Wednesday, August 05, 2026
Menu

ಹಿರಿಯೂರಿನಲ್ಲಿ ಹೃದಯಾಘಾತದಿಂದ ನಾಲ್ಕು ವರ್ಷದ ಮಗು ಸಾವು

ಎದೆ ಉರಿ ಎಂದು ಹೇಳಿದ ನಾಲ್ಕು ವರ್ಷದ ಮಗುವನ್ನು ಆಸ್ಪತ್ರೆಗೆ ಕರೆದೊಯ್ಯುತ್ತಿರುವಾಗಲೇ ಮೃತಪಟ್ಟಿರುವ ಘಟನೆ ಚಿತ್ರದುರ್ಗದ ಹಿರಿಯೂರಿನಲ್ಲಿ ನಡೆದಿದೆ.  ಹಿರಿಯೂರು ಬಿಜೆಪಿ ಮಂಡಲ ಅಧ್ಯಕ್ಷ ಅಭಿನಂದನ್ ಪುತ್ರ ವೈಷ್ಣವ್ ಮೃತ ಬಾಲಕ.

ವೈಷ್ಣವ್ ಎದೆ ಉರಿಯುತ್ತಿದೆ ಎಂದು ಪೋಷಕರಿಗೆ ತಿಳಿದ್ದು, ಕೂಡಲೇ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲಿ ವೈಷ್ಣವ್ ಅಸು ನೀಗಿದ್ದಾನೆ, ಹೃದಯಾಘಾತದಿಂದ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ.

ಆರು ವರ್ಷದ ಬಾಲಕ ಹೃದಯಾಘಾತದಿಂದ ಮೃತಪಟ್ಟ ಘಟನೆ ಸಾಗರ ತಾಲೂಕಿನ ಹಾಳಸಸಿ ಗ್ರಾಮದಲ್ಲಿ ಶನಿವಾರ ನಡೆದಿತ್ತು. ಕೊಡನವಳ್ಳಿ ಗ್ರಾಮದ ಗೌತಮ್ ಜೈನ್ ಹಾಗೂ ಶಿಲ್ಪಾ ದಂಪತಿಯ ಪುತ್ರ ತ್ರಿಲೋಕ್ ಜೈನ್ ಹಾಳಸಸಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಒಂದನೇ ತರಗತಿ ಓದುತ್ತಿದ್ದ. ಶನಿವಾರ ಮಧ್ಯಾಹ್ನ ಶಾಲೆ ಅವಧಿ ಮುಗಿಯುವ ಸಮಯ ಕುಸಿದು ಬಿದ್ದಿದ್ದ. ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗ ಮಧ್ಯೆಯೇ ಮೃತಪಟ್ಟಿದ್ದ.

ವಿದ್ಯುತ್‌ ಶಾಕ್‌ಗೆ ನಾಲ್ಕು ವರ್ಷದ ಮಗು ಬಲಿ

ಗ್ರೈಂಡರ್‌ನಿಂದ ವಿದ್ಯುತ್ ಶಾಕ್ ಹೊಡೆದು ನಾಲ್ಕು ವರ್ಷದ ಮಗು ಮೃತಪಟ್ಟಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ಕಲ್ಲಿಗೌಡನಹಳ್ಳಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಪುಟ್ಟಮ್ಮ ಮತ್ತು ಆನಂದ ದಂಪತಿಯ ಪುತ್ರಿ ಮೃತಪಟ್ಟ ಬಾಲಕಿ.

ಮನೆಯಲ್ಲಿ ತಾಯಿ ಗ್ರೈಂಡರ್ ಬಳಸುತ್ತಿದ್ದ ವೇಳೆ ಬಾಲಕಿ ಅದನ್ನು ಮುಟ್ಟಿದ್ದಾಳೆ. ಈ ವೇಳೆ ಗ್ರೈಂಡರ್‌ಗೆ ವಿದ್ಯುತ್ ಪ್ರವಹಿಸಿದ್ದು, ಬಾಲಕಿಗೆ ಶಾಕ್ ಹೊಡೆದಿದೆ. ಅಸ್ವಸ್ಥಗೊಂಡ ಆಕೆಯನ್ನು ಪೋಷಕರು ಗುಂಡ್ಲುಪೇಟೆ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗಿಲ್ಲ.

 

Related Posts

Leave a Reply

Your email address will not be published. Required fields are marked *