Menu

ಕೊಲೆ ಪ್ರಕರಣದ ಹಿಂದೂ ಕೈದಿ ಜೊತೆ ಪ್ರೀತಿಯಾಗಿ ಮದುವೆಯಾದ ಮುಸ್ಲಿಂ ಜೈಲರ್‌

ಕೊಲೆ ಮಾಡಿದ್ದ ಜೈಲು ಸೇರಿದ್ದ ಅಪರಾಧಿ  ಮತ್ತು ಜೈಲು ಅಧಿಕಾರಿ ನಡುವೆ ಪ್ರೀತಿಯಾಗಿ ಶಿಕ್ಷೆ ಅವಧಿ ಮುಗಿದು ಹೊರ ಬಂದ ಹಿಂದೂ  ಅಪರಾಧಿ ಮುಸ್ಲಿಂ  ಮಹಿಳಾ ಜೈಲರ್‌ ಅನ್ನು ಮದುವೆಯಾಗಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.

ಮುಸ್ಲಿಂ ಅಪರಾಧಿ ಸತ್ನಾ ಸೆಂಟ್ರಲ್ ಜೈಲಿನಲ್ಲಿ ಶಿಕ್ಷೆ ಮುಗಿದ ಬಳಿಕ ಜೈಲರ್‌ನನ್ನೇ ಮದುವೆಯಾಗುವುದಾಗಿ ಹಠ ಹಿಡಿದಿದ್ದು, ಕುಟುಂಬದವರು ಒಪ್ಪಿರಲಿಲ್ಲ, ಆದರೂ ಹಿಂದೂ ಸಂಪ್ರದಾಯದಂತೆ ಅದ್ಧೂರಿಯಾಗಿ ಮದುವೆ ಆಗಿದ್ದಾರೆ.

ಸತ್ನಾ ಸೆಂಟ್ರಲ್ ಜೈಲಿನಲ್ಲಿದ್ದಾಗ ಕೈದಿ ಮತ್ತು ಮಹಿಳಾ ಜೈಲು ಅಧಿಕಾರಿ ನಡುವೆ ಪ್ರೀತಿ ಮೂಡಿತ್ತು. ಛತರ್ಪುರ ಜಿಲ್ಲೆಯಲ್ಲಿ ಅವರ ಮದುವೆ ನಡೆದಿದೆ. ಸತ್ನಾ ಕೇಂದ್ರ ಜೈಲಿನಲ್ಲಿ ಸಹಾಯಕ ಸೂಪರಿಂಟೆಂಡೆಂಟ್ ಮತ್ತು ವಾರಂಟ್ ಇನ್-ಚಾರ್ಜ್ ಆಗಿ ಸೇವೆ ಸಲ್ಲಿಸಿದ ಫಿರೋಜಾ ಖಾಟೂನ್, ಜೈಲಿನೊಳಗೆ ತನ್ನ ಅಧಿಕೃತ ಜವಾಬ್ದಾರಿಗಳನ್ನು ನಿರ್ವಹಿಸುವಾಗ ಕೊಲೆ ಅಪರಾಧಿ ಧರ್ಮೇಂದ್ರ ಸಿಂಗ್ ಅವರನ್ನು ಮೊದಲು ಭೇಟಿಯಾಗಿದ್ದರು. ನಂತರ ಅವರಿಬ್ಬರೂ ಪ್ರೀತಿಸತೊಡಗಿದ್ದರು.

2007ರಲ್ಲಿ ಚಾಂದಲಾ ನಗರ ಪರಿಷತ್ತಿನ ಉಪಾಧ್ಯಕ್ಷ ಕೃಷ್ಣ ದತ್ ದೀಕ್ಷಿತ್ ಕೊಲೆ ಪ್ರಕರಣದಲ್ಲಿ ಧರ್ಮೇಂದ್ರ ಸಿಂಗ್‌ಗೆ ಜೈಲು ಶಿಕ್ಷೆಯಾಗಿತ್ತು. ಧರ್ಮೇಂದ್ರ ಸಿಂಗ್ ಅವರ ಉತ್ತಮ ನಡವಳಿಕೆಯಿಂದಾಗಿ ಜೈಲಿನಲ್ಲಿ ಗುಮಾಸ್ತನಾಗಿ ಕೆಲಸಕ್ಕೆ  ನಿಯೋಜಿಸಲಾಗಿತ್ತು. ಈ ವೇಳೆ ಜೈಲಧಿಕಾರಿ ಜೊತೆ ಪ್ರೇಮವಾಗಿದೆ.

ಛತ್ತರ್‌ಪುರ ಜಿಲ್ಲೆಯ ಚಾಂದಲಾ ನಿವಾಸಿ ಧರ್ಮೇಂದ್ರ ಸಿಂಗ್ ಕೊಲೆ ಪ್ರಕರಣದಲ್ಲಿ 14 ವರ್ಷ ಜೈಲಿನಲ್ಲಿ ಕಳೆದಿದ್ದರು. ಉತ್ತಮ ನಡವಳಿಕೆಯ ಆಧಾರದಲ್ಲಿ ನಾಲ್ಕು ವರ್ಷಗಳ ಹಿಂದೆ ಬಿಡುಗಡೆ ಮಾಡಲಾಯಿತು. ಬಿಡುಗಡೆಯಾದ ನಂತರ ಇಬ್ಬರೂ ಸಂಪರ್ಕದಲ್ಲಿದ್ದರು. ಜೈಲಧಿಕಾರಿಯ ಮನೆಯವರು ಈ ಮದುವೆಗೆ ಒಪ್ಪಲಿಲ್ಲ. ಹೀಗಾಗಿ ಧರ್ಮೇಂದ್ರ ಸಿಂಗ್ ಸಂಪ್ರದಾಯದಂತೆ ಮದುವೆ ನಡೆದಿದೆ.

Related Posts

Leave a Reply

Your email address will not be published. Required fields are marked *