ ಉದ್ಯಮಿಗಳು ಮತ್ತು ಹಣಕಾಸು ಸಂಸ್ಥೆಗಳನ್ನು ಗುರಿಯಾಗಿಸಿಕೊಂಡು ರಷ್ಯಾದ ನಾಯಕರು ಹಾಗೂ ಅಧಿಕಾರಿಗಳ ಮೇಲೂ ನಿರ್ಬಂಧ ವಿಧಿಸಲು ಮಸೂದೆ ಉದ್ದೇಶಿಸಿದೆ. ತಮ್ಮ ನೈಸರ್ಗಿಕ ಅನಿಲದ ಶೇಕಡ 15ಕ್ಕಿಂತ ಕಡಿಮೆ ಪ್ರಮಾಣವನ್ನು ರಷ್ಯಾದಿಂದ ಆಮದು ಮಾಡಿಕೊಳ್ಳುವ ದೇಶಗಳಿಗೆ ಈ ಪ್ರಮಾಣದ ಸುಂಕದಿಂದ ವಿನಾಯಿತಿ ನೀಡಲಾಗಿದೆ.

Related Posts

Leave a Reply

Your email address will not be published. Required fields are marked *