Menu

ಆಳುವ ಸರ್ಕಾರಕ್ಕೆ ಅವಕಾಶ ವಂಚಿತರ ಪರ ಕಾಳಜಿಯಿರಬೇಕು: ಪ್ರಿಯಾಂಕ್ ಖರ್ಗೆ

ಆಳುವ ಸರ್ಕಾರಕ್ಕೆ ಸಾಮಾಜಿಕ ಬದ್ದತೆ ಇರಬೇಕು. ಅವಕಾಶವಂಚಿತರಿಗ ಬಗ್ಗೆ ಕಾಳಜಿ ತೋರಿಸಿ. ಅವರನ್ನು ಮುಖ್ಯವಾಹಿನಿಗೆ ತರುವ ಕೆಲಸವಾಗಬೇಕು ಅದಕ್ಕೆ ಆಳುವವರಿಗೆ ಶ್ರೀಮಂತ ಹೃದಯವಿರಬೇಕು ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅಭಿಪ್ರಾಯಪಟ್ಟರು.

ಕಲಬುರಗಿಯಲ್ಲಿ  ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ವತಿಯಿಂದ ಒಟ್ಟು 499 ಫಲಾನುಭವಿಗಳಿಗೆ ರೂ 263.58 ಲಕ್ಷ ವೆಚ್ಚದಲ್ಲಿ ವಿಕಲಚೇತನರಿಗೆ ಥ್ರಿ ಚಕ್ರವಾಹನ, ಬುದ್ದಿ ಮಾಂದ್ಯ ಮಕ್ಕಳಿಗೆ ಟಿ ಎಲ್ ಎಂ ಕಿಟ್, ವೀಲ್ ಚೇರ್,ಬೆನ್ನು ನೋವಿನವರಿಗೆ ಮೆಡಿಕಲ್ ಕಿಟ್, ವಿಶೇಷ ಚೇತನರಿಗೆ ಬ್ರೈಲ್ ಕಿಟ್ ಟೈಪಿಂಗ್, ಶ್ರವಣ ದೋಷ ಯಂತ್ರ, ಹಾಗೂ ರೀಡಿಂಗ್ ಯಂತ್ರ,ಟೇಬಲ್, ಬ್ಯಾಟರಿ ಆಪರೇಟೇಡ್ ಮೊಟರೈಸಡ್ ಟ್ರೈ ಸೈಕಲ್ ಹಾಗೂ ಇತ್ಯಾದಿ ಸಲಕರಣೆ ವಿತರಣೆ ಮಾಡಿ ಅವರು ಮಾತನಾಡುತ್ತಿದ್ದರು.

ಒಟ್ಟು‌ 499 ಫಲಾನುಭವಿಗಳಲ್ಲಿ 278 ಫಲಾನುಭವಿಗಳು ಸಾಮಾನ್ಯ ವರ್ಗಕ್ಕೆ, 207 ಫಲಾನುಭವಿಗಳು ಎಸ್ ಸಿ ಹಾಗೂ 14 ಫಲಾನುಭವಿಗಳು ಎಸ್ ಟಿ ವರ್ಗಕ್ಕೆ ಸೇರಿದವರಾಗಿದ್ದಾರೆ. 499 ಫಲಾನುಭವಿಗಳಲ್ಲಿ 249 ಪುರುಣ ಹಾಗೂ 274 ಮಹಿಳಾ ಫಲಾನುಭವಿಗಳು ಸೇರಿದ್ದಾರೆ.  ನವೋದ್ಯಮ ಸ್ಥಾಪನೆ ಮಾಡಿದವರಲ್ಲಿ ಕೂಡಾ ದೈಹಿಕವಾಗಿ ವಿಕಲಚೇತನರಾಗಿರುತ್ತಾರೆ. ಅಂತವರು ಸರ್ಕಾರದ ಆರ್ಥಿಕ ಸಹಾಯದಿಂದ ಕೂಡಾ ಸ್ವಾಭಿಮಾನದ ಜೀವನ ನಡೆಸುತ್ತಿದ್ದಾರೆ. ಇದರಿಂದ ವಿಕಲಚೇತನರೂ ಕೂಡಾ ಆರ್ಥಿಕವಾಗಿ ಸಬಲರಾಗುತ್ತಾರೆ ಎಂದರು.

ಈ ಹಿನ್ನೆಲೆಯಲ್ಲಿ ಕಲಬುರಗಿ ಯಲ್ಲಿ ಸೆಂಟರ್ ಆಫ್ ಎಕ್ಸಲೆನ್ಸ್ ಫಾರ್ ಅಸಿಸ್ಟಿವ್ ಟೆಕ್ಬಾಲಜಿ ಕೇಂದ್ರ ತೆರೆಯುವ ಉದ್ದೇಶ ಹೊಂದಿದೆ. ಈ ವಿಚಾರದಕ್ಕಿ ಕೌಶಲಾಭಿವೃದ್ದಿ ಸಚಿವ ಡಾ ಶರಣಪ್ರಕಾಶ ಪಾಟೀಲ್ ಅವರೊಂದಿಗೆ ಚರ್ಚೆ ನಡೆದಿದೆ. ಈ ಕೇಂದ್ರದ ಮೂಲಕ ವಿಕಲಚೇತನರಿಗೆ ವಿಶೇಷ ಚೇತನರಿಗೆ ತರಬೇತಿ ನೀಡಿ ಅವರನ್ನು ಆರ್ಥಿಕವಾಗಿ ಸಬಲರನ್ನಾಗಿಸಿ ಸ್ವಾಭಿಮಾನದ ಜೀವನ ನಡೆಸಲು ಅನುಕೂಲವಾಗುವಂತ ವಾತಾವರಣ ನಿರ್ಮಾಣ ಮಾಡಲಾಗುವುದು ಎಂದು ಸಚಿವರು ವಿವರಿಸಿದರು.

