ಉಭಯ ರಾಜ್ಯಗಳೂ ಕಾವೇರಿ ನದಿ ನೀರಿನ ಸಂಕಷ್ಟ ಸೂತ್ರವನ್ನು ಪಾಲಿಸಬೇಕೆಂದು ನ್ಯಾಯಾಧಿಕರಣವು ೧೯೯೩ ರಲ್ಲಿಯೇ ಆದೇಶ ನೀಡಿದ್ದರೂ ಇದನ್ನು ಎರಡೂ ರಾಜ್ಯಗಳು ಸೌಹಾರ್ದಯುತವಾಗಿ ಜಾರಿಗೆ ತರಲು ಇದುವರೆಗೂ ಸಾಧ್ಯವಾಗಿಲ್ಲ.
ಕೃಷಿ ಚಟುವಟಿಕೆಗಳಿಗೆ ಕಾವೇರಿ ನದಿ ನೀರು ಬಳಸುವಂತಿಲ್ಲ . ಇದು ಎರಡು ದಿನಗಳ ಹಿಂದೆ ಕಾವೇರಿ ನದಿ ಪ್ರಾಧಿಕಾರವು ಅಧಿಕಾರಾತ್ಮಕವಾಗಿ ಹೊರಡಿಸಿರುವ ಆದೇಶ. ಕೇಂದ್ರ ಸರ್ಕಾರದ ಸುಪರ್ದಿನಲ್ಲಿ ರಚಿತಗೊಂಡ ಪ್ರಾಧಿಕಾರಕ್ಕೆ ಈ ರೀತಿಯಾಗಿ ರಾಜ್ಯಗಳಿಗೆ ಸೂಚಿಸಿರುವ ಅಧಿಕಾರವಂತೂ ಇದೆ. ಕರ್ನಾಟಕದ ಪಾಲಿಗೆ ಇಂತಹ ಆದೇಶ ಹೊಸದೇನಲ್ಲ. ಆದರೆ ತಮಿಳುನಾಡಿನ ತಂಜಾವೂರು ಮತ್ತು ಸುತ್ತಮುತ್ತಲಿನ ಭಾಗಗಳ ರೈತರು ಈಗ ಪ್ರಾಧಿಕಾರ ನೀಡಿರುವ ಸೂಚನೆಯನ್ನು ಪಾಲಿಸುವುದು ಅನುಮಾನ . ಏಕೆಂದರೆ ತಮಿಳುನಾಡು ಕಾವೇರಿ ಕಣಿವೆಯ ರೈತರು ಕುರುವೈ ಬೆಳೆಯ ನೀರಿನ ವಿಚಾರದಲ್ಲಿ ಇದುವರೆಗೆ ಗುಲಗಂಜಿಯಷ್ಟೂ ಜಲಹಿನ್ನಡೆಯನ್ನು ಒಪ್ಪಿಕೊಂಡಿಲ್ಲ. ಈ ಹಿನ್ನೆಲೆಯಲ್ಲಿ ಕೃಷಿ ಚಟುವಟಿಕೆಗಳಿಗೆ ನೀರು ಬಿಡಲಾಗುವುದಿಲ್ಲವೆಂಬ ಪ್ರಾಧಿಕಾರದ ಫರ್ಮಾನು ಅನ್ನು ತಮಿಳುನಾಡು ತಮಿಳುನಾಡು ಅಷ್ಟು ಸುಲಭಮಾರ್ಗದಲ್ಲಿ ಒಪ್ಪಿಕೊಳ್ಳುವ ಸಾಧ್ಯತೆಗಳಿಲ್ಲ.
ಮಳೆರಾಯನ ಆಟವನ್ನು ಬಲ್ಲವರು ಯಾರು ? ಮಳೆ ಕೈಕೊಟ್ಟ ಸಮಯದಲ್ಲಿ ಜಲಹಂಚಿಕೆ ವಿಚಾರದಲ್ಲಿ ರಾಜ್ಯವು ಸಂಕಷ್ಟದ ಪರಿಸ್ಥಿತಿಯನ್ನು ಎದುರಿಸುವುದು ಈ ಕ್ಷಣದವರೆಗೂ ತಪ್ಪಲಿಲ್ಲ ! ಇಂತಹ ಸಮಯದಲ್ಲಿ ಉಭಯ ರಾಜ್ಯಗಳೂ ಸಂಕಷ್ಟ ಸೂತ್ರವನ್ನು ಪಾಲಿಸಬೇಕೆಂದು ಕಾವೇರಿ ನ್ಯಾಯಾಧಿಕರಣವು ೧೯೯೩ ರಲ್ಲಿಯೇ ಆದೇಶ ನೀಡಿದ್ದರೂ ಇದನ್ನು ಎರಡೂ ರಾಜ್ಯಗಳು ಸೌಹಾರ್ದಯುತವಾಗಿ ಜಾರಿಗೆ ತರಲು ಆಗಿಯೇ ಇಲ್ಲ. ಇದುವರೆಗಿನ ಕಾವೇರಿ ವಿವಾದದ ತೀರ್ಪುಗಳನ್ನು ಸ್ಥೂಲವಾಗಿ ಪರಿಶೀಲಿಸಿದಾಗ, ಬರಗಾಲದ ವೇಳೆ ಮತ್ತು ಮಳೆಗಾಲದ ಸಯಯದಲ್ಲಿ ನೀರಿಲ್ಲದ ಸಮಯದಲ್ಲಿ ಸಂಕಷ್ಟವನ್ನು ಹೇಗೆ ಸರಿಸಮವಾಗಿ ಹಂಚಿಕೊಳ್ಳಬೇಕೆಂಬ ಸ್ಪಷ್ಟತೆ ಇಲ್ಲ.
