ಶಿವಮೊಗ್ಗ: ಕಾಂಗ್ರೆಸ್ನಿಂದ ಹೋದವರನ್ನು ಬಿಜೆಪಿಯವರು ಯೂಸ್ ಅಂಡ್ ಥ್ರೋ ರೀತಿ ನೋಡಿಕೊಳ್ಳುತ್ತಿದ್ದಾರೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ.
ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷವು ಬೇರೆ ಪಕ್ಷಗಳಲ್ಲಿ ನಡೆಯುತ್ತಿರುವ ವಿದ್ಯಮಾನಗಳ ಮೇಲೆ ಅವಲಂಬಿತವಾಗಿ ಸರ್ಕಾರ ನಡೆಸುತ್ತಿಲ್ಲ. ತಮ್ಮ ಪಕ್ಷದ ಗುರಿ ನಾಡಿನ ಜನತೆಯು ಸರ್ಕಾರದ ಮೇಲಿಟ್ಟಿರುವ ವಿಶ್ವಾಸವನ್ನು ಉಳಿಸಿಕೊಳ್ಳುವುದಾಗಿದೆ ಎಂದರು.
ಬಿಜೆಪಿಯವರಿಗೆ ರಾಜ್ಯದ ಜನ ಅಧಿಕಾರ ನೀಡಿದಾಗ ಅವರಲ್ಲಿ ಸರ್ಕಾರ ನಡೆಸುವ ಅನುಭವ ಇರಲಿಲ್ಲ. ಈಗ ವಿರೋಧ ಪಕ್ಷದಲ್ಲಿ ಕೂತು ಕೆಲಸ ಮಾಡಿ ಎಂದು ಜನ ಹೇಳಿದ್ದಾರೆ. ಬಿಜೆಪಿಯಲ್ಲಿನ ಒಳಜಗಳಗಳು ಯಾವತ್ತೂ ಇದ್ದಿದ್ದೇ ಎಂದು ಅವರು ಪ್ರತಿಕ್ರಿಯಿಸಿದರು.
ಬಿಜೆಪಿ ಪಾರ್ಟಿಯವರು ಏನಾದ್ರೂ ಮಾಡಿಕೊಳ್ಳಲಿ. ನಾವು ಅದಕ್ಕೆ ಮಧ್ಯೆ ಪ್ರವೇಶಿಸಲು ಇಷ್ಟವಿಲ್ಲ. ಅದರಿಂದ ರಾಜಕೀಯ ಲಾಭದ ನಿರೀಕ್ಷೆಯೂ ನಮಗಿಲ್ಲ. ಅವರ ಪಾರ್ಟಿಯವರು ಏನಾದ್ರೂ ಮಾಡಿಕೊಳ್ಳಲಿ. ನಾವು ಅದಕ್ಕೆ ಮಧ್ಯೆ ಪ್ರವೇಶಿಸಲು ಇಷ್ಟವಿಲ್ಲ. ಅದರಿಂದ ರಾಜಕೀಯ ಲಾಭದ ನಿರೀಕ್ಷೆಯೂ ನಮಗಿಲ್ಲ ಎಂದು ಅವರು ಹೇಳಿದರು.