ಗ್ರಾಮೀಣ ಭಾಗದಲ್ಲಿ ವಿದ್ಯಾರ್ಥಿಗಳಿಗೆ ಪರೀಕ್ಷೆಗಳಿಗೆ ಸಿದ್ದವಾಗಲು ಅರಿವು ಕೇಂದ್ರಗಳಲ್ಲಿ ಎಲ್ಲ ರೀತಿಯ ಅನುಕೂಲ ಮಾಡಿಕೊಡಲಾಗಿದೆ.‌ಅತ್ಯಾಧುನಿಕ ತಂತ್ರಜ್ಞಾನ ಬಳಕೆ ಮಾಡಿಕೊಂಡು ಒಂದು‌ ಸಾವಿರ ಅರಿವು ಕೇಂದ್ರಗಳಲ್ಲಿ ಅಲೆಕ್ಸ್ ಡಿವೈಸ್ ವ್ಯವಸ್ಥೆ ಮಾಡಲಾಗಿತ್ತು. ಇದು ವಿದ್ಯಾರ್ಥಿಗಳು ಪ್ರಶ್ನೆ ಕೇಳಿದಾಗ ಅವರ ಯಾವ ಭಾಷೆಯಲ್ಲಿ ಉತ್ತರ ನೀಡುತ್ತಿತ್ತು. ಇದರಿಂದ ವಿದ್ಯಾರ್ಥಿಗಳಿಗೆ ಅನುಕೂಲವಾಗಿದೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.

ಕಲಬುರಗಿ ಜಿಲ್ಲೆಯಲ್ಲಿ ಬ್ಲೈಂಡ್ ಶಾಲೆ ಹಾಗೂ ಡಿಸೇಬಲ್ ಡೇ ಕೇರ್ ಕೇಂದ್ರ ಸಧ್ಯದಲ್ಲೇ ಪ್ರಾರಂಭ ಮಾಡಲಾಗುವುದು. ಈ ಹಿಂದೆ ಖರ್ಗೆ ಸಾಹೇಬರು ನಿರ್ಮಾಣ ಮಾಡಲು ಉದ್ದೇಶಿಸಿದ್ದ ಬ್ಲೈಂಡ್ ಶಾಲೆ ಯಾವುದೇ ಕಾರಣಕ್ಕೆ ನಿಂತು ಹೋಗಿತ್ತು. ಈಗ ಒಂದು ಸುಸಜ್ಜಿತ ಬ್ಲೈಂಡ್ ಶಾಲೆ ಸ್ಥಾಪನೆ ಮಾಡಿ ಬ್ರೈನ್ ಲಿಪಿಯ ಮೂಲಕ ಅಲ್ಲಿ ನೋಂದಾಯಿಸುವ ವಿಶೇಷ ಚೇತನರಿಗೆ ವಿದ್ಯಾಭ್ಯಾಸ ಹೇಳಿಕೊಡಲಾಗುವುದು. ಜೊತೆಗೆ ಡಿಸೇಬಲ್ಡ್ ಡೇ ಕೇರ್ ಸೆಂಟರ್ ನಲ್ಲಿ ವಿಕಲಚೇತನ ಮಕ್ಕಳ ಲಾಲನೆ ಪಾಲನೆ ಮಾಡಲು ಅಗತ್ಯ ಕ್ರಮವಹಿಸಲಾಗುವುದು. ಈ ಎರಡೂ ಯೋಜನೆಗಳು ಮುಂದಿನ ಈ ವರ್ಷದಲ್ಲೆ ಕಾರ್ಯಾರಂಭವಾಗಲಿವೆ ಎಂದು ಭರವಸೆ ನೀಡಿದರು.

ಎಂ ಎಲ್ ಎ ಅಲ್ಲಮಪ್ರಭು ಪಾಟೀಲ್, ಕನೀಜ್ ಫಾತೀಮಾ, ಎಂ ಎಲ್ ಸಿ ತಿಪ್ಪಣ್ಣಪ್ಪ ಕಮಕನೂರು, ಪೂಜ್ಯ ಮಹಾಪೌರ ವರ್ಷಾ ಜಾನೆ, ಮಹಜರ್ ಆಲಂ ಖಾನ್, ಪ್ರವೀಣ್ ಪಾಟೀಲ್ ಹರವಾಳ್, ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್, ಸಿಇಒ ಭಂವರ್ ಸಿಂಗ್ ಮೀನಾ, ಕಾರ್ಪೋರೇಷನ್ ಕಮೀಷನರ್ ಅವಿನಾಶ್ ಶಿಂಧೆ ಸೇರಿದಂತೆ ಹಲವರಿದ್ದರು.

Related Posts

Leave a Reply

Your email address will not be published. Required fields are marked *