Menu

ನಾಗಮಲೆಯಲ್ಲಿ ಚಿರತೆ ದಾಳಿಗೆ ಬಾಲಕ ಬಲಿ

ನಾಗಮಲೆಯಲ್ಲಿ ಬಾಲಕನೊಬ್ಬ ಚಿರತೆ ದಾಳಿಗೆ ಬಲಿಯಾಗಿದ್ದು, ಅರಣ್ಯ ಇಲಾಖೆ ನಿರ್ಲಕ್ಷ್ಯವೇ ಈ ಸಾವಿಗೆ ಕಾರಣ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

ಬೆಂಗಳೂರು ಕಾಮಾಕ್ಷಿಪಾಳ್ಯ ವೃಷಭಾವತಿ ನಗರದ ಹರ್ಷಿತ್ ಗೌಡ ನಾಗಮಲೆಯಲ್ಲಿ ಚಿರತೆ ದಾಳಿಗೆ ಬಲಿಯಾದ ಬಾಲಕ. ನನ್ನ ಸೊಸೆ ಪವಿತ್ರ ತನ್ನ ಇಬ್ಬರು ಮಕ್ಕಳು ಹಾಗೂ ಸ್ನೇಹಿತರ ಜೊತೆ ದೇವರ ದರ್ಶನಕ್ಕೆ ಹೋಗಿದ್ದರು. ಪಾದಯಾತ್ರೆ ಮೂಲಕ ಕಾಡಿನಲ್ಲಿ ಹೋಗುವಾಗ ಮೊಮ್ಮಗನ ಮೇಲೆ ಚಿರತೆ ದಾಳಿ ಮಾಡಿದೆ ಎಂದು ಆತನ ಅಜ್ಜಿ ಮಾಹಿತಿ ನೀಡಿದ್ದಾರೆ.

ಕಾಡಿನೊಳಗೆ ಹೋಗುವಾಗ 200 ರೂ. ಹೆಚ್ಚಿನ ಹಣ ತೆಗೆದುಕೊಂಡು ಒಳಗಡೆ ಬಿಟ್ಟಿದ್ದಾರೆ. ಮಗು ಮೇಲೆ ದಾಳಿಯಾಗಿ ಅರ್ಧ ಗಂಟೆಯಾದರೂ ಯಾವ ಅರಣ್ಯಾಧಿಕಾರಿಯೂ ಬಂದಿರಲಿಲ್ಲ. ಜನ ಜಗಳ ಮಾಡಿದಾಗ ಮೃತದೇಹ ಹುಡುಕಿದ್ದಾರೆ. ಈ ಸಾವಿಗೆ ಅರಣ್ಯ ಇಲಾಖೆ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿದ್ದಾರೆ.

ಕುಟುಂಬದ 10 ಸದಸ್ಯರೊಂದಿಗೆ ಹರ್ಷಿತ್ ನಾಗಮಲೆ ಹಾದಿಯಲ್ಲಿ ತೆರಳುತ್ತಿದ್ದಾಗ, ಇಂಡಿಗನತ್ತ ಸಮೀಪ ಚಿರತೆ ದಾಳಿ ಮಾಡಿದೆ. ಕುಟುಂಬಸ್ಥರ ಕಣ್ಣೆದುರೇ ಬಾಲಕನನ್ನು ಚಿರತೆ ಎಳೆದೊಯ್ದಿದೆ. ನಾವು ನಾಗಮಲೆಗೆ ದೇವರ ದರ್ಶನಕ್ಕೆ ಹೋಗ್ತಿದ್ದೆವು. ಪ್ರಾಣಿಗಳು ಇರುವ ಬಗ್ಗೆ ನಮಗೆ ಯಾರೂ ಕೂಡ ಮಾಹಿತಿ ಕೊಟ್ಟಿಲ್ಲ. ನಮ್ಮ ಜೊತೆಗೆ ಯಾವ ಅರಣ್ಯ ಸಿಬ್ಬಂದಿ ಇರಲಿಲ್ಲ ಎಂದು ಕುಟುಂಬದವರು ಬೇಸರ ವ್ಯಕ್ತಪಡಿಸಿದ್ದಾರೆ. ಮಲೆ ಮಹದೇಶ್ವರನ 77 ಮಲೆಗಳಲ್ಲಿ ಒಂದಾದ ನಾಗಮಲೆ ಮಾರ್ಗದಲ್ಲಿ ಈ ಹಿಂದೆಯೂ ಚಿರತೆ ದಾಳಿ ನಡೆಸಿ ವ್ಯಕ್ತಿಯನ್ನು ಸಾಯಿಸಿತ್ತು.

Related Posts

Leave a Reply

Your email address will not be published. Required fields are marked *