Menu

“ಟೆರಿಯಾ ಬೈ ವಂಡರ್‌ಲಾ” ರೆಸಾರ್ಟ್ ಅನಾವರಣ

ಭಾರತದ ಅತಿದೊಡ್ಡ ಅಮ್ಯೂಸ್ಮೆಂಟ್ ಪಾರ್ಕ್ ನಿರ್ವಹಣಾ ಸಂಸ್ಥೆಯಾದ ವಂಡರ್‌ಲಾ ಹಾಲಿಡೇಸ್  ಬೆಂಗಳೂರಿನ ವಂಡರ್ಲಾ ಪಾರ್ಕ್ ಪಕ್ಕದಲ್ಲೇ ‘ಟೆರಿಯಾ ಬೈ ವಂಡರ್‌ಲಾ’ ಎಂಬ ಹೊಸ ರೆಸಾರ್ಟ್ ಪ್ರಾರಂಭಿಸಿದೆ.

ಇದು ಪ್ರಕೃತಿ ಮತ್ತು ಭೂಮಿಯಿಂದ ಪ್ರೇರಿತವಾದ ವಿನ್ಯಾಸವನ್ನು ಹೊಂದಿರುವ ಅತ್ಯಾಧುನಿಕ ಅರ್ಬನ್ ರೆಸಾರ್ಟ್ ಆಗಿದೆ. ಈ ರೆಸಾರ್ಟ್, ಈ ಹಿಂದಿನ ‘ವಂಡರ್‌ಲಾ ರೆಸಾರ್ಟ್’ ಅನ್ನು ಸಂಪೂರ್ಣವಾಗಿ ಮತ್ತು ವ್ಯವಸ್ಥಿತವಾಗಿ ಹೊಸ ರೂಪಕ್ಕೆ ಬದಲಾಯಿಸಿರುವುದನ್ನು ಸೂಚಿಸುತ್ತದೆ.

ಹಿಂದಿನ ರೆಸಾರ್ಟ್ ಕೇವಲ ಅನುಕೂಲಕ್ಕಾಗಿ ಮತ್ತು ಕಾರ್ಯಕ್ಷಮತೆಗಾಗಿ ಮಾತ್ರ ಸೀಮಿತವಾಗಿದ್ದು, ಮುಖ್ಯವಾಗಿ ಅಮ್ಯೂಸ್ಮೆಂಟ್ ಪಾರ್ಕ್‌ಗೆ  ಬರುವ ಪ್ರವಾಸಿಗರಿಗೆ ಉಳಿದುಕೊಳ್ಳಲು ಮಾತ್ರ ಬಳಕೆಯಾಗುತ್ತಿತ್ತು.  ಹೊಸ ‘ಟೆರಿಯಾ’ ಈ ಹಿಂದಿನ ರೆಸಾರ್ಟ್‌ ಸಂಪೂರ್ಣ ವಿಕಸನವಾಗಿದೆ. ಸುಮಾರು ಎಂಟು ತಿಂಗಳು  ನಡೆದ ಈ ನವೀಕರಣ ಕಾರ್ಯಕ್ಕೆ ಸರಿಸುಮಾರು 18 ಕೋಟಿ ರೂಪಾಯಿ ಹೂಡಿಕೆ ಮಾಡಲಾಗಿದೆ.

ವಂಡರ್‌ ಲಾ  ಹಾಲಿಡೇಸ್  ಕಾರ್ಯನಿರ್ವಾಹಕ ಅಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕ ಅರುಣ್ ಕೆ. ಚಿಟ್ಟಿಲಪ್ಪಿಲ್ಲಿ, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಧೀರನ್ ಟೆರಿಯಾ ವಂಡರಲಾ ಮ್ಯಾನೇಜರ್ ಅಪರೂಪ ರಾಯ್ ಉಪಸ್ಥಿತರಿದ್ದರು.

Related Posts

Leave a Reply

Your email address will not be published. Required fields are marked *