Menu

ರಾಜ್ಯ ಬಿಜೆಪಿ ನೂತನ ಸಾರಥಿಯ ತಳಮಳ 

ಕಾಂಗ್ರೆಸ್ ಸರ್ಕಾರದ ವೈಫಲ್ಯಗಳ ಸಂಪೂರ್ಣ ರಾಜಕೀಯ ಲಾಭ ಪಡೆಯುವ ದಿಶೆಯಲ್ಲಿ ದೇವೇಗೌಡ ಮತ್ತು ಕುಮಾರಸ್ವಾಮಿ ರಚಿಸಿರುವ ಚಕ್ರವ್ಯೂಹ ಏನೆಂಬುದೇ ರಾಜ್ಯದ ಬಿಜೆಪಿ ನಾಯಕರಿಗೆ ಇದುವರೆಗೂ ಅರ್ಥವಾಗಿಲ್ಲ.

ರಾಜ್ಯ ಬಿಜೆಪಿ ಸಾರಥಿ ವಿಚಾರವೀಗ ಚರ್ಚೆಯಲ್ಲಿದೆ. ಅಸೆಂಬ್ಲಿ ಚುನಾವಣೆಗೆ ಇನ್ನು ದಿನಾಂಕವೇನೂ ಬಹಳ ದೂರವಿಲ್ಲ. ೨೦೩೧ರಲ್ಲಿ ಪ. ಬಂಗಾಳದಲ್ಲಿ ಮತ್ತೆ ಹೇಗೆ ಅಧಿಕಾರವನ್ನು ತನ್ನ ಕೈವಶ ಮಾಡಿಕೊಳ್ಳಬೇಕೆಂಬುದರ ನೀಲನಕ್ಷೆಯನ್ನು ಸಿದ್ದ ಮಾಡಿಟ್ಟುಕೊಂಡಿರುವ ದಿಲ್ಲಿ ಕಮಲಾಗ್ರಜಪಡೆ, ಕನ್ನಡನಾಡಿನ ಕೇಸರಿ ಪಾಳೆಯದ ಹಣೆಬರಹ ಬರೆಯದೆ ಸುಮ್ಮನೆ ಕುಳಿತುಕೊಂಡಿರಲು ಸಾಧ್ಯವೇ ?

ರಾಜ್ಯ ಬಿಜೆಪಿಯ ಅಗ್ರ ನಾಯಕರು ನೇಪಥ್ಯಕ್ಕೆ ಸರಿದಿರುವುದು ವಾಸ್ವವ. ಯಡಿಯೂರಪ್ಪ ಪ್ರಭಾವ ಮತ್ತು ನಾಯಕತ್ವಕ್ಕೆ ಸರಿಸಮಾನವಾದ ರಾಜಕೀಯ ಶಕ್ತಿ ಇಲ್ಲಿ ಬೆಳೆಯದಿರುವುದು ಪಕ್ಷದ ರಣತಂತ್ರಗಳನ್ನು ಪ್ರತಿ ನಿತ್ಯವೂ ಹಣೆಯುವ ನರೇಂದ್ರ ಮೋದಿ ಮತ್ತು ಅಮಿತ್‌ಷಾ ಅವರಿಗೆ ಬಹಳ ದೊಡ್ಡ ಚಿಂತೆಯಾಗಿ ಕಾಡಿರುವುದು ಸುಳ್ಳಲ್ಲ. ಉತ್ತರ ಭಾರತದಲ್ಲಿ , ಬಿಜೆಪಿಯ ಅಪ್ಪಟ ಹಿಂದುತ್ವದ ಎಲೆಕ್ಷನ್ ಟ್ರಂಪ್ ಕಾರ್ಡ್ ನೂರಕ್ಕೆ ನೂರರಷ್ಟು ಫಲಿಸುವುದೆಂಬ ಭರವಸೆ ಇದೆ. ಆದರೆ ದಕ್ಷಿಣ ಭಾರತದಲ್ಲಿ, ಅದರಲ್ಲಿಯೂ ಕರ್ನಾಟಕದಲ್ಲಿ ಈ ಹಿಂದುತ್ವ ಬಿಜೆಪಿಗೆ ಚುನಾವಣೆಗಳಲ್ಲಿ ಮೆಜಾರಿಟಿ ಪ್ರಮಾಣದಲ್ಲಿ ಓಟು ತಂದು ಕೊಡಲಾಗದು . ಪಕ್ಷದ ದಿಲ್ಲಿ ಚಾಣಕ್ಯರಿಗೆ ಇದು ಗೊತ್ತಿಲ್ಲ ಎಂದಲ್ಲ. ಪಾರ್ಟಿಗಾಗಿ ಅತಿ ಭಯಂಕರವಾಗಿ ದುಡಿಯುವ ಯಡಿಯೂರಪ್ಪ ಅಂತಹ ದೈತ್ಯ ನಾಯಕ ಇಲ್ಲಿಯವರೆಗೂ ಕರ್ನಾಟಕದಲ್ಲಿ ತಲೆ ಎತ್ತಲು ಸಾಧ್ಯವಾಗಿಲ್ಲ.

