Menu

ನಾಲ್ಕು ಮದುವೆಯಾದವನ ಜೊತೆ ಲಿವ್‌ ಇನ್‌ ಸಂಬಂಧ: ಮಗುವಾದ ಮೇಲೆ ರೇಪ್‌ ಕೇಸ್‌

supreme court

ಸಹಮತದ ಸಹಬಾಳ್ವೆಯಿಂದ ಹೊರನಡೆಯುವುದು ಕ್ರಿಮಿನಲ್ ಅಪರಾಧವಲ್ಲ, ಅಂತಹ ಸಂಬಂಧದಿಂದ ಜನಿಸಿದ ಮಗುವಿಗೆ ಜೀವನಾಂಶ ಪಡೆಯುವ ಹಕ್ಕಿದೆ ಎಂದು ಸುಪ್ರೀಂಕೋರ್ಟ್‌ ಹೇಳಿದೆ. ಯುವಕನೊಂದಿಗೆ ಲಿವ್-ಇನ್ ಸಂಬಂಧದಲ್ಲಿದ್ದು, ಮಗುವಾದ ಬಳಿಕ ಆತ ಮದುವೆಗೆ ನಿರಾಕರಿಸಿದಾಗ ಯುವತಿ ಅತ್ಯಾಚಾರ ಪ್ರಕರಣ ದಾಖಲಿಸಿದ್ದು, ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಈ ಆದೇಶ ನೀಡಿದೆ.

ನ್ಯಾಯಮೂರ್ತಿ ಬಿ.ವಿ.ನಾಗರತ್ನಾ ಅವರ ಪೀಠದ ಮುಂದೆ ಈ ಕೇಸ್‌ನ ವಿಚಾರಣೆ ನಡೆದಿದ್ದು, ವಿವಾಹ ಬಂಧವಿಲ್ಲದೆಯೇ ಲಿವ್-ಇನ್ ಸಂಬಂಧದಿಂದ ಹೊರನಡೆಯುವುದು ಕ್ರಿಮಿನಲ್ ಅಪರಾಧವಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಒಪ್ಪಿಗೆಯ ಲಿವ್-ಇನ್ ಸಂಬಂಧಗಳು ಮತ್ತು ಕ್ರಿಮಿನಲ್ ಲೈಂಗಿಕ ಅಪರಾಧಗಳ ನಡುವಿನ ವ್ಯತ್ಯಾಸಗಳನ್ನು ಕೋರ್ಟ್ ಒತ್ತಿಹೇಳಿದೆ ಎಂದರು.

ವಯಸ್ಕರು ವಿವಾಹದ ಹೊರಗೆ ಒಟ್ಟಿಗೆ ವಾಸದ ಆಯ್ಕೆ ಮಾಡಿದಾಗ, ಅಂತಹ ಸಂಬಂಧಗಳು ಹೆಚ್ಚಾಗಿ ಅಂತರ್ಗತ ಅಪಾಯಗಳನ್ನು ಹೊಂದಿರುತ್ತವೆ. ಇದನ್ನು ಸಂಬಂಧ ಹೊಂದುವವರು ತಿಳಿದುಕೊಳ್ಳಬೇಕು ಎಂದಿದೆ ಕೋರ್ಟ್​. ಲಿವ್-ಇನ್ ಸಂಬಂಧ ಎನ್ನುತ್ತೀರಾ, ಮದುವೆಯಾಗದೆ ಪುರುಷನ ಮಗುವನ್ನೂ ಪಡೆಯುತ್ತೀರಾ, ಅವನು ಮದುವೆಗೆ ಒಪ್ಪಲಿಲ್ಲ ಅಂದ ಮಾತ್ರಕ್ಕೆ ಅದು ಅತ್ಯಾಚಾರ ಮತ್ತು ಹಲ್ಲೆ ಎಂದು ಹೇಗೆ ಹೇಳುತ್ತೀರಾ ಎಂದು ಕೋರ್ಟ್​ ಪ್ರಶ್ನಿಸಿದೆ. ಒಮ್ಮತದ ಸಂಬಂಧವು ಲೈಂಗಿಕ ದೌರ್ಜನ್ಯದ ಆರೋಪಕ್ಕೆ ಹೇಗೆ ಕಾರಣವಾಗುತ್ತದೆ, ಒಮ್ಮತದ ಸಂಬಂಧವಿದ್ದಾಗ ಅಪರಾಧದ ಪ್ರಶ್ನೆ ಎಲ್ಲಿದೆ ಎಂದು ಪ್ರಶ್ನಿಸಿದ್ದಾರೆ.

ಲಿವ್-ಇನ್ ಸಂಬಂಧಗಳಲ್ಲಿ ವರ್ಷ ಒಟ್ಟಿಗೆ ವಾಸಿಸುತ್ತಿದ್ದರು, ಬೇರ್ಪಟ್ಟಾಗ ಮಹಿಳೆ ಪುರುಷನ ವಿರುದ್ಧ ಲೈಂಗಿಕ ದೌರ್ಜನ್ಯದ ದೂರು ದಾಖಲಿಸುತ್ತಾಳೆ. ಇವೆಲ್ಲ ವಿವಾಹದ ಹೊರಗಿನ ಸಂಬಂಧಗಳ ವೈಪರೀತ್ಯಗಳು ಎಂದು ನ್ಯಾಯಮೂರ್ತಿ ಹೇಳಿದ್ದಾರೆ.

ಅರ್ಜಿದಾರರ ವಕೀಲರು ನ್ಯಾಯಾಲಯಕ್ಕೆ ಮಾಹಿತಿ ನೀಡಿ, ಆರೋಪಿಯು 18 ವರ್ಷದ ವಿಧವೆಯನ್ನು ಭೇಟಿಯಾಗಿ ಮದುವೆಯಾಗುವುದಾಗಿ ಭರವಸೆ ನೀಡಿದ್ದ. ಆ ಸಮಯದಲ್ಲಿ ಆರೋಪಿಗೆ ನಾಲ್ಕು ಹೆಂಡತಿಯರಿದ್ದರು, ಆದರೆ ಮಹಿಳೆಗೆ ಅದರ ಬಗ್ಗೆ ತಿಳಿದಿರಲಿಲ್ಲ ಎಂದು ಹೇಳಿದರು. ಮದುವೆಯಾಗದೆ ಪುರುಷನೊಂದಿಗೆ ವಾಸಿಸಲು ಮತ್ತು ಮಗುವನ್ನು ಹೊಂದಲು ಏಕೆ ಆಯ್ಕೆ ಮಾಡಿಕೊಂಡರು ಎಂದು ಪ್ರಶ್ನಿಸಿದರು.

ಮಗುವಿಗೆ ಜೀವನಾಂಶವನ್ನು ಪಡೆಯಬಹುದು, ಆದರೆ ಲಿವ್-ಇನ್ ಸಂಬಂಧ ಮುರಿಯುವಿಕೆ ಕ್ರಿಮಿನಲ್ ಅಪರಾಧಕ್ಕೆ ಕಾರಣವಾಗುವುದಿಲ್ಲ. ಅಕ್ರಮ ಸಂಬಂಧದಿಂದ ಜನಿಸಿದ ಮಗು ಅಕ್ರಮವಾಗಿರಲು ಸಾಧ್ಯವಿಲ್ಲ ಎಂದಿದ್ದಾರೆ.

Related Posts

Leave a Reply

Your email address will not be published. Required fields are marked *