Menu

ಮನೆ ಲೀಸ್‌ ಆಫರ್‌ ಮುಂದಿಟ್ಟು ಗ್ರಾಹಕರಿಗೆ 200 ಕೋಟಿ ರೂ. ವಂಚನೆ

ಬೆಂಗಳೂರಿನಲ್ಲಿ ಮನೆ ಲೀಸ್​ಗೆ ನೀಡುವುದಾಗಿ ಗ್ರಾಹಕರಿಗೆ ಭರ್ಜರಿ ಆಫರ್‌ಗಳನ್ನು ನೀಡುವ ಮೂಲಕ ಕಂಪೆನಿಯೊಂದು 200 ಕೋಟಿ ರೂ.ಗೂ ಅಧಿಕ ಹಣ ವಂಚಿಸಿರುವ ಪ್ರಕರಣ ಬಹಿರಂಗವಾಗಿದೆ. ಜಾನ್ಸ್ ಅಸೆಟ್ ಹೆಸರಿನ ಮಿಡಿಯೇಟರ್ ಕಂಪನಿಯು 300ಕ್ಕೂ ಹೆಚ್ಚು ಜನರಿಗೆ ವಂಚಿಸಿದ್ದು, ಮಾಲೀಕ ಪರಾರಿಯಾಗಿದ್ದಾನೆ.

ಕಂಪನಿ ಲೀಸ್‌ಗೆ ಮನೆ ಹುಡುಕುವ ಗ್ರಾಹಕರಿಗೆ ಆಫರ್ ನೀಡಿ, ನಿಮ್ಮ ಲೀಸ್ ಹಣವನ್ನು ನಮಗೆ ಕೊಡಿ, ನಾವು ನಿಮಗಾಗಿ ಮನೆ ಹುಡುಕಿ ಅದರ ಮಾಸಿಕ ಬಾಡಿಗೆಯನ್ನು ನಾವೇ ಪಾವತಿಸುತ್ತೇವೆ ಎಂದು ನಂಬಿಸುತ್ತಿತ್ತು. ಹಣವೂ ಉಳಿಯುತ್ತದೆ, ಬಾಡಿಗೆ ಕೊಡುವುದೂ ತಪ್ಪುತ್ತದೆ ಎಂದು ನಂಬಿ ಸಾರ್ವಜನಿಕರು ತಲಾ 10ರಿಂದ 75 ಲಕ್ಷ ರೂಪಾಯಿವರೆಗೆ ಹಣ ನೀಡಿದ್ದರು. ಆರಂಭದ ಕೆಲವು ತಿಂಗಳು ಬಾಡಿಗೆ ಪಾವತಿಸಿ ನಂಬೊಇಸಿದ ಕಂಪನಿ ನಂತರ ವಂಚನೆ ಶುರು ಹಚ್ಚಿಕೊಂಡಿದೆ.

ಗಾಯತ್ರಿ ಎಂಬ ಸಂತ್ರಸ್ತೆ ವಂಚನೆ ಬಗ್ಗೆ ಮಾಹಿತಿ ನೀಡಿದ್ದು, ತನ್ನಿಂದ ಕಂಪನಿ 37 ಲಕ್ಷ ರೂಪಾಯಿ ಲೂಟಿ ಮಾಡಿದೆ ಎಂದು ಆರೋಪಿಸಿದ್ದಾರೆ. ಮನೆ ಮಾಲೀಕರು ಮನೆ ಖಾಲಿ ಮಾಡಲು ಹೇಳಿದಾಗ ಗಾಯತ್ರಿ ಕಂಪನಿಯ ಬಳಿ ಹಣ ವಾಪಸ್ ಕೇಳಲು ಹೋಗಿದ್ದರು ಕಂಪನಿಯು ಹಣ ನೀಡದೆ ಆ ಮೊತ್ತವನ್ನು ತಮ್ಮಲ್ಲೇ ಇನ್ವೆಸ್ಟ್ ಮಾಡಿದರೆ ತಿಂಗಳಿಗೆ ಶೇ4ರಷ್ಟು ಬಡ್ಡಿ ನೀಡುವುದಾಗಿ ಆಸೆ ತೋರಿಸಿತ್ತು. ಇದನ್ನು ನಂಬಿ ಇನ್ವೆಸ್ಟ್‌ಮೆಂಟ್ ಆಗಿ ಬದಲಾಯಿಸಿಕೊಂಡ ಗಾಯತ್ರಿಗೆ ಎರಡು ತಿಂಗಳು ಹಣ ನೀಡಿ ಆಮೇಲೆ ಕಂಪನಿ ವಂಚಿಸಿದೆ.

ಕಂಪನಿಯನ್ನು ಕ್ಲೋಸ್ ಮಾಡಿ ರ ಮಾಲೀಕ ಸ್ಟೀಫನ್ ಅರ್ಥರ್ ಕೋಟ್ಯಂತರ ರೂಪಾಯಿಯೊಂದಿಗೆ ಎಸ್ಕೇಪ್ ಆಗಿದ್ದಾನೆ. ಸಂತ್ರಸ್ತರು ಇಂದಿರಾನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಹಣ ಕಳೆದುಕೊಂಡು ಕಂಗಾಲಾಗಿ ಠಾಣೆಯ ಅಲೆಯುತ್ತಿದ್ದಾರೆ.

Related Posts

Leave a Reply

Your email address will not be published. Required fields are marked *