ಒಟ್ಟಿನಲ್ಲಿ ಬಿಜೆಪಿ ಕಳೆದ ಮೂರು ವರ್ಷಗಳ ಅವಧಿಯಲ್ಲಿ ಸಂಘಟನೆ ಮತ್ತು ತಳಮಟ್ಟದಲ್ಲಿ ಸಾಧಿಸಿದ ಪ್ರಗತಿಯಾದರೂ ಏನು ? ಕೇವಲ ನರೇಂದ್ರ ಮೋದಿ ಸಾಧನೆ ಮತ್ತು ಭಾಷಣಗಳನ್ನೇ ತಮ್ಮ ಬೆನ್ನಿಗೆ ಅಂಟಿಸಿಕೊಂಡು ಪಾರ್ಟಿಯಲ್ಲಿ ಚಲಾವಣೆ ಆಗುತ್ತಿರುವ ನಾಯಕರಿಂದ ಯಾಕೆ ಜನತೆಯ ವಿಶ್ವಾಸವನ್ನು ಆಯಸ್ಕಾಂತದ ಸೂಜಿಗಲ್ಲಿನಂತೆ ತಮ್ಮತ್ತ ಸೆಳೆಯಲು ಆಗುತ್ತಿಲ್ಲ ಮತ್ತು ಆಗಿಲ್ಲ ? ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಮಹಾವೈಫಲ್ಯಗಳೇ ತಮ್ಮ ಮುಂದಿನ ವಿಜಯಕ್ಕೆ ರೆಡ್ ಕಾರ್ಪೆಟ್ ಎಂಬ ಭ್ರಮೆಯಲ್ಲಿರುವವರೆಗೆ ದಾವಣಗೆರೆ ಮತ್ತು ಬಾಗಲಕೋಟೆ ಉಪ ಚುನಾವಣೆ ಒಂದು ಚಡಿಯೇಟು ಆಗಬೇಕಿತ್ತಲ್ಲವೇ ? ಒಟ್ಟಿನಲ್ಲಿ ರಾಜ್ಯದಲ್ಲಿ ಆಡಳಿತ ವಿರೋಧಿ ಅಲೆ ಇದೆ. ಇದು ಬಿಜೆಪಿಯ ಬಹುದೊಡ್ಡ ವಿಜಯಕ್ಕೆ ರಹದಾರಿ ಎಂಬ ಗುಂಗಿನಲ್ಲಿ ರಾಜ್ಯದ ಬಿಜೆಪಿ ನಾಯಕರು ದಂತಗೋಪುರದಲ್ಲಿ ಕುಳಿತು ವಿಹರಿಸುತ್ತಿರುವುದು ಸುಳ್ಳಲ್ಲ. ಆದರೆ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಸರ್ಕಾರದ ವೈಫಲ್ಯಗಳ ಸಂಪೂರ್ಣ ರಾಜಕೀಯ ಲಾಭ ಪಡೆಯುವ ದಿಶೆಯಲ್ಲಿ ದೇವೇಗೌಡ ಮತ್ತು ಕುಮಾರಸ್ವಾಮಿ ರಚಿಸಿರುವ ಚಕ್ರವ್ಯೂಹದ ಮಹಾಸುಳಿ ಬಿಎಸ್‌ವೈ ಅಂತವರಿಗೆ ಮಾತ್ರ ಗೊತ್ತಿರಲು ಸಾಧ್ಯ

ಒಟ್ಟಿನಲ್ಲಿ ರಾಜ್ಯದಲ್ಲಿ ಕೇಡರ್ ಬೇಸ್ಡ್ ಬಿಜೆಪಿಯ ಶಕ್ತಿ ,ಚುನಾವಣೆಗಳಲ್ಲಿ ಭರ್ಜರಿ ವಿಜಯವನ್ನು ಸಾಧಿಸುವ ಪ್ರಮಾಣದಲ್ಲಿಲ್ಲ ! ಇದೇ ವೇಳೆ ಯಡಿಯೂರಪ್ಪ ನಾಯಕತ್ವದ ನೆರಳಿನಲ್ಲಿ ಬಿಜೆಪಿಯ ಕಾರ್ಯ ಚಟುವಟಿಕೆಯೂ ದಿಲ್ಲಿ ಅಗ್ರಜರಿಗೆ ಅಲರ್ಜಿ ! ಬೆಂಗಳೂರು ದಕ್ಷಿಣ, ಮಂಗಳೂರು ಮತ್ತು ಧಾರವಾಡದ ಬೆರಳೆಣಿಕೆಯ ಕ್ಷೇತ್ರಗಳಲ್ಲಿ ಸುನಾಯಾಸವಾಗಿ ಪಾರಂಪಾರಿಕ ಗೆಲುವು ಸಾಧಿಸುವ ಬಿಜೆಪಿ ಈಗ, ಬೀದರ್‌ನಿಂದ ಚಾಮರಾಜನಗರದವರೆಗೆ ಮತ್ತು ಕೋಲಾರದಿಂದ ಕಾರವಾರದವರೆಗೆ ಪಾರ್ಟಿಯನ್ನು ಹೇಗೆ ಸಜ್ಜುಗೊಳಿಸಬೇಕೆಂಬುದರ ಬಗ್ಗೆ ವಿಜಯೇಂದ್ರ ಮತ್ತು ಅಶೋಕ್ ತಲೆಯೇ ಕೆಡಿಸಿಕೊಳ್ಳಲಿಲ್ಲ ! ಈ ಇಂಟೆಲಿಜೆನ್ಸ್ ವರದಿಗಳೂ ಮೋದಿ, ಶಾ ಟೇಬಲ್ ಮೇಲಿದೆ! ಒಟ್ಟಿನಲ್ಲಿ ಇಲ್ಲಿನ ಬಿಜೆಪಿ ಪಾಳೆಯದಲ್ಲಿ ಬೆಕ್ಕಿಗೆ ಗಂಟೆ ಕಟ್ವುವರು ಯಾರು ?

Related Posts

Leave a Reply

Your email address will not be published. Required fields are marked *