ರಾಜ್ಯದ ಸುಪರ್ದಿನಲ್ಲಿರುವ ಕೃಷ್ಣರಾಜಸಾಗರ, ಹೇಮಾವತಿ,ಹಾರಂಗಿ ಮತ್ತು ಕಬಿನಿ ಜಲಾಶಯಗಳಲ್ಲಿ ಕಡಿಮೆ ನೀರು ಸಂಗ್ರಹವಾದಾಗ, ಕಡಿಮೆ ನೀರನ್ನು ಹೇಗೆ ಹಂಚಿಕೊಳ್ಳಬೇಕೆಂಬ ಕಡ್ಡಿ ಮುರಿದಂತಹ ತೀರ್ಮಾನನ್ನು ಹೊರಡಿಸಲು ಪ್ರಾಧಿಕಾರದ ಕೈ ಯಲ್ಲಿ ಸಾಧ್ಯವಾಗಿಲ್ಲ. ಇವೆಲ್ಲವೂ ಕಾವೇರಿ ಜಲ ವಿವಾದಕ್ಕೆ ಸಂಬಂಧಿಸಿದ ಜ್ವಲಂತ ಪ್ರಶ್ನೆಗಳೇ . ಅದೇನೆ ಇರಲಿ. ಅದೇನೆ ಆಗಲಿ. ತಮಿಳುನಾಡಿನ ಬೆಳೆಗಳಿಗೆ ಬೇಕಿರುವಷ್ಟು ನೀರನ್ನು ಕರ್ನಾಟಕವು ಕಡ್ಡಾಯವಾಗಿ ಹರಿಸಲೇಬೇಕು ಎಂಬುದು ತಮಿಳುನಾಡಿನ ಬಿಗಿಪಟ್ಟು. ನದಿ ಪ್ರಾಧಿಕಾರವು ಜಲಾಶಯಗಳಿಗೆ ಭೇಟಿ ನೀಡಿ, ಅಲ್ಲಿನ ಪರಿಸ್ಥಿತಿಯನ್ನು ಅವಲೋಕಿಸದೆ ರೈತರ ಕೃಷಿ ಚಟುವಟಿಕೆಗಳಿಗೆ ನೀರು ಬಳಸಬಾರದೆಂದು ಆದೇಶಿಸಿದರೆ ಇದನ್ನು ತಮಿಳುನಾಡು ಸುಪ್ರೀಂಕೋರ್ಟ್ ಮುಂದೆ ಪ್ರಶ್ನೆ ಮಾಡದೆ ಸುಮ್ಮನೆ ಕುಳಿತುಕೊಳ್ಳುವುದು ಸಾಧ್ಯವಿಲ್ಲ. ಎರಡು ದಿನಗಳ ಹಿಂದೆಯಷ್ಟೇ ಮೇಕೆದಾಟು ಯೋಜನೆಗೆ ಸಂಬಂಧಿಸಿದಂತೆ ನಿಲುವಳಿ ಸೂಚನೆಯನ್ನು ಮಂಡಿಸಲು ಮುಂದಾಗಿದ್ದ ತಮಿಳುನಾಡು ಈಗ ತನ್ನ ಕೃಷಿ ಚಟುವಟಿಕೆಗಳಿಗೆ ನೀರಿಲ್ಲ ಎಂದು ಪ್ರಾಧಿಕಾರ ನೀಡಿರುವ ಸೂಚನೆಯನ್ನು ಒಪ್ಪಿಕೊಳ್ಳುವುದು ಅಸಾಧ್ಯ.
ಕರ್ನಾಟಕದ ಜನತೆಗೆ ಇಲ್ಲಿನ ಸರ್ಕಾರ ನೀರಿನ ಕೊರತೆಯನ್ನು ಜನತೆಗೆ ಈಗಾಗಲೇ ತಿಳಿಸಿ ಈ ಸಾರಿ ಕಾವೇರಿ ನೀರನ್ನು ಕುಡಿಯುವ ನೀರಿನ ಉದ್ದೇಶಕ್ಕೆ ಹೊರತುಪಡಿಸಿ ಕೃಷಿ ಹಾಗೂ ಇತರ ಚಟುವಟಿಕೆಗಳಿಗೆ ಬಳಸಲಾಗದೆಂಬ ಹೇಳಿಕೆಯನ್ನು ಸರ್ಕಾರ ಹೇಳಿದೆ. ಜಲಾಶಯಗಳಲ್ಲಿ ನೀರಿನ ಪರಿಸ್ಥಿತಿ ಚಿಂತಾಜನಕವಾಗಿರುವಾಗ ಇಂತಹ ಹೇಳಿಕೆ ಮತ್ತು ಸರ್ಕಾರದ ನಿಲುವು ಸಹಜ ಮತ್ತು ವಾಸ್ತವವೇ ವಿನಹ ಕಪೋಲಕಲ್ಪಿತವಂತೂ ಅಲ್ಲ.


