Menu

ಯಲಹಂಕ ಹಾಸ್ಟೆಲ್‌ ಬಳಿ ವಿದ್ಯಾರ್ಥಿಗಳಿಗೆ ಗಾಂಜಾ ಮಾರಾಟ: ಇಬ್ಬರ ಬಂಧನ

ಬೆಂಗಳೂರಿನ ಯಲಹಂಕ ಉಪನಗರದ ಬಾಯ್ಸ್ ಹಾಸ್ಟೆಲ್ ಹಿಂಭಾಗ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಮುಹಮ್ಮದ್ ನಿಶಾದ್ ಹಾಗೂ ಆದೇಶ್‌ ಬಂಧಿತರು. 10.5 ಲಕ್ಷದ ರೂ. ಮೌಲ್ಯದ 21 ಕೆಜಿ ಗಾಂಜಾವನ್ನು ವಶಕ್ಕೆ ಪಡೆಯಲಾಗಿದೆ. ಇಬ್ಬರೂ ಹಾಸ್ಟೆಲ್‌ ಹಿಂಭಾಗದಲ್ಲಿ ಕಾಲೇಜು ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ಗಾಂಜಾ ಮಾರಲು ಯತ್ನಿಸುತ್ತಿದ್ದರು.

ಹೊರ ರಾಜ್ಯಗಳಿಂದ ಕಡಿಮೆ ಬೆಲೆಗೆ ಗಾಂಜಾ ತಂದು ಇಲ್ಲಿ ದುಪ್ಪಟ್ಟು ಬೆಲೆಗೆ ಮಾರಾಟ ಮಾಡುತ್ತಿದ್ದರು ಎಂದು ತನಿಖೆ ವೇಳೆ ತಿಳಿದು ಬಂದಿದೆ. ಯಲಹಂಕ ಉಪನಗರ ಪೊಲೀಸ್ ಠಾಣೆಯಲ್ಲಿ ಎನ್‌ಡಿಪಿಎಸ್ ಕಾಯ್ದೆ ಅಡಿ ಕೇಸ್ ದಾಖಲಾಗಿದ್ದು, ವಿಚಾರಣೆ ಮುಂದುವರಿದಿದೆ.

ರೈಲಿನಲ್ಲಿ ಗಾಂಜಾ ಸಾಗಣೆ

ಬಳ್ಳಾರಿ ರೈಲ್ವೆ ಪೊಲೀಸರು ರೈಲಿನಲ್ಲಿ ಸಾಗಾಟ ಮಾಡ್ತಿದ್ದ 40.49ಕೆಜಿ ಗಾಂಜಾ ವಶಕ್ಕೆ ಪಡೆದಿದ್ದಾರೆ. ವಾಸ್ಕೋ ಡ ಗಾಮಾ ಶಾಲಿಮರ್ ಅಮರಾವತಿ ಎಕ್ಸಪ್ರೆಸ್ ರೈಲಿನಲ್ಲಿ ಗಾಂಜಾ ಸಾಗಾಟ ಮಾಡಲಾಗುತ್ತಿತ್ತು. ಶ್ವಾನದಳದ ಮೂಲಕ ಖಚಿತ ಮಾಹಿತಿ ಆಧರಿಸಿ ಪೊಲೀಸರು ಗಾಂಜಾ ವಶಕ್ಕೆ ಪಡೆದಿದ್ದಾರೆ.

ಆರೋಪಿಗಳು ಜನರಲ್ ಬೋಗಿಯ ಸೀಟ್ ಕೆಳಗಡೆ ಪ್ಯಾಕ್ ಮಾಡಿ ಗಾಂಜಾ ಇಟ್ಟಿದ್ದರು. ಶ್ವಾನದಳದ ಮೂಲಕ 19 ಬಂಡಲ್ ನಲ್ಲಿದ್ದ 20.24 ಲಕ್ಷ ಮೌಲ್ಯದ 40.49 ಕೆಜಿ ಗಾಂಜಾ ವಶಕ್ಕೆ ಪಡೆಯಲಾಗಿದೆ. Aರೋಪಿಗಳು ಪರಾರಿಯಾಗಿದ್ದು, ತನಿಖೆ ಮುಂದುವರಿದಿದೆ.

 

Related Posts

Leave a Reply

Your email address will not be published. Required fields are marked *